Daily Horoscope
✕

ಪ್ರಸವದ ವೇಳೆ ಬಾಣಂತಿ, ಅವಳಿ ಶಿಶುಗಳು ಸಾವು!

Webdunia
ಶುಕ್ರವಾರ, 4 ನವೆಂಬರ್ 2022 (08:29 IST)
ತುಮಕೂರು : ಪ್ರಸವ ವೇಳೆ ಅನಾಥ ಬಾಣಂತಿ ಹಾಗೂ ಅವಳಿ ಶಿಶುಗಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತುಮಕೂರಿನಲ್ಲಿ ನಡೆದಿದೆ.
 
ಬಾಣಂತಿ ಹಾಗೂ ಅವಳಿ ಮಕ್ಕಳ ಸಾವಿಗೆ ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ.

ಭಾರತೀನಗರದ ಅಭಯ ಆಂಜನೇಯ ದೇವಸ್ಥಾನದ ಬಳಿ ವಾಸವಿದ್ದ ತುಂಬು ಗರ್ಭಿಣಿ ಕಸ್ತೂರಿ (30) ಬುಧವಾರ ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ತೆರಳಿದ್ದರು.

ಆದರೆ ತಾಯಿಗೆ ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕೆ ಕಸ್ತೂರಿಯವರನ್ನು ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿಕೊಳ್ಳದೇ, ವಾಪಸ್ ಕಳುಹಿಸಿದ್ದಾರೆ.

ಇಂದು ಬೆಳಗ್ಗೆ ಕಸ್ತೂರಿಗೆ ಮನೆಯಲ್ಲಿಯೇ ಹೆರಿಗೆ ಆಗಿದೆ. ಆದರೆ ಸೂಕ್ತ ಚಿಕಿತ್ಸೆ ಸಿಗದೇ ಅವಳಿ ಶಿಶುಗಳ ಜೊತೆಗೆ ಬಾಣಂತಿಯೂ ಮೃತಪಟ್ಟಿದ್ದಾರೆ. ಕಸ್ತೂರಿ ಮೂಲತಃ ತಮಿಳುನಾಡಿನವರಾಗಿದ್ದು, ಕಳೆದ 1 ತಿಂಗಳಿನಿಂದ ಭಾರತಿ ನಗರದಲ್ಲಿ ವಾಸವಿದ್ದರು ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನದಲ್ಲಿ ಅಭಿಜಿತ್ ದಿಪ್ಕೆ ವಶಕ್ಕೆ ಪಡೆಯುವಾಗ ದೇಶದಿಂದ ಹೊರಗೆ ಹಾಕಿ ಎಂದು ಕೂಗಿದ ಸಹಪ್ರಯಾಣಿಕರು: Video

ದಲಿತರ ಸಮಸ್ಯೆ ಕಡೆ ರಾಜ್ಯ ಗೃಹ ಸಚಿವರು ಗಮನ ಹರಿಸಲಿ: ಛಲವಾದಿ ನಾರಾಯಣಸ್ವಾಮಿ

ಅತಿಯಾದ ಆಲೋಚನೆಯಿಂದ ಮುಕ್ತಿ ಪಡೆಯುವುದು ಹೇಗೆ: ಗುರು ಶ್ರೀ ಶ್ರೀ ರವಿ ಶಂಕರ್ ನೀಡಿದ ಸರಳ ಸೂತ್ರಗಳು

ನಮಗ್ಯಾಕೆ ತೊಂದರೆ ಕೊಡಬೇಕು..: ವಿಮಾನದಲ್ಲಿ ಅಭಿಜಿತ್ ದೀಪ್ಕೆ ವರ್ತನೆಗೆ ಬೇಸತ್ತ ಸಹಯಾತ್ರಿಕರ ಆಕ್ರೋಶ Video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments