Select Your Language

Notifications

webdunia
webdunia
webdunia
webdunia

ಆದಾಯ ಮೀರಿದ ಆಸ್ತಿ: ಯಡಿಯೂರಪ್ಪ, ಈಶ್ವರಪ್ಪಗೆ ಮತ್ತೆ ಸಂಕಷ್ಟ

ಆದಾಯ ಮೀರಿದ ಆಸ್ತಿ: ಯಡಿಯೂರಪ್ಪ, ಈಶ್ವರಪ್ಪಗೆ ಮತ್ತೆ ಸಂಕಷ್ಟ
ಬೆಂಗಳೂರು , ಮಂಗಳವಾರ, 21 ಅಕ್ಟೋಬರ್ 2014 (11:39 IST)
ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರು ಮತ್ತೆ ಸಂಕಷ್ಟದಲ್ಲಿ ಸಿಕ್ಕಿಬಿದ್ದಿದ್ದಾರೆ. ಬಿ.ಎಸ್. ಯಡಿಯೂರಪ್ಪ, ರಾಘವೇಂದ್ರ ಯಡಿಯೂರಪ್ಪ ಪುತ್ರಿ ಅರುಣಾದೇವಿ ಮತ್ತು ಬಿಜೆಪಿ ಮುಖಂಡ ಈಶ್ವರಪ್ಪ ವಿರುದ್ಧ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದು ಮಾಡಿ ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆ ಮುಂದುವರಿಸಲು ಆದೇಶ ನೀಡಿದೆ. ಹೊಸದಾಗಿ ಅರ್ಜಿ ಪರಿಗಣಿಸಲು ಅದು ಸೂಚಿಸಿದೆ.  ಪೂರ್ವಾನುಮತಿ ಪಡೆಯಲಿಲ್ಲವೆಂದು ಕಾರಣದ ಮೇಲೆ  ಪ್ರಕರಣವನ್ನು ವಜಾ ಗೊಳಿಸಿ ಕೆಳನ್ಯಾಯಾಲಯ ಆದೇಶ ನೀಡಿತ್ತು.

ಇದನ್ನು ಪ್ರಶ್ನಿಸಿ ದೂರುದಾರ ವಿನೋದ್ ಹೈಕೋರ್ಟ್‌‍ಗೆ ಮೇಲ್ಮನವಿ ಸಲ್ಲಿಸಿದ್ದರು. ವಿನೋದ್  ತಮ್ಮ ಅರ್ಜಿಯಲ್ಲಿ ಯಡಿಯೂರಪ್ಪ ಹಿಂದಿನ ಶಾಸಕ ಸ್ಥಾನದ ಅವಧಿ ಮುಕ್ತಾಯವಾಗಿರುವುದರಿಂದ ಈಗ ಅರ್ಜಿಯನ್ನು ಪುರಸ್ಕರಿಸಬೇಕೆಂದು ಕೋರಿದ್ದರು. ಇದರಿಂದಾಗಿ ಕೋರ್ಟ್ ಕೆಳನ್ಯಾಯಾಲಯದ ಆದೇಶವನ್ನು ರದ್ದು ಮಾಡಿ ಹೊಸದಾಗಿ ಅರ್ಜಿಯನ್ನು ಪರಿಗಣಿಸಲು ಹೈಕೋರ್ಟ್  ಏಕಸದಸ್ಯ ಪೀಠ ಆದೇಶಿಸಿದೆ.

ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಅರಣ್ಯ ಭೂಮಿ ಕಬಳಿಸಿದ ಆರೋಪ ಯಡಿಯೂರಪ್ಪ ವಿರುದ್ಧ ಕೇಳಿಬಂದಿದೆ. ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿಯಾಗಿದ್ದ ಹುಣಸೆಕಟ್ಟೆ ಪ್ರದೇಶದಲ್ಲಿ 69 ಎಕರೆ ಆಸ್ತಿಯನ್ನು ಬೇನಾಮಿದಾರರ ಹೆಸರಿನಲ್ಲಿ ಕೊಂಡುಕೊಂಡಿದ್ದರು. ಧವಳಗಿರಿ ಎಸ್ಟೇಟ್ ಹೆಸರಿನಲ್ಲಿ ಅನುಮತಿ ಪಡೆದಿರುವ ಆರೋಪವನ್ನು ಅವರ ವಿರುದ್ಧ ಹೊರಿಸಲಾಗಿದೆ.   ಬೇನಾಮಿ ಹೆಸರಿನಲ್ಲಿ ಗಾರ್ಮೆಂಟ್ಸ್ ತೆರೆಯಲು ಅವರು ಅನುಮತಿ ನೀಡಿದ್ದರು. 

 ಯಡಿಯೂರಪ್ಪ ಅವರ ಆಸ್ತಿ 11 ತಿಂಗಳಲ್ಲಿ ಒಂದು ಕೋಟಿ ರೂ. ಹೆಚ್ಚಾಗಿದೆ. 2013ರಲ್ಲಿ ನಾಮಪತ್ರದೊಂದಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ  ತಮ್ಮ ಆಸ್ತಿಯನ್ನು 5,96,86,750 ರೂ.ಗಳೆಂದು ಘೋಷಿಸಿದ್ದರು. ಆದರೆ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಿದ ನಾಮಪತ್ರದಲ್ಲಿ ಅವರ ಆಸ್ತಿಯನ್ನು 6,97, 46, 267 ರೂ. ಎಂದು ಘೋಷಿಸಿದ್ದರು.

Share this Story:

Follow Webdunia kannada