Webdunia - Bharat's app for daily news and videos

Install App

ಬಸವಣ್ಣನವರು ಜನಿವಾರ ನಿರಾಕರಿಸಿದ್ದು ನಿಜ: ಸಿದ್ದಗಂಗಾಶ್ರೀ

Webdunia
ಶುಕ್ರವಾರ, 3 ಜೂನ್ 2022 (17:08 IST)

ಜನಿವಾರ ದೀಕ್ಷೆಯನ್ನು ಬಸವಣ್ಣನವರು ನಿರಾಕರಿಸಿ, ಹೊರಗೆ ಬಂದಿದ್ದು ಸತ್ಯ. ವಾಸ್ತವ ವಿಚಾರವನ್ನು ಇಂದಿನ ಮಕ್ಕಳಿಗೆ ತಿಳಿಸುವ ದೃಷ್ಟಿಯಿಂದ ಪ್ರಕಟಗೊಳಿಸುವುದು ಒಳ್ಳೆಯದು ಎಂದು ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.

ದಾವಣಗೆರೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಣ್ಣನವರ ವಚನಗಳನ್ನು ತಿದ್ದುವುದಕ್ಕೆ ಯಾರಿಂದಲು ಸಾಧ್ಯವಿಲ್ಲ. ಅದನ್ನು ಏನಾದರು ತಿದ್ದಿದರೆ ಅವರಿಗೆ ಅಪಚಾರ ಮಾಡಿದಂತಾಗುತ್ತದೆ. ಬಸವಣ್ಣನವರು ಏನು ಹೇಳಿದ್ದಾರೋ ವಾಸ್ತವ ವಿಚಾರ ಪ್ರಕಟವಾಗಬೇಕು ಎಂದರು.

ಸಮಾಜಕ್ಕೆ ಬಸವಣ್ಣನವರು ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅಂದಿನಿಂದ ಇಂದಿನವರೆಗೂ ಸಾಮಾಜಿಕವಾಗಿ ಆರ್ಥಿಕವಾಗಿ ಬಹುದೊಡ್ಡ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಲೇ ಬಂದಿದ್ದಾರೆ. ಒಬ್ಬರಿಗೆ ಇಬ್ಬರಿಗೆ ಅಲ್ಲ, ಬದಲಿಗೆ ಎಲ್ಲರಿಗೂ ಬೇಕಾದ ವಿಚಾರಗಳನ್ನು ಬಸವಣ್ಣ ನೀಡಿದ್ದಾರೆ. ಅವರ ವಚನಗಳೇ ನಮಗೆ ಆಧಾರ. ಅವುಗಳನ್ನು ತಿದ್ದದೇ ಹೇಗಿದೆಯೋ ಹಾಗೆ ಕೊಡಬೇಕು ಎಂದು ಅವರು ಸ್ಪಷ್ಟಪಡಿಸಿದರು.

ಜನಿವಾರ ದೀಕ್ಷೆಯನ್ನು ಬಸವಣ್ಣನವರು ನಿರಾಕರಿಸಿ, ಹೊರಗೆ ಬಂದಿದ್ದು ಸತ್ಯ. ವಾಸ್ತವ ವಿಚಾರವನ್ನು ಇಂದಿನ ಮಕ್ಕಳಿಗೆ ತಿಳಿಸುವ ದೃಷ್ಠಿಯಿಂದ ಪ್ರಕಟಗೊಳಿಸುವುದು ಒಳ್ಳೆಯದು. ಮುಖ್ಯಮಂತ್ರಿಗಳು ಹೇಳಿದ್ದಾರೆ, ಶಿಕ್ಷಣ ಸಚಿವರು ವರದಿ ಕೊಟ್ಟ ನಂತರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ವೀರಶೈವ ಪಂಥ ಸ್ಥಾಪನೆ ಬಸವ ಧರ್ಮ ವಿಚಾರವಾಗಿ ಗೊಂದಲ-->

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments