Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಅವ್ಯವಹಾರಗಳ ತನಿಖೆಗೆ ಸರಕಾರ ಸದಾ ಸಿದ್ದ: ರೆಡ್ಡಿ

ಬಿಬಿಎಂಪಿ ಅವ್ಯವಹಾರಗಳ ತನಿಖೆಗೆ ಸರಕಾರ ಸದಾ ಸಿದ್ದ: ರೆಡ್ಡಿ
, ಶುಕ್ರವಾರ, 24 ಏಪ್ರಿಲ್ 2015 (20:43 IST)
ಬೆಂಗಳೂರು: ವಿಧಾನಪರಿಷತ್ತು: ಈಗಿನ ಬಿಬಿಎಂಪಿ ಬೆಂಗಳೂರು ಮಹಾನಗರ ಪಾಲಿಕೆ ಆಗಿದ್ದಾಗ 2001ರಿಂದ 2006ರ ಅವಧಿಯಲ್ಲಿ ರಸ್ತೆ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ 18 ಸಾವಿರ ಕೋಟಿ ರೂ. ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

 ಬಿಬಿಎಂಪಿ ವಿಭಜನೆಗೆ ಸಂಬಂಧಿಸಿದ "ಕರ್ನಾಟಕ ನಗರಪಾಲಿಕೆಗಳ ತಿದ್ದುಪಡಿ ವಿಧೇಯಕ'ದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ವಿ. ಸೋಮಣ್ಣ ಅವರು ಪಾಲಿಕೆಯಲ್ಲಿ ಅವ್ಯವಹಾರ ನಡೆಯುತ್ತಿರುವುದು ಬಿಬಿಎಂಪಿ ಆದ ಮೇಲಷ್ಟೆ ಅಲ್ಲ. ಬಹಳ ಹಿಂದಿನಿಂದಲೂ ಸಾಕಷ್ಟು ಅವ್ಯವಹಾರಗಳು ನಡೆದಿವೆ ಎನ್ನುತ್ತಾ 2001 ರಿಂದ 2006ರ ಅವಧಿಯಲ್ಲಿ ರಸ್ತೆ ಕಾಮಗಾರಿಗಳಲ್ಲಿ ನಡೆದ 18 ಸಾವಿರ ಕೋಟಿ ರೂ. ಅವ್ಯವಹಾರವನ್ನು ಉಲ್ಲೇಖೀಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ರಾಮಲಿಂಗಾರೆಡ್ಡಿ, ಸೋಮಣ್ಣನವರಿಗೆ ಮಾಹಿತಿ ಕೊರತೆ ಇರಬಹುದು. 2001 ರಿಂದ 2006ರ ಅವಧಿಯಲ್ಲಿ ಪಾಲಿಕೆಯ ಒಟ್ಟು ಬಜೆಟ್‌ ಗಾತ್ರವೇ 1 ಸಾವಿರ ಕೋಟಿ ರೂ. ಇರುತ್ತಿತ್ತು. ಹೀಗಿರುವಾಗ 18 ಸಾವಿರ ಕೋಟಿ ರೂ. ಅವ್ಯವಹಾರ ನಡೆಯಲು ಹೇಗೆ ಸಾಧ್ಯ? ಒಂದು ವೇಳೆ ಅವ್ಯವಹಾರ ನಡೆದಿದ್ದರೂ ಅವರ ಸರ್ಕಾರವೇ ಅಧಿಕಾರದಲ್ಲಿತ್ತು. ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ಅವ್ಯವಹಾರ ನಡೆದಿರುವ ಬಗ್ಗೆ ನಿಖರ ದಾಖಲೆಗಳಿದ್ದರೆ ಕೊಡಿ, ನಮ್ಮ ಸರ್ಕಾರ ಖಂಡಿತವಾಗಿ ಕ್ರಮ ಕೈಗೊಳ್ಳುತ್ತದೆ ಎಂದು ಸವಾಲು ಹಾಕಿದರು.

Share this Story:

Follow Webdunia kannada