Select Your Language

Notifications

webdunia
webdunia
webdunia
webdunia

ಬೆಂಗಳೂರು: 45 ದಿನಗಳಲ್ಲಿ ಕನಿಷ್ಠ 7 ಬಾಲಕಿಯರಿಗೆ ಶೋಷಣೆ ನೀಡಿದ ವೃದ್ಧ ಶಿಕ್ಷಕ

ಬೆಂಗಳೂರು: 45 ದಿನಗಳಲ್ಲಿ ಕನಿಷ್ಠ 7 ಬಾಲಕಿಯರಿಗೆ ಶೋಷಣೆ ನೀಡಿದ ವೃದ್ಧ  ಶಿಕ್ಷಕ
ಬೆಂಗಳೂರು , ಮಂಗಳವಾರ, 12 ಆಗಸ್ಟ್ 2014 (16:04 IST)
ಲೈಂಗಿಕ ಶೋಷಣೆಯ ವಿರುದ್ಧ ಪ್ರಬಲ ಪ್ರತಿಭಟನೆ, ಶಾಲೆಯಲ್ಲಿ ಮಕ್ಕಳ ರಕ್ಷಣೆಗೆ ಪೋಲಿಸ್ ಮಾರ್ಗಸೂಚಿ, ಕಠಿಣ ಕ್ರಮಗಳ ಅನುಷ್ಠಾನವು ಕೂಡ ಶಾಲೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆ ಹಿಡಿಯುವಲ್ಲಿ ಸಫಲವಾಗಿಲ್ಲ.  ನಗರದ ಮಾರತಹಳ್ಳಿಯಲ್ಲಿ 6 ವರ್ಷದ ಬಾಲಕಿಯ ಮೇಲೆ ನಡೆದ ಲೈಂಗಿಕ ಶೋಷಣೆಯನ್ನು  ಖಂಡಿಸಿ ಜನರು ಬೀದಿಗಿಳಿದು ಪ್ರತಿಭಟಿಸಿದರು. ಆದರೂ ಆಕೆಯದೇ ಪ್ರಾಯದ ಹುಡುಗಿಯರು ಶಿಕ್ಷಕರಿಂದ ಲೈಂಗಿಕವಾಗಿ ಬಳಸಲ್ಪಡುವುದು ಅವ್ಯಾಹತವಾಗಿ ಸಾಗಿದೆ. 

64 ವರ್ಷದ ಅರೆಕಾಲಿಕ ಶಿಕ್ಷಕನೊಬ್ಬ  ಕಳೆದ 45 ದಿನಗಳಿಂದ ಮೂರು ಮತ್ತು ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಕನಿಷ್ಠ 7 ವಿದ್ಯಾರ್ಥಿನಿಯರ ಮೇಲೆ  ಲೈಂಗಿಕ ಶೋಷಣೆ ನಡಿಸಿದ ಘಟನೆ  ಕನಕಪುರ ರಸ್ತೆಯ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ. 
 
ಚಂದ್ರಮೌಳಿ ಎಂಬ ನಿವೃತ್ತ ಪೋಸ್ಟ್ ಮ್ಯಾನ್ ಬೋಧನೆಯಲ್ಲಿ ತಮಗೆ ಆಸಕ್ತಿಯಿರುವುದಾಗಿ ಹೇಳಿಕೊಂಡು ತನ್ನ ಗೆಳೆಯ ನಡೆಸುತ್ತಿದ್ದ ಶಾಲೆಗೆ ಸೇರಿಕೊಂಡಿದ್ದ. ಆಗಸ್ಟ್ 5 ರಂದು 8 ವರ್ಷದ ಶಾಲಾ ಬಾಲಕಿ  ಪಾಲಕರು  ಪೋಲಿಸರಲ್ಲಿ ದೂರು ಸಲ್ಲಿಸದ ಮೇಲೆ ಆತನನ್ನು ಬಂಧಿಸಲಾಗಿದ್ದು, ತಾತ್ಕಾಲಿಕವಾಗಿ ಶಾಲೆಯನ್ನು ಮುಚ್ಚಲಾಗಿದೆ. 
 
ಸೋಮವಾರ ಶಾಲೆಯನ್ನು ಮತ್ತೆ ತೆರೆದಾಗ  ಹೆಚ್ಚಿನ ವಿದ್ಯಾರ್ಥಿನಿಗಳು  ಆತನ ಭಯದಿಂದ ಶಾಲೆಗೆ ಹೋಗಲು ಒಪ್ಪಿಕೊಳ್ಳಲಿಲ್ಲ. ಏತನ್ಮಧ್ಯೆ ಮತ್ತೆ 3 ಜನ ಹುಡುಗಿಯರ  ಪಾಲಕರು ತಲಘಟ್ಟಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 
 
ಈ ಕುರಿತು ವರದಿ ನೀಡಲು ವಿಫಲರಾದ  ಶಾಲಾ ಪ್ರಾಚಾರ್ಯ ಲಕ್ಷ್ಮೀಕಾಂತ್  ಅವರನ್ನು ಪೋಲಿಸರು ಬಂಧಿಸಿದ್ದು, ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. 

Share this Story:

Follow Webdunia kannada