Webdunia - Bharat's app for daily news and videos

Install App

ವೈರಾಣು ನಿಯಂತ್ರಿಸುವ ಸಂಬಂಧ ಸೂಕ್ತ ಸಲಹೆ ಸೂಚನೆಗಳನ್ನು ಜಾರಿಗೆ ತರಲು ಸೂಚನೆ

Webdunia
ಗುರುವಾರ, 2 ಡಿಸೆಂಬರ್ 2021 (20:42 IST)
ಕೋವಿಡ್ ರೂಪಾಂತರಿ ವೈರಾಣು ತಡೆಗಟ್ಟುವ ನವೋದ್ಯಮ ಕೋವಿಡ್ ಕಾರ್ಯಕ್ರಮ ಸಮಿತಿಯೊಂದಿಗೆ ಇಂದು ಸಭೆ ನಡೆಸಲಾಗಿದೆ, ತಜ್ಞರು ಸೂಚಿಸಿರುವ ಸೂಕ್ತ ಸಲಹೆ/ಸೂಚನೆಗಳನ್ನು ಜಾರಿಗೆ ತರಲು ಮುಖ್ಯ ಆಯುಕ್ತರು ಶ್ರೀ ಗೌರವ್ ಗುಪ್ತ ರವರು ಆರೋಗ್ಯ ವಿಭಾಗದ ವಿಶೇಷ ಆಯುಕ್ತರಿಗೆ ಸೂಚನೆ.
 
ನಗರದಲ್ಲಿ ಕೋವಿಡ್ ರೂಪಾಂತರಿ ಸೇರಿದಂತೆ ಇನ್ನಿತರೆ ವೈರಾಣು ತಡೆಗಟ್ಟುವ ಸಂಬಂಧ ಕೋವಿಡ್ ತಜ್ಞರ ಸಮಿತಿ ಜೊತೆ ನಡೆದ ಪರಿಶೀಲನಾ ಸಭೆಯಲ್ಲಿ, ಕೋವಿಡ್ ರೂಪಾಂತರಿ ವೈರಾಣುವಿನಿಂದ ವಿಶ್ವದಾದ್ಯಂತ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ನಗರದಲ್ಲಿ ಕೋವಿಡ್ ರೂಪಾಂತರಿಯನ್ನು ನಿಯಂತ್ರಿಸಲು ಯಾವ ರೀತಿ ಕಾರ್ಯೋನ್ಮುಖರಾಬೇಕು, ಯಾವೆಲ್ಲಾ ಬದಲಾವಣೆ ಮಾಡಬೇಕು ಎಂಬ ವಿಷಯಗಳ ಬಗ್ಗೆ ತಜ್ಞರು ಹಲವು ಸಲಹೆ/ಸೂಚನೆಗಳನ್ನು ನೀಡಿದರು. 
 
ತಜ್ಞರ ಸಮಿತಿಯು ಸಭೆಯಲ್ಲಿ ನೀಡಿರುವ ಪ್ರಮುಖ ಸಲಹೆ-ಸೂಚನೆಗಳು:
 
• ವಿದೇಶದಿಂದ ಬರುವ ಪ್ರಯಾಣಿಕರಿಗೆ ಟೆಸ್ಟಿಂಗ್ ಮಾಡುವುದು, ಕ್ವಾರಂಟೈನ್ ಮಾಡುವುಡು, ಸಂಗ್ರಹಿಸಿರುವ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸುವುದು‌.
 
• ನಗರದಲ್ಲಿರುವ ಕಂಟೈನ್ಮೆಂಟ್ ಜೋನ್ ಗಳ ಮೇಲೆ ನಿಗಾವಹಿಸುವುದು.
 
• ಕ್ಲಸ್ಟರ್ ಗಳಾದರೆ ಅದರ ಮೇಲೆ ಹೆಚ್ಚು ಗಮನ ಹರಿಸುವುದು.
 
• ಸಭೆ-ಸಮಾರಂಭಗಳು, ಪಾರ್ಟಿ, ಕಾರ್ಯಕ್ರಮಗಳಲ್ಲಿ  ಕೋವಿಡ್ ನಿಯಮಗಳನ್ನು ಅನುಸರಿಸಿ ಆದಷ್ಟು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸುವುದು.
 
• ಅವಶ್ಯಕತೆ ಬಿದ್ದಲ್ಲಿ ಕೋವಿಡ್ ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಿಸುವುದು.
 
• ನಗರದ ಉದ್ಯಾನ, ಚಿತ್ರಮಂದಿರ, ಮಾಲ್ ಸೇರಿದಂತೆ ಇನ್ನಿತರೆ ಸಾರ್ವಜನಿಕ ಸ್ಥಳಗಳಿಗೆ ಎರಡೂ ಡೋಸ್ ಲಸಿಕೆ ಪಡೆದವರಿಗೆ ಪ್ರವೇಶ ನೀಡುವುದು.
 
• ಹೊಸದಾಗಿ ಬಂದಿರುವ ಓಮೈಕ್ರಾನ್ ಹಾಗೂ ಇನ್ನಿತರೆ ವೈರಾಣು ಹರಡದಂತೆ ಪೂರ್ವ ಸಿದ್ದತೆ ಮಾಡಿಕೊಳ್ಳುವುದು.
 
• ಶಾಲೆಗಳಲ್ಲಿ ಕನಿಷ್ಠ ತಿಂಗಳಿಗೊಮ್ಮೆ ಶೇ.10 ರಷ್ಟು ಮಕ್ಕಳಿಗೆ ಪರೀಕ್ಷೆ ಮಾಡುವುದು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಸಲಹೆ/ಸೂಚನೆಗಳನ್ನು ನೀಡಿದರು. 
 
 
ತಜ್ಞರ ಸಮಿತಿ ನೀರಿಡಿರುವ ಸಲಹೆ/ಸೂಚನೆಗಳಿಗೆ ಸಂಬಂಧಿಸಿದಂತೆ ಸೂಕ್ತವಾಗಿರುವ ಅಂಶಗಳನ್ನು ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಗೆ ತರಲು ಮುಖ್ಯ ಆಯುಕ್ತರು ವಿಶೇಷ ಆಯುಕ್ತರಿಗೆ ಸೂಚನೆ ನೀಡಿದರು.
 
ನಗರದಲ್ಲಿ ಕೋವಿಡ್ ನಿಯಮಗಳನ್ನು ಅನುಸರಿಸುವ, ಪ್ರತಿಯೊಬ್ಬ ಅರ್ಹ ಫಲಾನುವಿಗಳು ಕಡ್ಡಾಯವಾಗಿ ಎರಡೂ ಡೋಸ್ ಪಡೆಯುವ ಸಂಬಂಧ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ(RWAs), ಹೋಟೆಲ್/ವ್ಯಾಪಾರಿ ಸೇರಿದಂತೆ ಇನ್ನಿತರೆ ಸಂಘಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ವಿಶೇಷ ಆಯುಕ್ತರಿಗೆ ಸೂಚನೆ ನೀಡಿದರು.
 
ಸಭೆಯಲ್ಲಿ ವಿಶೇಷ ಆಯುಕ್ತರು(ಆರೋಗ್ಯ) ಡಾ. ತ್ರಿಲೋಕಚಂದ್ರ, ಮುಖ್ಯ ಆರೋಗ್ಯಾಧಿಕಾರಿಗಳಾದ ಡಾ. ಬಾಲಸುಂದರ್, ನಿರ್ಮಲಾ ಬುಗ್ಗಿ, ಕೋವಿಡ್‌ಗಾಗಿ ಸಮಿತಿ ಸದಸ್ಯರು ಹಾಗೂ ಇತರರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Pehalgam: ಪುರಿ ದೇವಾಲಯದಲ್ಲೇ ಗರುಡ ನೀಡಿದ್ದನಾ ಪಹಲ್ಗಾಮ್ ದುರ್ಘಟನೆಯ ಸೂಚನೆ

Arecanut price today: ಇಂದಿನ ಅಡಿಕೆ, ಕಾಳುಮೆಣಸು ದರ ವಿವರ ಇಲ್ಲಿದೆ

Gold Price today: ಲಕ್ಷದ ಗಡಿ ದಾಟಿದ್ದ ಚಿನ್ನದ ಬೆಲೆ ಇಂದು ಎಷ್ಟಾಗಿದೆ ನೋಡಿ

ಭಾರತದ ಕಟ್ಟುನಿಟ್ಟಿನ ಕ್ರಮಕ್ಕೆ ಬೆದರಿದ ಪಾಕಿಸ್ತಾನ: ಅರ್ಜೆಂಟ್ ಮೀಟಿಂಗ್

Pehalgam attack: ನನ್ನ ಗಂಡನ ರಕ್ತ ತಾಗಿದ ಈ ಜಾಕೆಟ್ ಯಾವತ್ತೂ ತೆಗೆಯಲ್ಲ ಎಂದ ಮಂಜುನಾಥ್ ಪತ್ನಿ

ಮುಂದಿನ ಸುದ್ದಿ
Show comments