ಸದನದಲ್ಲಿ ಕಲಾಪಗಳು ಸರಿಯಾಗಿ ನಡೆಯುತ್ತಿಲ್ಲ. ಕಲಾಪದ ನಡುವಳಿಗಳಲ್ಲಿ ಬದಲಾವಣೆ ತರಲು ಇಂದು ಸಭಾಪತಿ ಕೆ.ಬಿ.ಕೋಳಿವಾಡ್ ಅವರು ರಾಜ್ಯಪಾಲ ವಜೂಬಾಯಿ ವಾಲಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ರಾಜ್ಯಪಾಲ ವಜೂಬಾಯಿ ವಾಲಾ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಕನಿಷ್ಟ ನಾಲ್ಕು ಗಂಟೆಯಾದರು ಕಲಾಪ ಸರಿಯಾಗಿ ನಡೆಯಬೇಕಾಗಿದೆ. ಆದರೆ, ನಾನು ಸಭಾಪತಿಯಾದ ಬಳಿಕ ಒಂದು ದಿನವು ಕಲಾಪವನ್ನು ನಡೆಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಸದನದಲ್ಲಿ ವಿಧೇಯಕಗಳು ಹಾಗೂ ಬೇಡಿಕೆಗಳ ಕುರಿತು ಚರ್ಚೆ ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಲಾಪದ ನಡುವಳಿಯಲ್ಲಿ ಬದಲಾವಣೆ ತರಲು ನಾವು ಮುಂದಾಗಿದ್ದು, ಇಂದು ರಾಜ್ಯಪಾಲ ವಜೂಬಾಯಿ ವಾಲಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ಕಲಾಪದ ನಡುವಳಿಗಳಲ್ಲಿ ಬದಲಾವಣೆ ತರಲು ರಾಜ್ಯಪಾಲರು ಸಹಮತ ಸೂಚಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ನಾನು ಸಭಾಪತಿಯಾದ ಬಳಿಕ ಇದೇ ಮೊದಲು ಬಾರಿ ರಾಜ್ಯಪಾಲ ವಜೂಬಾಯಿ ವಾಲಾ ಅವರನ್ನು ಭೇಟಿಯಾಗಿದ್ದೇನೆ ಎಂದು ಸಭಾಪತಿ ಕೆ.ಬಿ.ಕೋಳಿವಾಡ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.