Webdunia - Bharat's app for daily news and videos

Install App

ಉಭಯ ಸದನಗಳಲ್ಲಿ ವಾಚ್ ಕದನ: ವಿಪಕ್ಷಗಳ ಸದಸ್ಯರಿಂದ ಕೋಲಾಹಲ

Webdunia
ಬುಧವಾರ, 2 ಮಾರ್ಚ್ 2016 (12:41 IST)
ಇವತ್ತೂ ಕೂಡ ವಿಧಾನಸಭಾ ಕಲಾಪದಲ್ಲಿ ಸಿಎಂ ವಾಚ್‌ಗೆ ಸಂಬಂಧಪಟ್ಟಂತೆ ಗದ್ದಲ ಮುಂದುವರೆದಿದೆ. ಸದನದಲ್ಲಿ ಚರ್ಚೆ ನಡೆಯುತ್ತಿದ್ದಂತೆ ವಾಚ್ ಕುರಿತಂತೆ ಚರ್ಚೆ ಕಾವೇರಿತ್ತು. ಪ್ರಾರಂಭದಲ್ಲೇ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಿಪಕ್ಷಗಳು, ದುಬಾರಿ ವಾಚ್ ಕುರಿತಂತೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡುವಂತೆ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. 
 
ಮೊದಲಿಗೆ ಈ ಕುರಿತಂತೆ ಪ್ರಸ್ತಾಪ ಮಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ದುವಾರಿ ವಾಚ್ ಬಗ್ಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡುವಂತೆ ಪ್ರತಿಪಕ್ಷ ನಾಯಕ ಶೆಟ್ಟರ್ ಒತ್ತಾಯ ಮಾಡಿದ್ರು. ಅತ್ಯಂತ ಗಂಭೀರವಾದ ವಿಚಾರವಿದು ಎಂದ ಶೆಟ್ಟರ್, ಈ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡುವಂತೆ ವಿಧಾನಸಭಾ ಸ್ಪೀಕರ್ ಕಾಗೋಡ ತಿಮ್ಮಪ್ಪ ಅವರನ್ನು ಮನವಿ ಮಾಡಿದ್ದರು. ಇದೇ ವೇಳೆ ಬಿಜೆಪಿಗೆ ಜೆಡಿಎಸ್ ನಾಯಕರು ಕೂಡ ಸಾಥ್ ನೀಡಿದ್ದರು. 
 
ಇನ್ನೂ ಕಲಾಪದ ವೇಳೆ ವಾಚ್ ಕದನ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ, ಸದನದಲ್ಲಿ ಧಿಕ್ಕಾರ ಕೂಗಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೊರನಡೆದರು. ಸದನ ನಾಯಕರನ್ನು ಕರೆಸಿ ಮಾತುಕತೆಗೆ ಅವಕಾಶ ಮಾಡಿಕೊಡುತ್ತೇನೆ ಎಂದ ಉಪಸಭಾಪತಿ ಕಾಗೋಡು ತಿಮ್ಮಪ್ಪ, ಬಳಿಕ ವಿಧಾನಸಭಾ ಕಲಾಪವನ್ನು ಅರ್ಧಗಂಟೆಗಳ ಕಾಲ ಮುಂದೂಡಿದ್ದರು. 
 
ಬಳಿಕ ವಿಧಾನಸಭೆ ಉಭಯ ನಾಯಕರ ಜೊತೆ ಸ್ಪೀಕರ್ ಕಾಗೋಡು ತಿಮ್ಮಪ್ಪ ತಮ್ಮ ಕೊಠಡಿಯಲ್ಲಿ ಸಂಧಾನ ಸಭೆ ನಡೆಸಿದ್ದರು. ಸುಗಮ ಕಲಾಪ ನಡೆಸುವ ಕುರಿತು ಸಮಾಲೋಚನೆ ನಡೆಸಿದ್ದರು. ಆದರೆ ಸಂಧಾನ ಸಭೆ ವಿಫಲವಾಗಿದೆ. ಇದಕ್ಕೆ ಒಪ್ಪದ ಉಭಯ ಸದನ ನಾಯಕರು ಸರ್ಕಾರ ಸಮರ್ಪಕ ಉತ್ತರ ನೀಡುವರೆಗೂ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ-ಜೆಡಿಎಸ್ ನಾಯಕರು ನಿರ್ಧಾರ ಮಾಡಿದ್ದಾರೆ. ಸಭೆಯಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಎಚ್ ಡಿ ಕುಮಾರಸ್ವಾಮಿ, ವೈಎಸ್‌ವಿ ದತ್ತಾ, ಗೋವಿಂದ ಕಾರಜೋಳ ಸೇರಿದಂತೆ ಹಲವು ಉಭಯ ಸದನಗಳ ನಾಯಕರು ಪಾಲ್ಗೊಂಡಿದ್ದರು.
 
ಮತ್ತೆ ಸದನದ ಕಲಾಪ ಆರಂಭಗೊಂಡ ಬಳಿಕ ಸದನದಲ್ಲಿ ತೆನೆ ಹೊತ್ತ ಮಹಿಳೆ, ಕಮಲ ಸಿಎಂ ಉತ್ತರಕ್ಕೆ ಬೇಡಿಕೆ ಒಡ್ಡಿದ್ದವು. ಇದೇ ವೇಳೆ ಮಾತನಾಡಿದ ಜಗದೀಶ್ ಶೆಟ್ಟರ್, ಈ ಪ್ರಕರಣದಿಂದ ಸರ್ಕಾರ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದರು. 
 
ಸಿಎಂ ದುಬಾರಿ ವಾಚ್‌ಗೆ ಸಂಬಂಧಿಸಿದಂತೆ ಪ್ರಕರಣವನ್ನು ದೊಡ್ಡದಾಗಿ ಮಾಡಿಕೊಂಡು ಸರ್ಕಾರವನ್ನು ಗೊಂದಲಕ್ಕೆ ಸಿಲುಕಿಸುವಲ್ಲಿ ಜೆಡಿಎಸ್ -ಬಿಜೆಪಿ ನಾಯಕರು ಪ್ರತಿತಂತ್ರ ರೂಪಿಸಿದ್ದಾರೆ. ಒಟ್ಟಿನಲ್ಲಿ ಸದನದಲ್ಲಿ ಸಿಎಂ ವಾಚ್ ಪ್ರಕರಣ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರಿಗೆ ಇದೊಂದು ಅಸ್ರ್ತವಾಗಿ ಮಾಡಿಕೊಂಡಿದ್ದವು.. 
 
ಈ ಹಿನ್ನೆಲೆಯಲ್ಲಿ ವಾಚ್ ವಿಚಾರವನ್ನು ಮುಂದಿಟ್ಟುಕೊಂದು ಜೆಡಿಎಸ್-ಬಿಜೆಪಿ ನಾಯಕರು ಧರಣಿ ನಡೆಸಲು ಮುಂದಾಗಿದ್ದಾರೆ. ಸರ್ಕಾರ ಸಮರ್ಪಕ ಉತ್ತರ ನೀಡುವರೆಗೂ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ-ಜೆಡಿಎಸ್ ನಾಯಕರು ನಿರ್ಧಾರ ಮಾಡಿದ್ದಾರೆ. ಈ ಕುರಿತು ಸಿಎಂ ಉತ್ತರ ನೀಡುತ್ತಾರಾ ಎಂಬುದು ಕೂತೂಹಲ ಮೂಡಿಸಿದೆ.
 
ಇತ್ತ ವಿಧಾನಪರಿಷತ್‌ನಲ್ಲೂ ಸಿಎಂ ವಾಚ್ ಪ್ರಕರಣದ ಬಗ್ಗೆ ಚರ್ಚೆ ನಡೀತು. ಜೆಡಿಎಸ್- ಸದನದ ನಾಯಕರು ಗದ್ದಲ ಆರಂಭಿಸಿದ್ದರು. ಪರಿಷತ್ಯನಲ್ಲೂ ಸಿಎಂ ವಾಚ್  ಕುರಿತು ವಿಪಕ್ಷಗಳು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆ ಪರಿಷತ್ ಕಲಾಪವನ್ನು ಸಭಾಪತಿ ಡಿ.ಹೆಚ್ ಶಂಕರಮೂರ್ತಿ ನಾಳೆ ಬೆಳಿಗ್ಗೆ 11 ಗಂಟೆಗೆ ಕಲಾಪ ಮುಂದೂಡಿದ್ದರು.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments