Select Your Language

Notifications

webdunia
webdunia
webdunia
webdunia

ಸದನದಲ್ಲಿ ವಾಚ್ ಸಮರ ಅಂತ್ಯ, ಸ್ಪೀಕರ್ ಭರವಸೆ ಮೇರೆಗೆ ಧರಣಿ ಕೈ ಬಿಟ್ಟ ಬಿಜೆಪಿ ಶಾಸಕರು

ಸದನದಲ್ಲಿ ವಾಚ್ ಸಮರ ಅಂತ್ಯ, ಸ್ಪೀಕರ್ ಭರವಸೆ ಮೇರೆಗೆ ಧರಣಿ ಕೈ ಬಿಟ್ಟ ಬಿಜೆಪಿ ಶಾಸಕರು
ಬೆಂಗಳೂರು , ಗುರುವಾರ, 3 ಮಾರ್ಚ್ 2016 (12:05 IST)
ಇಂದು ವಿಧಾನಸಭೆ ಕಲಾಪದಲ್ಲಿ  ಸಿಎಂ ಸಿದ್ದರಾಮಯ್ಯ ದುಬಾರಿ ವಾಚ್ ಪ್ರಕರಣ ತಾರ್ಕಿಕ ಅಂತ್ಯ ಕಂಡಿದೆ. ಸದನ ಆರಂಭದ ಮೊದಲು ತಾರ್ಕಿಕ ಅಂತ್ಯ ಕಾಣಲು ವಿಫಲವಾದ ಕಾರಣ ಬಿಜೆಪಿ ಸಭಾತ್ಯಾಗ ಮಾಡಲು ಮುಂದಾಗಿತ್ತು . ಇದೇ ವೇಳೆ ಬಿಜೆಜಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಬಿಜೆಪಿ ಶಾಸಕರು ಧರಣಿ ನಡೆಸಿದ್ದರು. ಸರ್ಕಾರ ಸ್ಪಷ್ಟ ಉತ್ತರ ನೀಡುವಂತೆ ಬಿಜೆಪಿ ನಾಯಕರು ಆಗ್ರಹಿಸಿದ್ದರು. ಸರ್ಕಾರದಿಂದ ಸ್ಪಷ್ಟ ಉತ್ತರ ಕೊಡಿಸುವುದಾಗಿ ಭರವಸೆ ನೀಡಿದ ಸ್ಪೀಕರ್, ಬಳಿಕ ಬಿಜೆಪಿ ಸದಸ್ಯರು ಧರಣಿ ಕೈ ಬಿಟ್ಟರು.
 

ಇನ್ನೂ ರಾಜ್ಯಪಾಲರ ಭಾಷಣದ ಕುರಿತು ಸದನದಲ್ಲಿ ಚರ್ಚೆ ಮಾಡಲಾಯಿತು. ಅಲ್ಲದೇ ಕಲಾಪ ಆರಂಭಕ್ಕೂ ಮುನ್ನ ಬಿಜೆಪಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸಭೆ ನಡೆಸಿದ್ದರು. ಸದನದಲ್ಲಿ ಬರಗಾಲದ ಕುರಿತು ಪ್ರಸ್ತಾಪ ಮಾಡಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ. ರೈತರ ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದೆ. 
 
 
ಇನ್ನೂ ವಿಧಾನಪರಿಷತ್ ಕಲಾಪದಲ್ಲೂ ಸಿಎಂ ದುಬಾರಿ ವಾಚ್ ವಿವಾದ ಪ್ರಸ್ತಾಪವಾಯ್ತು. ಈ ಕುರಿತಂತೆ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಮಾತನಾಡಿದ್ದರು. ಸದನದ ಒಳಗೆ ಚರ್ಚೆ ನಡೆಸಲು ಸ್ಪೀಕರ್ ಬೀಡುತ್ತಿಲ್ಲ ಎಂದ ಅವರು, ಸಿಎಂ ದುಬಾರಿ ವಾಚ್ ಕುರಿತು ಜನರ ಮುಂದೆ ಈಡುತ್ತೇವೆ. ಸದನದ ಹೊರಗೆ ಹೋರಾಟ ಮಾಡಲು ಬಿಡುವುದಿಲ್ಲ. ಆದರೂ ಸಿಎಂ ದುಬಾರಿ ವಾಚ್ ಬಗ್ಗೆ ಜನರ ಮುಂದೆ ಈಡುತ್ತೇವೆ ಎಂದು ಪರಿಷತ್‌ನಲ್ಲಿ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಹೇಳಿದ್ದರು. 

Share this Story:

Follow Webdunia kannada