Webdunia - Bharat's app for daily news and videos

Install App

ಪ್ರಭಾ ಅಸುನೀಗಿದ ರಸ್ತೆಗೆ ಪ್ರಭಾಸ್ ವಾಕ್ ಎಂದು ಹೆಸರಿಟ್ಟ ಆಸ್ಟ್ರೇಲಿಯಾ

Webdunia
ಮಂಗಳವಾರ, 24 ನವೆಂಬರ್ 2015 (18:39 IST)
ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿರುವ ಪಾದಚಾರಿ ಮಾರ್ಗಕ್ಕೆ ಪ್ರಭಾಸ್ ವಾಕ್ ಎಂದೇ ಹೆಸರಿಡುವ ಮೂಲಕ ಅಲ್ಲಿನ ಸರ್ಕಾರ ವಿಶೇಷ ಗೌರವ ತೋರಿದೆ. ಆಸ್ಟ್ರೇಲಿಯಾದಲ್ಲಿ ಪ್ರಭಾ ಅವರ ಸ್ಮಾರಕವನ್ನು ಅನಾವರಣ ಮಾಡಲಾಯಿತು.  ಕರ್ನಾಟಕ ಮೂಲದ ಪ್ರಭಾಅರುಣ್ ಕುಮಾರ್ ಮೆಲ್ಬರ್ನ್‌ನ ಉದ್ಯಾನದ  ಪಾದಚಾರಿ ಮಾರ್ಗದಲ್ಲಿ  ಆಫೀಸ್ ಕೆಲಸ ಮುಗಿಸಿ ತೆರಳುತ್ತಿದ್ದಾಗ ದುಷ್ಕರ್ಮಿಯೊಬ್ಬ ಕತ್ತು ಸೀಳಿ ಕೊಲೆ ಮಾಡಿದ್ದ.

ಪ್ರಭಾ ತನ್ನ ಪತಿಯೊಂದಿಗೆ ಆಗುಂತಕನೊಬ್ಬ ತನ್ನನ್ನ  ಹಿಂಬಾಲಿಸುತ್ತಿದ್ದಾನೆಂದು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗಲೇ ದುಷ್ಕರ್ಮಿಯೊಬ್ಬ ಇರಿದಿದ್ದರಿಂದ ಮೊಬೈಲ್ ಸ್ತಬ್ಧವಾಗಿತ್ತು.  ಸಿಡ್ನಿಯ ಮೈಂಡ್ ಟ್ರೀ ಕಂಪನಿ ಉದ್ಯೋಗಿಯಾಗಿದ್ದ ಪ್ರಭಾ ಅವರನ್ನು ಕಳೆದ ಮಾರ್ಚ್‌ನಲ್ಲಿ ಹತ್ಯೆ ಮಾಡಲಾಗಿದ್ದು, ಇದುವರೆಗೆ ಪ್ರಭಾ ಹತ್ಯೆಕೋರನ ಸುಳಿವು ಸಿಕ್ಕಿಲ್ಲ. ಪ್ರಭಾ ಆ ಪಾದಚಾರಿ ಮಾರ್ಗದಲ್ಲಿ  ಕಡೆಯ ಹೆಜ್ಜೆಗಳನ್ನು ಇಟ್ಟಿದ್ದರಿಂದ ಆ ಮಾರ್ಗಕ್ಕೆ ಪ್ರಭಾ ಹೆಸರನ್ನು ಇಡಲಾಗಿದೆ.
 
ಪ್ರಭಾ ಪುತ್ರಿ, ಪತಿ ಮತ್ತು ತಂದೆ, ತಾಯಿಗಳು ಮತ್ತು ಸ್ನೇಹಿತರು ಕಳೆದ ಭಾನುವಾರ ಪ್ರಭಾ 42ನೇ ಹುಟ್ಟುಹಬ್ಬದ ದಿನ ಆ ಪಾರ್ಕ್‌ನಲ್ಲಿ ಹಾಜರಿದ್ದರು. ಈ ದುರ್ದಿನದಂದು ಪ್ರಭಾ ಕಾಲುನಡಿಗೆಯಲ್ಲಿ ತೆರಳಿದ ಮಾರ್ಗದಲ್ಲೇ ಅವರ ಕುಟುಂಬ ಕೂಡ ತೆರಳಿ ಗೌರವ ಸಲ್ಲಿಸಿತು.  ನ್ಯೂ ಸೌತ್ ವೇಲ್ಸ್ ಪೊಲೀಸ್ ಪ್ರಭಾರ  ಸ್ಮರಣೀಯ ಸೇವೆಯಲ್ಲಿ ಭಾಗವಹಿಸಲು ಅವರ ಕುಟುಂಬಕ್ಕೆ ಆಸ್ಟ್ರೇಲಿಯಾಕ್ಕೆ ತೆರಳಲು ನೆರವಾಗಿತ್ತು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments