Select Your Language

Notifications

webdunia
webdunia
webdunia
webdunia

ಪತಿಯ ಅನೈತಿಕ ಸಂಬಂಧ: ಆತ್ಮಹತ್ಯೆಗೆ ಶರಣಾದ ವೈದ್ಯೆ

ಪತಿಯ ಅನೈತಿಕ ಸಂಬಂಧ: ಆತ್ಮಹತ್ಯೆಗೆ ಶರಣಾದ ವೈದ್ಯೆ
ಬೆಂಗಳೂರು , ಶುಕ್ರವಾರ, 31 ಅಕ್ಟೋಬರ್ 2014 (18:26 IST)
28 ವರ್ಷ ವಯಸ್ಸಿನ ಆಯುರ್ವೇದಿಕ್ ವೈದ್ಯೆಯೊಬ್ಬರು ತಮ್ಮ  ಫ್ಲಾಟ್‌ನ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ರಾಜರಾಜೇಶ್ವರಿ ನಗರದಲ್ಲಿ ವರದಿಯಾಗಿದೆ. ಮಂಡ್ಯದ ಕುಮುದಾ ನಂದೀಪ್ ತನ್ನ ಎರಡೂವರೆ ವರ್ಷ ವಯಸ್ಸಿನ ಪುತ್ರಿಯ ಎದುರೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ವೈದ್ಯ ಪತಿ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರಿಂದ ತೀವ್ರ ಬೇಸರಗೊಂಡಿದ್ದ ಕುಮುದಾ ಆತ್ಮಹತ್ಯೆಗೆ ಶರಣಾದರು. 
 
ಕುಮುದಾ ಪತಿ ನಂದೀಪ್ ಬನ್ನಪ್ಪಾ ತಪ್ಪಿಸಿಕೊಂಡಿದ್ದು, ಸಂಶಯಾಸ್ಪದ ಸಾವನ್ನು ಕೂಡ ಪೊಲೀಸರು ತಳ್ಳಿಹಾಕಿಲ್ಲ. ಕುಮುದಾ ಪತಿಯ ಮನೆಯವರು ತಮ್ಮ ಪುತ್ರನನ್ನು ನೋಡಲು ಮನೆಯ ಬಾಗಿಲು ತಟ್ಟಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಆಗ ಮಗು ಒಳಗಿನಿಂದ ಅಳುವುದನ್ನು ನೋಡಿ ಗಾಬರಿಗೊಂಡು ಕಿಟಕಿ ಬಾಗಿಲು ತೆರೆದುನೋಡಿದಾಗ ಕುಮುದಾ ನೇಣು ಹಾಕಿಕೊಂಡಿದ್ದು ಕಂಡುಬಂತು.
 
ಈ ನಡುವೆ ಕುಮುದಾ ಕುಟುಂಬವು ಪೊಲೀಸರಿಗೆ ನಂದೀಪ್ ಪತ್ನಿಯನ್ನು ಕೊಂದಿದ್ದಾನೆಂದು ದೂರು ನೀಡಿದ್ದಾರೆ. ನಂದೀಪ್ ಮತ್ತು ಕುಮುದಾ ಮೈಸೂರಿನಲ್ಲಿ ಕಾಲೇಜು ಸಹಪಾಠಿಗಳಾಗಿದ್ದು, 2008ರಲ್ಲಿ ಕುಟುಂಬದ ವಿರೋಧದ ನಡುವೆ ಮದುವೆಯಾಗಿದ್ದರು. ಆದರೆ ನಂದೀಪ್ ವೈದ್ಯೆಯೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರಿಂದ ದಾಂಪತ್ಯದಲ್ಲಿ ವಿರಸ ಮೂಡಿತ್ತು. ನಂದೀಪ್ ವೈದ್ಯೆಯೊಂದಿಗೆ ಪ್ರಣಯದಲ್ಲಿದ್ದಾಗ ಕುಮುದಾ ತಂದೆಗೆ ಸಿಕ್ಕಿಬಿದ್ದಿದ್ದರು.

ಬಳಿಕ ಮಹಿಳೆ ಕುಮುದಾ ತಂದೆಗೆ ಕ್ಷಮಾಪಣೆ ಕೇಳಿದ್ದರೂ ನಂದೀಪ್ ಅವಳೊಂದಿಗೆ ಸರಸ ಮುಂದುವರಿಸಿದ್ದ. ಗುರುವಾರ ನಂದೀಪ್ ಪ್ರೇಯಸಿ ಬರೆದ ಪತ್ರವನ್ನು ಕುಮುದಾ ನೋಡಿ ಕೋಪಗೊಂಡಳು. ಇಬ್ಬರ ನಡುವೆ ಮಾತಿನ ಚಕಮಕಿಯಲ್ಲಿ ನಂದೀಪ್ ಕುಮುದಾಳಿಗೆ ಥಳಿಸಿ ಮನೆಯಿಂದ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

Share this Story:

Follow Webdunia kannada