ಬೆಂಗಳೂರು: ಬೆಂಗಳೂರಿನಲ್ಲಿ ನೀರಿನ ತಾಪತ್ರಯ ಹೆಚ್ಚಾದ ಮೇಲೆ ಖಾಸಗಿ ನೀರಿನ ಟ್ಯಾಂಕರ್ ಗಳು ಬಾಯಿಗೆ ಬಂದಂತೆ ನೀರಿನ ಬೆಲೆ ಹೆಚ್ಚಿಸಿದ್ದಾರೆ. ಇದರಿಂದಾದಿ ಜನ ಸಾಮಾನ್ಯರಿಗೆ ನೀರು ತರಿಸಿಕೊಳ್ಳಲೂ ಕಷ್ಟವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಬೆಂಗಳೂರು ಸ್ಥಳೀಯಾಡಳಿತ ದರ ನಿಗದಿಪಡಿಸಿದೆ. ಅದರ ವಿವರ ಇಲ್ಲಿದೆ.
ನೀರಿನ ತಾಪತ್ರಯ ಹೆಚ್ಚಾದ ಮೇಲೆ ಟ್ಯಾಂಕರ್ ಮಾಲಿಕರೂ 500 ರಿಂದ 2000 ರೂ.ವರೆಗೆ ಟ್ಯಾಂಕರ್ ನೀರಿನ ಬೆಲೆ ಹೆಚ್ಚಿಸಿದ್ದಾರೆ. ಇದಕ್ಕೆ ಕಡಿವಾಣ ಹಾಕುವವರೇ ಇಲ್ಲ ಎಂಬಂತಾಗಿತ್ತು. ಇದರ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ಕೇಳಿಬಂದಿತ್ತು. ಕೊನೆಗೂ ಈಗ ಸರ್ಕಾರವೇ ದರ ನಿಗದಿಪಡಿಸಿದೆ.
ಅದರಂತೆ ನೀರಿನ ಟ್ಯಾಂಕರ್ ಬೆಲೆ ವಿವರ ಇಲ್ಲಿದೆ ನೋಡಿ.
6 ಸಾವಿರ ಲೀ. ಟ್ಯಾಂಕರ್ ಗೆ 5 ಕಿ.ಮೀ. ವ್ಯಾಪ್ತಿಯೊಳಗಾದರೆ 600 ರೂ. ನಿಗದಿ.
10 ಕಿ.ಮೀ. ವ್ಯಾಪ್ತಿಯೊಳಗೆ 6 ಸಾವಿರ ಲೀಟರ್ ನೀರಿಗೆ 750 ರೂ.
5 ಕಿ.ಮೀ. ವ್ಯಾಪ್ತಿಯೊಳಗೆ 8 ಸಾವಿರ ಲೀ. ನೀರಿಗೆ 700 ರೂ.
10 ಕಿ.ಮೀ. ವ್ಯಾಪ್ತಿಯೊಳಗೆ 8 ಸಾವಿರ ಲೀಟರ್ ನೀರಿಗೆ 850 ರೂ.
5 ಕಿ.ಮೀ. ವ್ಯಾಪ್ತಿಯೊಳಗೆ 12 ಸಾವಿರ ಲೀ. ನೀರಿಗೆ 1000 ರೂ.
10 ಕಿ.ಮೀ. ವ್ಯಾಪ್ತಿಯೊಳಗೆ 12 ಸಾವಿರ ಲೀ. ನೀರಿಗೆ 1200 ರೂ.
ಜಿಎಸ್ ಟಿಯೂ ಸೇರಿಸಿ ಈ ದರ ನಿಗದಿಪಡಿಸಲಾಗಿದೆ. ಇದಕ್ಕಿಂತ ಜಾಸ್ತಿ ಹಣ ವಸೂಲಿ ಮಾಡುತ್ತಿದ್ದರೆ ತಕ್ಕ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಟ್ಯಾಂಕರ್ ಮಾಫಿಯಾಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಡಿಸಿಎಂ ಡಿಕೆ ಶಿವಕುಮಾರ್ ಟ್ಯಾಂಕರ್ ಮಾಲಿಕರೊಂದಿಗೆ ಸಭೆ ನಡೆಸಿ ದರ ನಿಗದಿ ನೋಂದಣಿ ಮಾಡಿಕೊಳ್ಳಲು ಸೂಚಿಸಲಾಗಿತ್ತು. ಬೆಂಗಳೂರು ನಗರದಲ್ಲಿ 3 ಸಾವಿರಕ್ಕೂ ಹೆಚ್ಚು ಟ್ಯಾಂಕರ್ ಗಳಿದ್ದು, ಇದೀಗ ನೋಂದಣಿಯಾಗಿದ್ದು ಕೇವಲ 219 ಟ್ಯಾಂಕರ್ ಗಳು ಮಾತ್ರ.