Select Your Language

Notifications

webdunia
webdunia
webdunia
webdunia

ಸಂಶೋಧನಾ ವಿದ್ಯಾರ್ಥಿನಿಯ ಮೇಲೆ ಉಪನ್ಯಾಸಕನಿಂದ ನಿರಂತರ ಅತ್ಯಾಚಾರ!

ಸಂಶೋಧನಾ ವಿದ್ಯಾರ್ಥಿನಿಯ ಮೇಲೆ ಉಪನ್ಯಾಸಕನಿಂದ ನಿರಂತರ ಅತ್ಯಾಚಾರ!
ಮಂಗಳೂರು , ಗುರುವಾರ, 30 ಅಕ್ಟೋಬರ್ 2014 (17:39 IST)
ಮದುವೆಯ ಆಮಿಷ ಒಡ್ಡಿ ಉಪನ್ಯಾಸಕನೊಬ್ಬ ತನ್ನ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ಆರೋಪ ಮಾಡಿದ್ದಾಳೆ. 

ವಿಶ್ವವಿದ್ಯಾನಿಯದ ಕ್ಯಾಂಪಸ್‌ನಲ್ಲಿ ಪ್ರತಿಭಟನೆಗೆ ಕುಳಿತ ವಿದ್ಯಾರ್ಥಿನಿ, ಉಪನ್ಯಾಸಕ ತನ್ನನ್ನು ವಿವಾಹವಾಗಲು ಒಪ್ಪಿಕೊಳ್ಳುವವರೆಗೂ ಧರಣಿಯನ್ನು ಮುಂದುವರಿಸುವುದಾಗಿ ಬೆದರಿಕೆ ಒಡ್ಡಿದ್ದಾಳೆ.
 
ವಿವಾಹವಾಗುವುದಾಗಿ ಸುಳ್ಳು ಭರವಸೆಗಳನ್ನು ನೀಡಿ ವಿವಿಧ ಸಂದರ್ಭಗಳಲ್ಲಿ ಪ್ರೊಫೆಸರ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. 
 
ವಿಶ್ವವಿದ್ಯಾನಿಲಯದ ಕನ್ನಡ ಅಭಿವೃದ್ಧಿ ಯೋಜನೆಯಡಿಯಲ್ಲಿ ಕೊಡವ ಭಾಷೆಯನ್ನು ಅಭ್ಯಸಿಸುತ್ತಿರುವ ವಿದ್ಯಾರ್ಥಿನಿ, ವೇದವಾ ಪಿ. ಎಂಬ ಉಪನ್ಯಾಸಕರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ತನ್ನ ಮನೆಯಲ್ಲಿ ಕಳೆದ ಜೂನ್ 2 ರಂದು ಅತ್ಯಾಚಾರ ಮಾಡಿದ್ದಾರೆಂದು ಆಪಾದಿಸಿದ್ದಾಳೆ.
 
ನಂತರ ತಮ್ಮ ಕೃತ್ಯದ ಬಗ್ಗೆ ತೀವ್ರ ಪಶ್ಚಾತ್ತಾಪ ವ್ಯಕ್ತಪಡಿಸಿದ ಅವರು ,ಅವಳನ್ನು ಮದುವೆಯಾಗುವ ಭರವಸೆ ನೀಡಿದರು. ನಂತರ ವರ್ಷಗಳ ಕಾಲ ಅವರಿಬ್ಬರು ದೈಹಿಕ ಸಂಬಂಧವನ್ನು ಮುಂದುವರೆಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. 
 
ಸ್ವಲ್ಪ ಸಮಯದ ನಂತರ ಆಕೆಯಿಂದ ದೂರವಿರುವ ಪ್ರಯತ್ನ ಮಾಡಿದ ಅವರು, ಮದುವೆಯಾಗುವುದಾಗಿ ಮಾಡಿದ  ವಾಗ್ದಾನವನ್ನು ಕೂಡ ಅಲ್ಲಗಳೆದರು ಎಂದು ಆಕೆ ಆಪಾದಿಸಿದ್ದಾಳೆ. ಈ ಕುರಿತು ವಿಶ್ವವಿದ್ಯಾನಿಲಯದ ಉಪಕುಲಪತಿಗಳ ಬಳಿ ಸಹ ಪೀಡಿತೆ ಹೇಳಿಕೊಂಡಿದ್ದಾಳೆ. 
 
ಈ ಸಂಬಂಧ ವಿವರಣೆಯನ್ನು ಕೋರುವಂತೆ ಪ್ರಾಧ್ಯಾಪಕರಿಗೆ ನೋಟಿಸ್ ನೀಡಲಾಗಿದೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಪಿ.ಎಸ್. ಯಡಪಡಿತಾಯ ಹೇಳಿದ್ದಾರೆ. 
 
ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿರುವ ಉಪನ್ಯಾಸಕ ವೇದವಾ, ಇದರಲ್ಲಿ ಹುರುಳಿಲ್ಲ, ನನ್ನ ಹೆಸರನ್ನು ಕೆಡಿಸಲು  ಮಾಡಿದ ಪಿತೂರಿ ಇದು. ನಾನು ಉತ್ತಮ ಹಿನ್ನೆಲೆಯಿಂದ ಬಂದಿದ್ದೇನೆ. ಈ ಆರೋಪಗಳು ಆಧಾರರಹಿತವಾಗಿವೆ. ನಾನು ಸಹ ಕಾನೂನುಬದ್ಧವಾಗಿ ಹೋರಾಡುತ್ತೇನೆ. ಯಾವುದೇ ರೀತಿಯ ವಿಚಾರಣೆಗೆ ನಾನು ಸಿದ್ಧ ಎಂದು ಹೇಳಿದ್ದಾರೆ. 
 
"ನನ್ನ ಮೇಲೆ ಆರೋಪ ಹೊರಿಸುತ್ತಿರುವ ಯುವತಿ ಈ ಮೊದಲು ಕೂಡ  ಇದೇ ರೀತಿಯಲ್ಲಿ ನನಗೆ ಬೆದರಿಕೆ ಒಡ್ಡಿದ್ದಳು. ನಾನು ನನ್ನ ವಕೀಲರ ಮೂಲಕ  ಒಂದು ನೋಟಿಸ್ ಜಾರಿ ಮಾಡಿದ್ದೆ. ಆದರೆ ಅದಕ್ಕೆ ಆಕೆ ಸ್ಪಂದಿಸಲಿಲ್ಲ. ಆಕೆಯ ಜತೆ ನನಗೆ ಸಾಮಾನ್ಯ ಪರಿಚಯವಿದೆಯಷ್ಟೇ" ಎಂದು ವೇದವಾ ಪ್ರತಿಕ್ರಿಯಿಸಿದ್ದಾರೆ. 

Share this Story:

Follow Webdunia kannada