Select Your Language

Notifications

webdunia
webdunia
webdunia
webdunia

ಮೇಯೋಹಾಲ್, ಕೆಂಪೇಗೌಡ ಮ್ಯೂಸಿಯಂ ನಾಳೆ ಬಿಬಿಎಂಪಿ ತೆಕ್ಕೆಗೆ

ಮೇಯೋಹಾಲ್, ಕೆಂಪೇಗೌಡ ಮ್ಯೂಸಿಯಂ ನಾಳೆ  ಬಿಬಿಎಂಪಿ ತೆಕ್ಕೆಗೆ
ಬೆಂಗಳೂರು , ಶುಕ್ರವಾರ, 29 ಜನವರಿ 2016 (16:15 IST)
ಅಡಮಾನ ಇಟ್ಟಿದ್ದ ಮೇಯೋಹಾಲ್, ಕೆಂಪೇಗೌಡ ಮ್ಯೂಸಿಯಂಗಳನ್ನು ಸಿಎಂ ಸಿದ್ದರಾಮಯ್ಯ ನಾಳೆ ಬಿಬಿಎಂಪಿ ತೆಕ್ಕೆಗೆ ಹಿಂತೆಗೆದುಕೊಳ್ಳಲಿದ್ದಾರೆ. ಸಾಲ ಪಡೆಯುವುದಕ್ಕಾಗಿ ಹುಡ್ಕೋ ಬ್ಯಾಂಕಿಗೆ  ಪಾಲಿಕೆ ಆಸ್ತಿಗಳನ್ನು ಅಡಮಾನ ಇಡಲಾಗಿತ್ತು. ಅಡಮಾನ ಪದ್ಧತಿಗೆ ಬ್ರೇಕ್ ಹಾಕುವುದಕ್ಕೆ ಬಿಬಿಎಂಪಿ ಮೊದಲ ಹೆಜ್ಜೆಯನ್ನು ತೆಗೆದುಕೊಂಡಿದೆ.

 ಅಡಮಾನ ಇಟ್ಟಿರುವ ಎಲ್ಲಾ ಕಟ್ಟಡಗಳನ್ನು ವಾಪಸ್ ಪಡೆಯುವುದಾಗಿ ಮೇಯರ್ ಇತ್ತೀಚೆಗೆ ಹೇಳಿದ್ದರು.  ಶೇ. 10.50 ಬಡ್ಡಿಯಲ್ಲಿ ಒಟ್ಟು  2867 ಕೋಟಿಯಷ್ಟು ಸಾಲ ಪಡೆದಿದ್ದ ಬಿಬಿಎಂಪಿ 10ಕ್ಕೂ ಹೆಚ್ಚು ಕಟ್ಟಡಗಳನ್ನು ಅಡಮಾನ ಇಟ್ಟಿತ್ತು.

ಬಿಬಿಎಂಪಿ ಕೆ.ಆರ್. ಮಾರ್ಕೆಟ್, ಮಲ್ಲೇಶ್ವರಂ ಮಾರ್ಕೆಟ್, ಯುಟಿಲಿಟಿ ಬಿಲ್ಡಿಂಗ್, ಟ್ಯಾನರಿ ರಸ್ತೆ ಮಾರ್ಕೆಟ್, ರಾಜಾಜಿನಗರ ಮಾರ್ಕೆಟ್, ದಾಸಪ್ಪ ಹಾಸ್ಪಿಟರ್ ಇವೇ ಮುಂತಾದವನ್ನು ಅಡವಿಟ್ಟು ಈ ಸಾಲಗಳನ್ನು ತೆಗೆದುಕೊಂಡು ಅಭಿವೃದ್ಧಿ ಕೆಲಸಗಳಿಗೆ ಖರ್ಚು ಮಾಡಿದೆ.

Share this Story:

Follow Webdunia kannada