ಬೆಸ್ಕಾಂನಿಂದ ಆಪ್ ಬಿಡುಗಡೆ

Webdunia
ಗುರುವಾರ, 23 ಡಿಸೆಂಬರ್ 2021 (15:54 IST)
ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹುಡುಕಲು ಸುಲಭವಾಗುವಂತೆ 'ಇವಿ ಮಿತ್ರ' ಎನ್ನುವ ಅಪ್ಲಿಕೇಷನ್‌ ಒಂದನ್ನು ಬೆಸ್ಕಾಂ ಬಿಡುಗಡೆ ಮಾಡಿದೆ.
 
ಬೆಸ್ಕಾಂ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಎಲೆಕ್ಟ್ರಿಕಲ್ ವಾಹನ ಚಾರ್ಜಿಂಗ್‌ಗಾಗಿ ನಗರದಲ್ಲಿ 74 ಸ್ಥಳಗಳಲ್ಲಿ 136 ಪೋರ್ಟ್ಸ್‌ಗಳನ್ನು ಹೊಂದಿದೆ.ಸ್ಟೇಷನ್‌ಗಳು ಬೆಳಗ್ಗೆ 6 ರಿಂದ ರಾತ್ರಿ 10ರವರೆಗೂ ತೆರೆದಿರುತ್ತವೆ, ಆದರೆ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿರುವವರಿಗೆ ಈ ಮಾಹಿತಿ ಲಭ್ಯವಿಲ್ಲ. ಈ ಅಪ್ಲಿಕೇಷನ್ ಮೂಲಕ ವಾಹನಗಳ ಚಾರ್ಜಿಂಗ್ ಕುರಿತು ಅರಿವು ಮೂಡಿಸಲು ನೆರವಾಗುತ್ತದೆ. ಸ್ಟೇಷನ್‌ಗಳಲ್ಲಿ AC001 ಹಾಗೂ DC001 ಚಾರ್ಜರ್ ಮಾಡೆಲ್‌ಗಳು ಲಭ್ಯವಿದೆ.
 
ಇವಿ ಮಿತ್ರ ಅಪ್ಲಿಕೇಷನ್ ಆಂಡ್ರಾಯ್ಡ್‌ ಹಾಗೂ ಐಒಎಸ್ ಮೊಬೈಲ್‌ಗಳಲ್ಲಿ ಲಭ್ಯವಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ನಗರದಲ್ಲಿ 300 ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಾಟ್ಸ್‌ಆ್ಯಪ್‌ನ ಗೌಪ್ಯತೆ ಉಲ್ಲಂಘನೆಯಾದರೆ ಸಹಿಸುವುದಿಲ್ಲ: ಮೆಟಾ ಸಂಸ್ಥೆಗೆ ಸುಪ್ರೀಂ ಖಡಕ್‌ ವಾರ್ನಿಂಗ್‌

ಬಾಂಗ್ಲಾದೇಶ ಅಕ್ರಮ ವಲಸಿಗರ ವಿರುದ್ಧ ಕ್ರಮ ಯಾಕಿಲ್ಲ: ಸಿಟಿ ರವಿ

ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಕೇಸ್: ಮಹತ್ವದ ಹೇಳಿಕೆ ನೀಡಿದ ಗೃಹಸಚಿವ ಪರಮೇಶ್ವರ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments