Webdunia - Bharat's app for daily news and videos

Install App

ರಾಜ್ಯದ ಲೋಕಾಯುಕ್ತ ಸಂಸ್ಥೆ ಮುಚ್ಚುವುದೇ ಒಳಿತು: ನ್ಯಾ.ಸಂತೋಷ್ ಹೆಗ್ಗಡೆ

Webdunia
ಶನಿವಾರ, 27 ಜೂನ್ 2015 (17:24 IST)
ಭ್ರಷ್ಟಾಚಾರವಿರುವ ಪ್ರಕರಣವೊಂದನ್ನು ರಾಜ್ಯದ ಮುಖ್ಯ ಲೋಕಾಯುಕ್ತ ನ್ಯಾ. ವೈ.ಭಾಸ್ಕರ್ ರಾವ್ ಅವರು ಸಿಸಿಬಿ ಸಂಸ್ಥೆಗೆ ವಹಿಸಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯ ಲೋಕಾಯುಕ್ತ ನ್ಯಾಯಾಮೂರ್ತಿ ಸಂತೋಷ್ ಹೆಗ್ಗಡೆ ಅವರು ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿನ ಲೋಕಾಯುಕ್ತ ಇಲಾಖೆಯನ್ನು ನಡೆಸುವುದಕ್ಕಿಂತ ಮುಚ್ಚುವುದೇ ಒಳ್ಳೆಯದು ಎಂದಿದ್ದಾರೆ. 
 
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರದಲ್ಲಿಯೇ ಅತ್ಯಂತ ಬಲಷ್ಠ ಹಾಗೂ ಶ್ರೇಷ್ಠ ಲೋಕಾಯುಕ್ತ ಸಂಸ್ಥೆ ಇರುವುದು ಕರ್ನಾಟಕ ರಾಜ್ಯದಲ್ಲಿ ಮಾತ್ರ. ಆದ್ದರಿಂದ ಅದನ್ನು ಮುಚ್ಚುವುದೇ ಒಳ್ಳೆಯದು. ಏಕೆದಂರೆ ರಾಜ್ಯದಲ್ಲಿ ಮುಖ್ಯ ಲೋಕಾಯುಕ್ತರೇ ಭ್ರಷ್ಟಾಚಾರ ಪ್ರಕರಣವೊಂದನ್ನು ಎಫ್ಐಆರ್ ಕೂಡ ಇಲ್ಲದೆ ಅದರಲ್ಲೂ ಸರ್ಕಾರದ ಪೊಲೀಸ್ ಇಲಾಖೆಯ ಅಂಗಸಂಸ್ಥೆಯಾಗಿರುವ ಸಿಸಿಬಿಗೆ ವಹಿಸಿದ್ದಾರೆ. ಅಲ್ಲದೆ ಉಪ ಲೋಕಾಯುಕ್ತರ ಗಮನಕ್ಕೆ ಬಾರದೆ ತನಿಖೆಗೆ ಆದೇಶಿಸಿದ್ದಾರೆ. ಅದು ಅಕ್ಷರಶಃ ತಪ್ಪು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿ ತನಿಖೆಗೆ ನಡೆಸಬೇಕು. 
 
ಭಾಸ್ಕರ್ ರಾವ್ ಅವರು ಸ್ವಂತತ್ರ ಅಧಿಕಾರಿಯಾಗಿದ್ದರೂ ಕೂಡ ಅವರ ವಿರುದ್ಧವೇ ಆರೋಪವಿರುವ ಹಿನ್ನೆಲೆಯಲ್ಲಿ ವಿವಾದಕ್ಕೀಡಾಗಿರುವ ಪ್ರಕರಣವನ್ನು ಮತ್ತೆ ಅವರೇ ಮತ್ತೊಂದು ತನಿಖೆಗೆ ಆದೇಶಿಸುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರವೇ ಮುದಿನ ಕ್ರಮ ಕೈಗೊಳ್ಳಲಿ ಎಂದರು. 
 
ಇದೇ ವೇಳೆ, ನ್ಯಾ.ಭಾಸ್ಕರ್ ರಾವ್ ಅವರು ಸಿಸಿಬಿ ತನಿಖೆಗೆ ವಹಿಸಿದ್ದಾರೆ. ಆದ್ದರಿಂದ ಸಿಸಿಬಿ ಜಂಟಿ ಆಯುಕ್ತ ಚಂದ್ರಶೇಖರಯ್ಯ ಅವರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ಆದರೆ ನಾವಿದ್ದ ಕಾಲದಲ್ಲಿ ಚಂದ್ರಶೇಖರಯ್ಯ ಅವರ ವಿರುದ್ಧ ತನಿಖೆ ನಡೆಸಿದ್ದೆವು. ಪ್ರಸ್ತುತವೂ ಕೂಡ ತನಿಖೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಂದ್ರಶೇಖರಯ್ಯ ಮತ್ತೊಂದು ಪ್ರಕರಣವನ್ನು ಎಷ್ಟು ಪರಿಣಾಮಕಾರಿಯಾಗಿ ತನಿಖೆ ನಡೆಸುತ್ತಾರೆ ಎಂಬುದು ಇಲ್ಲಿ ಮತ್ತೊಂದು ಪ್ರಶ್ನೆಯಾಗಿದೆ ಎಂದರು.  
 
ಬಳಿಕ, ರಾಜ್ಯದ ಲೋಕಾಯುಕ್ತ ಸಂಸ್ಥೆ ಪ್ರಸ್ತುತ ಕೇವಲ ಸರ್ಕಾರಿ ನೌಕರರ ಮೇಲೆ ಮಾತ್ರ ದಾಳಿ ನಡೆಸುತ್ತಿದೆ. ಇತರರ ಮೇಲೆ ದಾಳಿಗಳು ನಡೆಯುತ್ತಿಲ್ಲ. ಯಾಕೆ ಅವರೆಲ್ಲ ಭ್ರಷ್ಟಾಚಾರಿಗಳಲ್ಲವೇ ಎಂದು ಪ್ರಶ್ನಿಸಿರುವ ಅವರು, ಸಂಸ್ಥೆಯು ಹೀಗೆಯೇ ನಡೆಯುತ್ತಿದ್ದರೆ, ಜನರು ಸಂಸ್ಥೆಯ ಮೇಲೆ ಇಟ್ಟಿರುವ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಆದ್ದರಿಂದ ಪ್ರಕರಣವನ್ನು ಸರ್ಕಾರವೇ ಖುದ್ದು ಸಿಬಿಐಗೆ ವಹಿಸಿಲಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.  
 
ನಿನ್ನೆ ರಾಜ್ಯದ ಮುಖ್ಯ ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ಅವರು ಭ್ರಷ್ಟಾಚಾರ ಪ್ರಕರಣವನ್ನು ಸಿಸಿಬಿಗೆ ವಹಿಸಿ ಆದೇಶಿಸಿದ್ದರು. ಅಲ್ಲದೆ ಇದಕ್ಕೆ ಉಪ ಲೋಕಾಯುಕ್ತರಿಗೂ ಸಮ್ಮತಿ ಇದೆ ಎಂದಿದ್ದರು. ಆದರೆ ಉಪ ಲೋಕಾಯುಕ್ತ ಸುಭಾಷ್ ಬಿ.ಅಡಿ ಅವರು ಪ್ರತಿಕ್ರಿಯಿಸಿ ನನ್ನ ಸಲಹೆ ಪಡೆದಿಲ್ಲ ಎಂದಿದ್ದರು. ಇದರಿಂದ ಲೋಕಾಯುಕ್ತ ಸಂಸ್ಥೆಯಲ್ಲಿನ ಕಳ್ಳಾಟ ಬಯಲಾಗಿತ್ತು. ಆದ್ದರಿಂದ ವಿವಾದ ತಲೆದೋರಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments