Webdunia - Bharat's app for daily news and videos

Install App

ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ತಂದೆಯನ್ನು ಜೈಲಿಗೆ ಕಳುಹಿಸಿದ್ದೇ ಅವರು: ಯತ್ನಾಳ್ ವಾಗ್ದಾಳಿ

Krishnaveni K
ಶನಿವಾರ, 18 ಜನವರಿ 2025 (13:41 IST)
ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಅವರ ತಂದೆಯನ್ನು ಜೈಲಿಗೆ ಕಳುಹಿಸಿದ್ದೇ ವಿಜಯೇಂದ್ರ ಎಂದಿದ್ದಾರೆ.

ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ಅವರು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ವಿಜಯೇಂದ್ರ ಬರೀ ಕಲೆಕ್ಷನ್ ಮಾಸ್ಟರ್ ಇವ. ರಾಜ್ಯಾಧ್ಯಕ್ಷ ಆಗಿ ಏನು ಮಾಡ್ಯಾನ? ಇವ ಸುಡುಗಾಡೂ ಮಾಡಿಲ್ಲ. ಬರೀ ಅವನ ಅಪ್ಪ ಯಡಿಯೂರಪ್ಪನ್ನ ಜೈಲಿಗೆ ಕಳುಹಿಸಿದ್ದೇ ಇವ. ಯಡಿಯೂರಪ್ಪ ಜೈಲಿಗೆ ಕಳುಹಿಸಿದ್ದೇ ಇವತ್ತಿನ ರಾಜ್ಯಾಧ್ಯಕ್ಷ. ಧೀಮಂತ ಪೂಜ್ಯ ತಂದೆಯನ್ನು ಜೈಲಿಗೆ ಕಳುಹಿಸಿದ್ದಂತಹ ಧೀಮಂತ ನಾಯಕ. ತಂದೆಯ ಹೆಸರು ಹೇಳಿಕೊಂಡು ಯಾವ ಯಾವ ಸೈನ್ ಮಾಡ್ಯಾನೋ ಗೊತ್ತಿಲ್ಲ. ನಿನ್ನ ಕೈಯಲ್ಲಿ ನೀಗೋದಿಲ್ಲ ಅಂದರೆ ರಾಜೀನಾಮೆ ಕೊಟ್ಟು ಹೋಗು. ಹೊಸ ರಾಜ್ಯಾಧ್ಯಕ್ಷ ಬರ್ತಾರೆ. ನನಗೇನಾದರೂ ರಾಜ್ಯಾಧ್ಯಕ್ಷ ಪಟ್ಟ ಕೊಟ್ಟರೆ ಮುಂದಿನ ಚುನಾವಣೆಯಲ್ಲಿ 130 ಸೀಟು ತರ್ಲಿಲ್ಲ ಅಂದರೆ ರಾಜಕೀಯ ನಿವೃತ್ತಿಯಾಗ್ತೀನಿ.

ನಿನಗೆ ತಾಕತ್ತಿದ್ದರೆ ಬಾ. ಅವರನ್ನು ಕರೆಸ್ತೀನಿ, ಹೊಡೆಸ್ತೀನಿ ಎನ್ನೋದಲ್ಲ. ನೀನು ಹೊಡೆದರೆ ನಾವೂ ಸುಮ್ಮನೇ ಹೊಡೆಸ್ಕೊಂಡು ಕೂರೋ ಮಗ ಅಲ್ಲ. ನಾವು ಗಾಂಧಿ ಅಲ್ಲ, ನಾವು ಸುಭಾಷ್ ಚಂದ್ರಬೋಸ್. ಗಾಂಧಿ ಹಾಗೆ ಎಡಕ್ಕೆ ಹೊಡೆದರೆ ಬಲಕ್ಕೆ ತೋರಿಸುವವರಲ್ಲ. ನಾವು ನೇತಾಜಿ ಫಾಲೋವರ್ ಗಳು. ಒಂದು ಹೊಡೆದರೆ ನಾಲ್ಕು ಹೊಡೀತೀವಿ’ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments