ಬಿಬಿಎಂಪಿ ವಾರ್ಡ್​ ಸಂಖ್ಯೆ 243 ಅಲ್ಲ 225!

Webdunia
ಶನಿವಾರ, 5 ಆಗಸ್ಟ್ 2023 (18:44 IST)
BBMP ವಾರ್ಡ್‌ಗಳ ಸಂಖ್ಯೆಯನ್ನು 243ರಿಂದ 225ಕ್ಕೆ ಇಳಿಸಿ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. 2021ರ ಜ.29ರಂದು BBMP ಕೌನ್ಸಿಲರ್ಸ್‌ ಸಂಖ್ಯೆಯನ್ನು 243ಕ್ಕೆ ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಇದನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಾಪಸ್‌ ಪಡೆದುಕೊಳ್ಳಲಾಗಿದೆ.
 
ಬಿಬಿಎಂಪಿ ಅಧಿನಿಯಮ 2020ರ 7ನೇ ಪ್ರಕರಣದಂತೆ ಅಧಿಕಾರ ಚಲಾಯಿಸಿ, ತತ್‌ ಕ್ಷಣದಿಂದ ಜಾರಿಗೆ ಬರುವಂತೆ ಕಾರ್ಪೊರೇಟರ್‌ಗಳ ಸಂಖ್ಯೆಯನ್ನು 225ಕ್ಕೆ ನಿಗದಿಪಡಿಸಲಾಗಿದೆ. ಬಿಬಿಎಂಪಿ ವಾರ್ಡ್‌ಗಳ ಪುನರ್ ವಿಂಗಡಿಸಲು ಮುಖ್ಯ ಆಯುಕ್ತರ ನೇತೃತ್ವದ ಆಯೋಗವನ್ನು ಸರ್ಕಾರ ಜೂನ್23ರಂದು ಪುನರ್ ರಚಿಸಿತ್ತು. ಹೈಕೋರ್ಟ್‌ ಆದೇಶದಂತೆ 12 ವಾರಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು.ಈ ಸಮಿತಿ ಜೂನ್ 25ರಂದು ಮೊದಲ ಸಭೆ ನಡೆಸಿತ್ತು. ನಂತರ ಪ್ರಕ್ರಿಯೆಗಳು ಆಗಿರಲಿಲ್ಲ. ವಾರ್ಡ್‌ಗಳ ಸಂಖ್ಯೆ ಕಡಿಮೆ ಮಾಡಬೇಕೇ? ಹೆಚ್ಚು ಮಾಡಬೇಕೇ ಎಂಬ ಬಗ್ಗೆ ಚರ್ಚೆಗಳಾಗುತ್ತಿದ್ದವು. ಈ ಮಧ್ಯೆ ಸಚಿವ ರಾಮಲಿಂಗಾರೆಡ್ಡಿ ಅವರು, ಬಿಜೆಪಿಯವರು ಕಾಂಗ್ರೆಸ್‌ಗೆ ಅನ್ಯಾಯ ಮಾಡಿ ವಾರ್ಡ್ ವಿಂಗಡಣೆ ಮಾಡಿದೆ. ಕೆಲವು ಅನಗತ್ಯ ವಾರ್ಡ್‌ಗಳಿವೆ. ವಾರ್ಡ್‌ಗಳ ಸಂಖ್ಯೆ 225 ಆಗಬಹುದು ಎಂದು ಹೇಳಿದ್ದರು. ಇದೀಗ ಅದರಂತೆಯೇ ವಾರ್ಡ್‌ಗಳ ಪುನರ್‌ವಿಂಗಡಣೆ ಆಯೋಗದ ಶಿಫಾರಸು ಇಲ್ಲದೆಯೇ ವಾರ್ಡ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯದಲ್ಲಿರೋದು ಎರಡೇ ಪಕ್ಷ, ಮೂರನೆಯದ್ದು ಆಟಕ್ಕುಂಟು ಲೆಕ್ಕಕ್ಕಿಲ್ಲ: ಡಿಕೆ ಶಿವಕುಮಾರ್ ವ್ಯಂಗ್ಯ

ಕೋಗಿಲು ಅಕ್ರಮ ನಿವಾಸಿಗಳಿಗೆ ಮನೆ, ಈ ಕಂಡೀಷನ್ ಪೂರೈಸಬೇಕು ಎಂದ ಜಮೀರ್ ಅಹ್ಮದ್

Arecanut Price: ಅಡಿಕೆ ಬೆಲೆಯಲ್ಲಿ ಇಂದು ಮತ್ತೆ ಏರಿಕೆ

ಕುಮಾರಸ್ವಾಮಿಯವರು ನೀವು ರಬ್ಬರ್ ಸ್ಟಾಂಪ್ ಮಿನಿಸ್ಟರ್ ಅಂತಾರೆ ಎಂದಿದ್ದಕ್ಕೆ ಸಚಿವ ಪರಮೇಶ್ವರ್ ಹೇಳಿದ್ದೇನು

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments