Webdunia - Bharat's app for daily news and videos

Install App

ಬೆಂಗಳೂರು-ಮೈಸೂರು ರಸ್ತೆ ‘ಪ್ರತಾಪ’ ಕೊಚ್ಚಿಕೊಳ್ಳುವುದಲ್ಲ: ಸಿಂಹಗೆ ಕುಟುಕಿದ ಹಳ್ಳಿಹಕ್ಕಿ

Webdunia
ಭಾನುವಾರ, 22 ಆಗಸ್ಟ್ 2021 (14:16 IST)
ಬೆಂಗಳೂರು ಮತ್ತು ಮೈಸೂರು 6 ಪಥ ರ ಸ್ತೆ ಅಭಿವೃದ್ಧಿ ಸಂಸದ ಪ್ರತಾಪ್ ಸಿಂಹ ಅವರ ಸಾಧನೆಯಲ್ಲ. ಇದು ಹಿಂದೆ ಇದ್ದ ಯುಪಿಎ ಮತ್ತು ಸಿದ್ದರಾಮಯ್ಯ ಅವರ ಸಾಧನೆ ಎಂದು ಎಚ್.ವಿಶ್ವನಾಥ್ ಕುಟುಕಿದ್ದಾರೆ.
ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮದೇ ಪಕ್ಷದ ಸಂಸದ ಪ್ರತಾಪ್ ಸಿಂಹ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಪ್ರತಾಪ್ ಸಿಂಹ ಹೇಳಿಕೆ ಸರಿ ಅಲ್ಲ. ನಾನೇ ಮಾಡಿಬಿಟ್ಟೆ ಅನ್ನೋದು ಸರಿ ಅಲ್ಲ. ಪಾಪ ಹೆಣ್ಣು ಮಗಳು ಹೇಳಿದ್ದು ಸರಿ ಇದೆ. ಪ್ರತಾಪ್ ಸಿಂಹ ನಾನು‌ ಮಾಡಿದೆ ನಾನು ಕಡಿದು ಹಾಕಿದೆ ಅಂತ ಹೇಳುವುದು ಸರಿ ಅಲ್ಲ. ಈ ಯೋಜನೆ 10-12 ವರ್ಷದ ಹಿಂದೆ ಆಗಿದ್ದು ಎಂದು ವಿಶ್ವನಾಥ್ ವಿವರಿಸಿದರು.
ಸುಳ್ಳು ಎಷ್ಟು ದಿನ ಅಂತಾ ಹೇಳುತ್ತೀರಾ? ಸುಳ್ಳು ಹೇಳಬಾರದು. ಇದು ನಾನು ಧೃವನಾರಾಯಣ್ ಮತ್ತು ಮಾಜಿ ಸಂಸದೆ ರಮ್ಯಾ ಸಂಸದರಾಗಿದ್ದಾಗ ಆಗಿದ್ದಾಗ ಆರಂಭವಾದ ಕೆಲಸ. ನೀವು ಹೊಸದಾಗಿ ತಂದಿದ್ದರೆ ಬೇಕಾದರೆ ಹೇಳಿ ಎಂದು ವಿಶ್ವನಾಥ್ ತಿರುಗೇಟು ನೀಡಿದರು.
ಉಂಡುವಾಡಿ ಕುಡಿಯುವ ನೀರು ಯೋಜನೆ ಕೂಡಾ ಜಿಟಿ ದೇವೇಗೌಡ ಸಾಧನೆ ಅಲ್ಲ. ಅದನ್ನು ನಾನು ಮಾಡಿದ್ದು. ನೀವು ಎಲ್ಲಿದ್ದೀರಿ ಮಿಸ್ಟರ್ ಜಿಟಿ ದೇವೇಗೌಡ? ಎಂದು ವಿಶ್ವನಾಥ್ ಪ್ರಶ್ನಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿ ನಗರ ನಕ್ಸಲರಂತೆ ಮಾತನಾಡುತ್ತಿದ್ದಾರೆ

ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ನಮೂದಿಸಿ: ಬಿ.ವೈ.ವಿಜಯೇಂದ್ರ

ಜುಬೀನ್ ಗರ್ಗ್ ಸಾವಿನ ಸುದ್ದಿ ಕೇಳಿ ಆಘಾತಕ್ಕೀಡಾಗಿದ್ದೇನೆ, ಪ್ರಧಾನಿ ಮೋದಿ ಸಂತಾಪ

ಉತ್ತರಾಖಂಡ ಚಮೋಲಿಯಲ್ಲಿ ಇಂದು ಮತ್ತೇ ಐದು ಶವ ಪತ್ತೆ, ಮೃತರ ಸಂಖ್ಯೆ 7ಕ್ಕೆ ಏರಿಕೆ

ಪಾಕ್‌ ವಿರುದ್ಧದ 1965ರ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ರಾಜನಾಥ್ ಸಿಂಗ್ ನಮನ

ಮುಂದಿನ ಸುದ್ದಿ
Show comments