ಬಾಳಿಗಾ ಕೊಲೆ ಪ್ರಕರಣ: ಎರಡನೇ ಆರೋಪಿಗೆ ಜಾಮೀನು

Webdunia
ಸೋಮವಾರ, 31 ಅಕ್ಟೋಬರ್ 2016 (18:26 IST)
ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ಪ್ರಕರಣದ ಎರಡನೇ ಆರೋಪಿ ಶ್ರೀಕಾಂತ್‌ಗೆ ಜಾಮೀನು ಸಿಕ್ಕಿದೆ. 
 
ನಗರದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪಿಗೆ ಷರತ್ತುಬದ್ಧ ಜಾಮೀನು ನೀಡಿದೆ. ಈತ ಪ್ರಕರಣದ ಮೊದಲನೇ ಆರೋಪಿ ನರೇಶ್ ಶೆಣೈಯ ಸಹಚರನಾಗಿದ್ದಾನೆ.   
 
ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ್ ಬಾಳಿಗಾ ಕೊಲೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಕಳೆದ ಜೂನ್ ತಿಂಗಳಲ್ಲಿ ಶ್ರೀಕಾಂತ್ ಬಂಧನವಾಗಿತ್ತು. ಜುಲೈ ತಿಂಗಳಾಂತ್ಯದಲ್ಲಾತ ಜಾಮೀನು ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ. 
 
ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈಗೆ ಹೈಕೋರ್ಟ್ ಈಗಾಗಲೇ ಜಾಮೀನು ನೀಡಿದೆ. ಕೊಲೆಯಲ್ಲಿ ಶ್ರೀಕಾಂತ ಪಾತ್ರವಿಲ್ಲ. ಹತ್ಯೆ ಸಂಚು ರೂಪಿಸುವುದರಲ್ಲಿ ಮಾತ್ರ ಆತ ಪಾಲ್ಗೊಂಡಿದ್ದ ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಆರೋಪಿ ಪರ ವಕೀಲರು ನಡೆಸಿದ ವಾದವನ್ನು ಪರಿಗಣಿಸಿದ ಕೋರ್ಟ್ ಆತನಿಗೆ ಜಾಮೀನು ನೀಡಿದೆ. 
 
ವೈಯಕ್ತಿತ ಭದ್ರತೆ, 1 ಲಕ್ಷ ರೂಪಾಯಿ ಬಾಂಡ್ ನೀಡಬೇಕು. ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದು, ಸಾಕ್ಷ್ಯನಾಶ ಮಾಡುವುದು ಸಲ್ಲದು. ನ್ಯಾಯಾಲಯ ಮತ್ತು ಪೊಲೀಸ್ ಠಾಣೆಗೆ ಕರೆದಾಗ ತಪ್ಪದೆ ಹಾಜರಾಗಬೇಕು ಎಂದು ಕೋರ್ಟ್ ಷರತ್ತು ವಿಧಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶಿವಮೊಗ್ಗದಲ್ಲಿ ಎಸ್ಎಸ್ಎಲ್ ಸಿ ವಿದ್ಯಾರ್ಥಿಯನ್ನು ಹತ್ಯೆ ಮಾಡಿದ ಅನ್ಯಕೋಮಿನ ಅಪ್ರಾಪ್ತರು: ಆರ್ ಅಶೋಕ್ ಆಕ್ರೋಶ

ಯುವಜನರ ಕಣ್ಣೀರು, ಹೋರಾಟ ನಿಮಗೆ ಕಾಣುತ್ತಿಲ್ಲವೇ: ವಿಜಯೇಂದ್ರ

ನೀವು ಸೆಗಣಿ ತಿನ್ನಿ, ನಾವು ಬೀಫ್ ತಿಂತೀವಿ: ಹಿಂದೂಗಳ ಕೆಂಗಣ್ಣಿಗೆ ಗುರಿಯಾದ ಕೇರಳ ಸಚಿವ ಶಿವನ್ ಕುಟ್ಟಿ ಹೇಳಿಕೆ

ಮೋದಿ ಜೀ ನಿಮಗೆ ನಾಚಿಕೆ ಎಂದರೆ ಏನು ಅಂತ ನಾನು ಹೇಳ್ತೀನಿ ಕೇಳಿ: ರಾಹುಲ್ ಗಾಂಧಿ

ರಾಷ್ಟ್ರ ರಾಜಧಾನಿಯಲ್ಲಿ ಅರೆಬೆತ್ತಲೆ ಪ್ರತಿಭಟನೆಗೆ ಕಾಂಗ್ರೆಸ್‌ ನಾಯಕರಿಂದಲೇ ಅಪಸ್ವರ

ಮುಂದಿನ ಸುದ್ದಿ
Show comments