Webdunia - Bharat's app for daily news and videos

Install App

ಬೆಂಗಳೂರಿನಲ್ಲಿ ಇಂದು ಮಳೆ ಬರುತ್ತಾ? ಹವಾಮಾನ ವರದಿ ಹೇಗಿದೆ

Krishnaveni K
ಗುರುವಾರ, 16 ಮೇ 2024 (12:23 IST)
ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಮಳೆ, ಮೋಡ ಕವಿದ ವಾತಾವರಣವಿದೆ. ಇಂದು ಬೆಂಗಳೂರಿನಲ್ಲಿ ಮಳೆಯಾಗುತ್ತದಾ, ಇಂದಿನ ಹವಾಮಾನ ವರದಿ ಹೇಗಿದೆ ಇಲ್ಲಿದೆ ಮಾಹಿತಿ.

ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಮಳೆ ಕೊಂಚ ಕಡಿಮೆಯಾಗಿದೆ. ಆದರೆ ಮೋಡ ಕವಿದ ವಾತಾವರಣ ಮಾತ್ರ ಹಾಗೆಯೇ ಮುಂದುವರಿದಿದೆ. ಸೋಮವಾರ ರಾತ್ರಿ ಸುರಿದಿದ್ದ ಧಾರಾಕರ ಮಳೆ ಬಳಿಕ ವರುಣ ಕೊಂಚ ಬ್ರೇಕ್ ಪಡೆದಿದ್ದಾನೆ. ನಿನ್ನೆ ಮತ್ತು ಇಂದು ಮೋಡ ಕಡಿದ ವಾತಾವರಣವಿದೆ.

ಇಂದು ಬೆಂಗಳೂರಿನ ತಾಪಮಾನ 28 ಡಿಗ್ರಿ ಸೆಲ್ಶಿಯಸ್ ಇದೆ. ಹಗಲು ಮೋಡ ಕವಿದ ವಾತಾವರಣವಿದ್ದರೂ ಮಳೆಯ ಸಂಭವ ಕಡಿಮೆ ಎನ್ನಬಹುದು. ರಾತ್ರಿ ಕೆಲವೆಡೆ ಸಣ್ಣ ಮಳೆಯಾಗುವ ಸಾಧ‍್ಯತೆಯಿದೆ. ಅದರ ಹೊರತಾಗಿ ಸೆಖೆಯ ವಾತಾವರಣ ಮುಂದುವರಿಯಲಿದೆ.

ಆದರೆ ವೀಕೆಂಡ್ ನಲ್ಲಿ ಈ ವಾರ ಮಳೆಯ ಸೂಚನೆಯಿದೆ. ಶುಕ್ರವಾರದಿಂದ ನಾಲ್ಕು ದಿನಗಳವರೆಗೆ ನಿರಂತರ ಮಳೆಯಾಗುವ ಸೂಚನೆಯಿದೆ. ಅದರಲ್ಲೂ ಭಾನುವಾರ ಮತ್ತು ಸೋಮವಾರ ಎರಡು ದಿನ ಭಾರೀ ಮಳೆಯಾಗುವ ಸೂಚನೆ ಕಂಡುಬರುತ್ತಿದೆ. ಆದರೆ ಕರ್ನಾಟಕದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದ್ದು ಇಂದೂ ಮಳೆಯಾಗುವ ಸಾಧ‍್ಯತೆಯಿದೆ. ಇಂದು ರಾಜ್ಯದಲ್ಲಿ ಗರಿಷ್ಠ 32 ಡಿಗ್ರಿವರೆಗೆ ತಲುಪಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಂಥಾ ಮನಸ್ಸು ಎಲ್ಲರಿಗೂ ಬರಲ್ಲ…ಅನಾಥ ಮಗುವಿಗೆ ತಾನೇ ಎದೆಹಾಲುಣಿಸಿದ ಸಚಿವೆ ಸೀತಾ ಬೇಡಿ: Video

ವಾಲ್ಮೀಕಿ ನಿಗಮದ ಹಗರಣದಲ್ಲಿ ಕಾಂಗ್ರೆಸ್ ಪಕ್ಷ, ಅವರ ಹೈಕಮಾಂಡ್ ಪಾತ್ರ: ಸಿ.ಟಿ.ರವಿ ಆರೋಪ

ಮೂವರನ್ನು ಕಗ್ಗೊಲೆ ಮಾಡಿದ ಸರ್ಕಾರ: ಛಲವಾದಿ ನಾರಾಯಣಸ್ವಾಮಿ ಆರೋಪ

ಹನೂರು ಎನ್‌ಕೌಂಟರ್ ಬಗ್ಗೆ ಗಂಭೀರ ಅನುಮಾನ; ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು: ಬಿ.ವೈ. ವಿಜಯೇಂದ್ರ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments