ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ತಡೆಗಾಗಿ ಬೆಂಗಳೂರು ಪೋಲಿಸ್ ಟ್ವಿಟರ್ ಖಾತೆಯನ್ನು ಆರಂಭಿಸಿದ್ದು, ಇದು ಇಂದಿನಿಂದ ಕಾರ್ಯ ನಿರ್ವಹಿಸಲಿದೆ.
ಅಪರಾಧ ಜಂಟಿ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು ಈ ಖಾತೆಯನ್ನು ಪ್ರಾರಂಭಿಸಿದ್ದು, ಸಾರ್ವಜನಿಕರು ದೂರು ನೀಡಲು ಅನುಕೂಲವಾಗುವಂತೆ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಟ್ವಿಟರ್ @ ಕ್ರೈಂ ಬೆಂಗಳೂರು ಹೆಸರಿನ ಟ್ವಿಟ್ಟರ್ ಖಾತೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪೋಲಿಸ್ ಆಯುಕ್ತರು ಬೆಂಗಳೂರಿಗರಲ್ಲಿ ಮನವಿ ಮಾಡಿದ್ದಾರೆ.