Webdunia - Bharat's app for daily news and videos

Install App

ಕೆಜಿಎಫ್ ನ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ, ಹೊಡೆದ ರಭಸಕ್ಕೆ ಪ್ರಜ್ಞೆ ತಪ್ಪಿದ ವಿದ್ಯಾರ್ಥಿನಿ

ಕೃಷ್ಣವೇಣಿ ಕೆ
ಗುರುವಾರ, 10 ಸೆಪ್ಟಂಬರ್ 2026 (09:51 IST)
ಕೋಲಾರ ಚಿನ್ನದ ಗಣಿ (ಕೆ.ಜಿ.ಎಫ್) ನಗರದ ಮಹಾವೀರ್ ಜೈನ್ ಕಾಲೇಜಿನಲ್ಲಿ ಕುರ್ಚಿ ಸರಿಸುವ ವಿಚಾರವಾಗಿ ವಿದ್ಯಾರ್ಥಿಗಳ ನಡುವೆ ಉಂಟಾದ ಸಣ್ಣ ಗಲಾಟೆ ವಿಕೋಪಕ್ಕೆ ತಿರುಗಿ, ಸಹಪಾಠಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಭೀಕರ ಹಲ್ಲೆ ನಡೆದಿರುವ ಘಟನೆ ವರದಿಯಾಗಿದೆ. ಈ ಸಂಪೂರ್ಣ ಕೃತ್ಯ ಕಾಲೇಜು ಕೊಠಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
 
ವರದಿಗಳ ಪ್ರಕಾರ, ತರಗತಿಯಲ್ಲಿದ್ದ ಕುರ್ಚಿಯನ್ನು ಮುಂಭಾಗಕ್ಕೆ ಸರಿಸುವ ವಿಚಾರದಲ್ಲಿ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಈ ವೇಳೆ ಕೆಲವು ಸಹಪಾಠಿಗಳು ವಿದ್ಯಾರ್ಥಿನಿಯನ್ನು ಅಸಭ್ಯವಾಗಿ ಗೇಲಿ ಮಾಡಿದ್ದಾರೆನ್ನಲಾಗಿದೆ. ಗೇಲಿ ಮಾಡುತ್ತಾ ವಿದ್ಯಾರ್ಥಿಗಳು ಆಕೆಯತ್ತ ಬರಲು ಯತ್ನಿಸಿದಾಗ, ಆಕ್ರೋಶಗೊಂಡ ವಿದ್ಯಾರ್ಥಿನಿ ಆ ಪೈಕಿ ಒಬ್ಬ ವಿದ್ಯಾರ್ಥಿಗೆ ಕೆನ್ನೆಗೆ ಹೊಡೆದಿದ್ದಾಳೆ.
 
ಇದರಿಂದ ಕೆರಳಿದ ಮತ್ತೊಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ದಾಳಿಯ ರಭಸಕ್ಕೆ ವಿದ್ಯಾರ್ಥಿನಿ ತರಗತಿಯ ನೆಲಕ್ಕೆ ಬಿದ್ದು ಮೂರ್ಛೆ ತಪ್ಪಿದ್ದಾಳೆ.
 
ತಕ್ಷಣವೇ ಗಾಯಗೊಂಡ ವಿದ್ಯಾರ್ಥಿನಿಯನ್ನು ಕೆ.ಜಿ.ಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
 
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ವಿದ್ಯಾರ್ಥಿನಿಯ ಕಡೆಯವರು ನೀಡಿದ ದೂರಿನ ಆಧಾರದ ಮೇಲೆ ಕೆ.ಜಿ.ಎಫ್‌ನ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
pic.twitter.com/18yOZZ7tXR

 

— Hate Detector ???? (@HateDetectors) September 9, 2026

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸತೀಶ್ ಜಾರಕಿಹೊಳಿ ಮನೆಯಲ್ಲಿ ಇಂದೂ ಮುಂದುವರಿದ ಇಡಿ ಶೋಧ

ಅರ್ಜೆಂಟೀನಾದಲ್ಲಿ ಅಚ್ಚರಿಯ ವಿದ್ಯಮಾನ: ಇದ್ದಕ್ಕಿದ್ದಂತೆ 29 ಕಿ.ಮೀ. ಹಿಂದೆ ಸರಿದ ಕಡಲು.. ಕಾರಣವೇನು Video

ಡಿಕೆ ಶಿವಕುಮಾರ್ ಸರ್ಕಾರ 100 ದಿನದಲ್ಲಿ ಮಾಡಿದ್ದೇನು, ಇಂದು ಘೋಷಣೆ ಮಾಡಲಿರುವ ಯೋಜನೆಗಳೇನು ಇಲ್ಲಿದೆ ವಿವರ

Karnataka Weather: ರಾಜ್ಯದಲ್ಲಿ ಇಂದು ಮಳೆಯಿರಲಿದೆಯೇ ಇಲ್ಲಿದೆ ಹವಾಮಾನ ವರದಿ

ಟಿವಿಕೆ ನೇತೃತ್ವದ ಮೈತ್ರಿಗೆ 'ಜಾತ್ಯತೀತ ಸಾಮಾಜಿಕ ನ್ಯಾಯ ವಿಜಯ ಮೈತ್ರಿಕೂಟ' ಹೆಸರು

ಮುಂದಿನ ಸುದ್ದಿ
Show comments