Select Your Language

Notifications

webdunia
webdunia
webdunia
webdunia

ಪಂಚಪೀಠ ಶ್ರೀಗಳ ಭಾವಚಿತ್ರ ತುಳಿದು ಪ್ರತಿಭಟನೆ

ಪಂಚಪೀಠ ಶ್ರೀಗಳ ಭಾವಚಿತ್ರ ತುಳಿದು ಪ್ರತಿಭಟನೆ
ಧಾರವಾಡ , ಶುಕ್ರವಾರ, 30 ಜನವರಿ 2015 (17:59 IST)
ಪಂಚಪೀಠ ಹಾಗೂ ರಂಭಾಪುರಿ ಪೀಠದ ಶ್ರೀಗಳ ವಿರುದ್ಧ ರಾಷ್ಟ್ರೀಯ ಬಸವ ದಳದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಶ್ರೀಗಳ ಭಾವಚಿತ್ರಗಳನ್ನು ತುಳಿಯವ ಮೂಲಕ ಶ್ರೀಗಳಿಗೆ ಅಪಮಾನ ಮಾಡಿದಂತಹ ಘಟನೆ ಇಲ್ಲಿ ಇಂದು ಕಂಡು ಬಂತು. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀಗಳು ವೀರಶೈವರು, ಲಿಂಗಾಯತರು ಎಂದು ಭೇದ ಭಾವ ಮಾಡುತ್ತಿದ್ದಾರೆ. ಅಲ್ಲದೆ ಬಸವಣ್ಣನವರ ವಚನಗಳು ಕೇವಲ ಲಿಂಗಾಯತರನ್ನು ಮಾತ್ರ ಪ್ರತಿನಿಧಿಸುತ್ತಿದ್ದು, ವೀರಶೈವ ಸಮುದಾಯಕ್ಕೆ ಅನ್ವಯವಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅವರ ಈ ವರ್ತನೆ ಸಮುದಾಯವನ್ನು ಒಡೆಯವುದುದೇ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
 
ಪ್ರತಿಭಟನೆ ವೇಳೆ ಪಂಚಪೀಠ ಮತ್ತು ರಂಭಾಪುರಿ ಪೀಠದ ಶ್ರೀ ರೇಣುಕಾ ವೀರಸೋಮೇಶ್ವರ ಸ್ವಾಮೀಜಿಗಳ ಭಾವಚಿತ್ರ ತುಳಿದು ಪ್ರತಿಭಟನೆ ನಡೆಸಿದರು. 
 
ಅಡ್ಡಪಲ್ಲಕ್ಕಿ ಎಂಬ ಹೆಸರಿನಲ್ಲಿ ಬದುಕಿರುವಾಗಲೇ ಜನರ ಮೇಲೆ ಸವಾರಿ ಮಾಡುವ ರಂಭಾಪುರಿ ಪೀಠದ ರೇಣುಕಾ ವೀರಸೋಮೇಶ್ವರ ಸ್ವಾಮೀಜಿ ಶ್ರೀಗಳು, ಕೇದಾರ ಶ್ರೀಗಳು ಸಮುದಾಯವನ್ನು ಹೊಡೆಯುವ ತಂತ್ರವನ್ನು ಮಾಡುತ್ತಿದ್ದಾರೆ. ಅವರ ಈ ಕುತಂತ್ರಗಳಿಂದ ಸರ್ಕಾರದ ಹಲವು ಸೌಲಭ್ಯಗಳು ಲಿಂಗಾಯತ ಸಮುದಾಯಕ್ಕೆ ಸಿಗದೆ ಕೈ ತಪ್ಪಿ ಹೋಗುತ್ತಿವೆ. ಇನ್ನು ಮುಂದೆ ಬಸವಣ್ಣನವರ ವಚನಗಳು ಹಾಗೂ ಸುದ್ದಿಗೆ ಅವರು ಬರಬಾರದು ಎಂದು ಮಾತೆ ಮಹಾದೇವಿ ಅವರು ನಿನ್ನೆಯಷ್ಟೇ ಪ್ರತಿಕ್ರಿಯಿಸಿದ್ದರು. 

Share this Story:

Follow Webdunia kannada