ಬಿಜೆಪಿ ಧರಣಿ: ವಿಧಾನಸಭೆ ಕಲಾಪ ಸೋಮುವಾರಕ್ಕೆ ಮುಂದೂಡಿಕೆ

Webdunia
ಶುಕ್ರವಾರ, 17 ಮಾರ್ಚ್ 2017 (12:42 IST)
ಡೈರಿ ವಿಷಯ ಚರ್ಚೆಗೆ ಅವಕಾಶ ಕೊಡುತ್ತಿಲ್ಲ ಎಂದು ಬಿಜೆಪಿ ಮುಖಂಡರು ಧರಣಿ ಮುಂದುವರಿಸಿದ ಹಿನ್ನೆಲೆಯಲ್ಲಿ  ವಿಧಾನಸಭೆ ಕಲಾಪವನ್ನು ಸ್ಪೀಕರ್ ಕೆ.ಬಿ.ಕೋಳಿವಾಡ್ ಸೋಮುವಾರಕ್ಕೆ ಮುಂದೂಡಿದ್ದಾರೆ.
 
ಸ್ಪೀಕರ್ ಕೋಳಿವಾಡ್ ತಮ್ಮ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷಗಳ ನಾಯಕರ ಸಭೆ ಕರೆದು ಸಂಧಾನಕ್ಕೆ ಪ್ರಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡಿದ್ದಾರೆ.
 
ಡೈರಿಯ ಬಗ್ಗೆ ಸದನದಲ್ಲಿ ಚರ್ಚೆಯಾಗುವವರೆಗೆ ಸದನದ ಕಲಾಪ ನಡೆಯಲು ಬಿಡುವುದಿಲ್ಲ. ಚರ್ಚೆ ನಡೆದಲ್ಲಿ ಸಚಿವರ ಬ್ರಹ್ಮಾಂಡ್ ಭ್ರಷ್ಟಾಚಾರ ಬಯಲಾಗುತ್ತದೆ ಎನ್ನುವ ಆತಂಕದಿಂದ ಸರಕಾರ ಅಡ್ಡಿಪಡಿಸುತ್ತಿದೆ ಎಂದು ವಿಪಕ್ಷಗಳ ನಾಯಕರು ಆರೋಪಿಸಿದ್ದಾರೆ.
 
ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಇದೊಂದು ರಾಜಕೀಯ ಸಂಚು. ವಿಪಕ್ಷಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವದು ಬಿಟ್ಟು ಕೆಟ್ಟ ರಾಜಕೀಯದಲ್ಲಿ ನಿರತವಾಗಿವೆ ಎಂದು ತಿರುಗೇಟು ನೀಡಿದರು.
 
ನಮ್ಮ ಬಜೆಟ್‌ಗೆ ಜನರಿಂದ ಮಾಧ್ಯಮಗಳಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿರುವುದು ಬಿಜೆಪಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಿಜೆಪಿಯವರು ಹತಾಷರಾಗಿದ್ದಾರೆ ಎಂದು ಲೇವಡಿ ಮಾಡಿದರು.
 
ಸಹಾರಾ ಬಿರ್ಲಾ ಕೇಸ್‌ನಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಕೋರ್ಟ್ ಕೂಡಾ ಡೈರಿ ಬಗ್ಗೆ ವಿಚಾರಣೆ ನಡೆಸಲು ತಿರಸ್ಕರಿಸಿದೆ. ಅದಾಗ್ಯೂ ಬಿಜೆಪಿಯವರು ಅನಗತ್ಯವಾಗಿ ಧರಣಿ ಮುಂದುವರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಚೂರಿ ಇರಿತಕ್ಕೊಳಗಾದ ರೀತಿಯಲ್ಲಿ ಶವಪತ್ತೆ ಪ್ರಕರಣ, ಮೂವರು ಅರೆಸ್ಟ್‌

ಗಲ್ಫ್ ಆಫ್ ಓಮನ್‌ನಲ್ಲಿ ತೈಲ ಟ್ಯಾಂಕರ್ ಮೇಲೆ ದಾಳಿ, ಭಾರತೀಯ ಪ್ರಜೆ ಸಾವು

ರೇಷ್ಮೆ ಕಾರ್ಖಾನೆ ಮುಚ್ಚುವ ಬಿಜೆಪಿ ಆರೋಪ ಬಗ್ಗೆ ಎಚ್‌ಸಿ ಮಹದೇವಪ್ಪ ಪ್ರತಿಕ್ರಿಯೆ

ಇದೇ 3ರಂದು ಗಲ್ಫ್‌ ರಾಷ್ಟ್ರಗಳ ಕಡೆ ವಿಮಾನ ಪ್ರಯಾಣ ಮಾಡಲಿರುವವರು ಈ ಸುದ್ದಿ ಓದಲೇ ಬೇಕು

ಪಶ್ಚಿಮ ಬಂಗಾಳ ಪರಿವರ್ಷತೆನೆ ಸಿದ್ಧವಾಗಿದೆ: ರಾಜನಾಥ್ ಸಿಂಗ್‌

ಮುಂದಿನ ಸುದ್ದಿ
Show comments