Bengaluru: ಇಬ್ಬರು ಮಕ್ಕಳಿದ್ದರು ಮತ್ತೇ ಪ್ರೀತಿಯಲ್ಲಿ ಬಿದ್ದ ಮಹಿಳೆ, ಬದುಕು ದುರಂತ ಅಂತ್ಯ

Sampriya
ಸೋಮವಾರ, 9 ಜೂನ್ 2025 (15:59 IST)
ಬೆಂಗಳೂರು: ನಗರದ ಪೂರ್ಣ ಪ್ರಜ್ಞಾ ಲೇಔಟ್‌ನಲ್ಲಿರುವ ಹೋಟೆಲ್‌ ರೂಂ ಒಳಗೆ ಮಹಿಳೆಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಪ್ರಿಯಕರನೇ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿ, ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. 

ವಿವಾಹಿತ 33ವರ್ಷದ ಹರಿಣಿ ಎಂಬಾಕೆ 25 ವರ್ಷದ ಎಂಜಿನಿಯರ್‌ ಆಗಿರುವ ಯಶಸ್‌ನಿಂದ ಹತ್ಯೆಯಾಗಿರುವುದಾಗಿ ಮೇಲ್ನೋಟಕ್ಕೆ ತಿಳಿದುಬಂದಿದೆ. ಎಂಬಾತನೇ ಆಕೆಯ ಮೇಲೆ 17 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. 

ಸುಬ್ರಹ್ಮಣ್ಯಪುರ ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಹತ್ಯೆಗೊಳಗಾದ ಹರಿಣಿ ಹಾಗೂ ಆರೋಪಿ ಯಶಸ್‌ ಪ್ರೀತಿಸುತ್ತಿದ್ದರು. ಆದರೆ ಹರಿಣಿ ಸಂಬಂಧವನ್ನು ಮುಂದುವರೆಸಲು ಇಷ್ಟಪಡದೆ, ದೂರವಾಗಲು ನಿರ್ಧರಿಸಿದ್ದಳು. ಇದು ಯಶಸ್ ಕೋಪಕ್ಕೆ ಕಾರಣವಾಗಿದೆ. 

ಹರಿಣಿ ಎರಡು ಮಕ್ಕಳ ತಾಯಿಯಾಗಿದ್ದು, ತನ್ನ ಅಕ್ರಮ ಸಂಬಂಧದ ವಿಚಾರವಾಗಿ ಫ್ಯಾಮಿಲಿಯಲ್ಲಿ ಒತ್ತಡಕ್ಕೆ ಒಳಗಾಗಿದ್ದಳು. ಈ ಸಲುವಾಗಿ ಯಶಸ್ ಜತೆಗಿನ ಸಂಬಂಧದಿಂದ ದೂರುವಿರಲು ನಿರ್ಧರಿಸಿದ್ದರು.  ಇದರಿಂದ ಕೋಪಗೊಂಡ ಯಶಸ್, ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. 

ಜೂನ್ 6ರಂದು ಓಹೋ ಹೊಟೇಲ್‌ನಲ್ಲಿ ಹರಿಣಿ ಹತ್ಯೆಯಾಗಿದ್ದಾಳೆ.  ಕೊಠಡಿ ದೀರ್ಘಕಾಲದವರೆಗೆ ಲಾಕ್ ಆಗಿರುವುದರಿಂದ ಆತಂಕಗೊಂಡ ಹೋಟೆಲ್ ಸಿಬ್ಬಂದಿ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಮಾತ್ರ ಇದು ಬೆಳಕಿಗೆ ಬಂದಿತು. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಕೆಂಗೇರಿ ಮೂಲದ ಯಶಸ್‌ಗಾಗಿ ಹುಡುಕಾಟ ನಡೆಯುತ್ತಿದೆ<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರುಬೈಯಾ ಸಯೀದ್ ಅಪಹರಣ ಪ್ರಕರಣದಲ್ಲಿ ಶಂಕಿತನ ಬಂಧನ, ಏನಿದು ಕೇಸ್

ಸಿದ್ದರಾಮಯ್ಯ ಸರ್ಕಾರದಿಂದ ರೈತರ ಅಸಡ್ಡೆ: ಬಿವೈ ವಿಜಯೇಂದ್ರ

ನಾಳೆ ಡಿಕೆ ಶಿವಕುಮಾರ್ ಮನೆಯಲ್ಲಿ ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್‌, ಕುತೂಹಲ ಮೂಡಿಸಿದ ನಾಯಕರ ನಡೆ

ವಿಪಕ್ಷಗಳ ಗದ್ದಲಕ್ಕೆ ಸತತ ಸೋಲು ಕಾರಣ: ಕಂಗನಾ ರಣಾವತ್ ಕಿಡಿ

ಪ್ರತಾಪ್ ಸಿಂಹ, ಯತ್ನಾಳ್ ವಿರುದ್ಧ ನಾಲಿಗೆ ಹರಿಬಿಟ್ಟ ಎಸ್‌ಡಿಪಿಐ ಮುಖಂಡನ ವಿರುದ್ಧ ದೂರು

ಮುಂದಿನ ಸುದ್ದಿ
Show comments