Select Your Language

Notifications

webdunia
webdunia
webdunia
webdunia

ಬ್ಯಾಂಕುಗಳು ರಾಷ್ಟ್ರೀಕರಣವಾದರೂ ಬಡವರಿಗೆ ಉಪಯೋಗವಾಗ್ಲಿಲ್ಲ: ಮೋದಿ ಪ್ರತಿಪಾದನೆ

ಬ್ಯಾಂಕುಗಳು ರಾಷ್ಟ್ರೀಕರಣವಾದರೂ ಬಡವರಿಗೆ ಉಪಯೋಗವಾಗ್ಲಿಲ್ಲ: ಮೋದಿ ಪ್ರತಿಪಾದನೆ
ಬೆಂಗಳೂರು , ಮಂಗಳವಾರ, 23 ಸೆಪ್ಟಂಬರ್ 2014 (18:45 IST)
30ವರ್ಷಗಳ ಬಳಿಕ ಸಂಪೂರ್ಣ ಬಹುಮತದ ಬಿಜೆಪಿ ಸರ್ಕಾರ ಬಂದಿದೆ. ಕರ್ನಾಟಕದ ಪ್ರತಿಯೊಬ್ಬ ಸಹೋದರ ಸಹೋದರಿಯರಿಗೆ ಅಭಿನಂದನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಭೇಟಿ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ನೀವು ಬೆಂಬಲ ನೀಡಿ ಸ್ಥಿರ ಸರ್ಕಾರ ರಚನೆ ಮಾಡಿದ್ದೀರಿ. ಕರ್ನಾಟಕದ ಮತದಾರರಿಗೆ ಹೃದಯಪೂರ್ವಕ ಅಭಿನಂದನೆ ಎಂದು ಮೋದಿ ಭಾಷಣವನ್ನು ಆರಂಭಿಸಿದರು. ಹೊಸ ಮನೆಗೆ ಬಂದ ಮೇಲೆ ಮನೆ ಸ್ವಚ್ಛಗೊಳಿಸುತ್ತೇವೆ. ಹಾಗೆಯೇ ಅಧಿಕಾರಕ್ಕೆ ಬಂದಮೇಲೆ ದೇಶ ಸ್ವಚ್ಛಗೊಳಿಸಬೇಕು ಎಂದು ಮೋದಿ ಹೇಳಿದರು.  ಹಳೇ ಕಾನೂನುಗಳು ನಿಷ್ಪ್ರಯೋಜಕವಾಗಿದೆ. ಕಾನೂನುಗಳನ್ನು ಸ್ವಚ್ಛಗೊಳಿಸುತ್ತೇನೆ.

ಸರ್ಕಾರವನ್ನು ಕಾನೂನಿನಿಂದ ನಡೆಸಬಾರದು ಎಂದು ಮೋದಿ ಪ್ರತಿಪಾದಿಸಿದರು. ಇಂದಿರಾಗಾಂಧಿ ಕಾಲದಲ್ಲಿ ಬ್ಯಾಂಕುಗಳು ರಾಷ್ಟ್ರೀಕರಣವಾಯಿತು. ಆದರೆ ಬಡವರಿಗೆ ಯಾವುದೇ ಅನುಕೂಲವಾಗಲಿಲ್ಲ.  ಬ್ಯಾಂಕುಗಳು ಕೇವಲ ಶ್ರೀಮಂತರಿಗಷ್ಟೇ ಸೀಮಿತವಾಗಿದೆ. ಹಲವು ವರ್ಷಗಳಿಂದ ಬ್ಯಾಂಕುಗಳು ಬಡವರ ಉಪಯೋಗಕ್ಕೆ ಬಂದಿರಲಿಲ್ಲ.  ನಮ್ಮ ಜನ್‌ದನ್ ಯೋಜನೆ ಬಡವರಿಗೆ ತಲುಪಿದೆ. ಎಲ್ಲ ಬಡವರಿಗೂ ಬ್ಯಾಂಕ್ ಖಾತೆ ಒದಗಿಸುವ ಯೋಜನೆ ಚಾಲನೆಗೆ ಬಂದಿದೆ. ಬಡವರಿಗೆ ಒಂದು ಲಕ್ಷ ರೂ. ಆರೋಗ್ಯವಿಮೆ ಯೋಜನೆ ಕಲ್ಪಿಸಿದ್ದೇವೆ ಎಂದು ಮೋದಿ ಜನ್‌ದನ್ ಯೋಜನೆಯಿಂದ ಬಡವರಿಗಾಗುವ ಉಪಯೋಗವನ್ನು ಬಿಚ್ಚಿಟ್ಟರು.

ಡಿಗ್ರಿ ಇದ್ದರೆ ಸಾಲದು, ಕೌಶಲ್ಯ ಅಭಿವೃದ್ಧಿ ಅಗತ್ಯ ಎಂದು ಮೋದಿ ಹೇಳಿದರು. ಅದಕ್ಕಾಗಿ ಕೌಶಲ್ಯ ಅಭಿವೃದ್ಧಿ ಸಚಿವಾಲಯವನ್ನು ಆರಂಭಿಸಿದೆವು ಎಂದು ಹೇಳಿದರು. ಗಾಂಧಿ ಗುಲಾಮಗಿರಿಯಿಂದ ದೇಶವನ್ನು ಮುಕ್ತಗೊಳಿಸಿದರು. ನಾವು ಕೊಳಕಿನಿಂದ ದೇಶವನ್ನು ಮುಕ್ತಗೊಳಿಸಬೇಕು. ಅ. 2ರಂದು ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡುವುದಾಗಿ ಮೋದಿ ಹೇಳಿದರು. ಮೋದಿ ಭಾಷಣದುದ್ದಕ್ಕೂ ಜನರು ಹರ್ಷೋದ್ಗಾರದಿಂದ ಸ್ವಾಗತಿಸಿದರು. 

Share this Story:

Follow Webdunia kannada