Webdunia - Bharat's app for daily news and videos

Install App

ಸಿದ್ದುಗೆ ಅಶೋಕ್​​ ಸವಾಲ್

Webdunia
ಗುರುವಾರ, 4 ಮೇ 2023 (16:20 IST)
ನಾನು ಕೂಡ ಬಜರಂಗಿ.. ನಮ್ಮ ಮನೆ ಹತ್ತಿರ ಬನ್ನಿ ನೋಡೊಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ KPCC ಅಧ್ಯಕ್ಷ ಡಿ.ಕೆ ಶಿವಕುಮಾರ್​​​ಗೆ ಸಚಿವ ಆರ್​​.ಅಶೋಕ್​ ಸವಾಲು ಹಾಕಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು, ಎಲ್ಲರೂ ಕೂಡ RSS, ಬಜರಂಗದಳದಿಂದ ಬಂದಿರೋದು. ನಿಮಗೆ ಬ್ಯಾನ್ ಮಾಡೋಕೆ ತಾಕತ್ತು, ಧಮ್ ಇದೆಯಾ ಎಂದು ಪ್ರಶ್ನಿಸಿದ್ರು.. ಪಾಕಿಸ್ತಾನಕ್ಕೆ ಜೈ ಅನ್ನೋ ಸಂಸ್ಕಾರ ನಮ್ಮದಲ್ಲ. ಕಾಂಗ್ರೆಸ್​ ಆಂಜನೇಯನ ಬಾಲಕ್ಕೆ ಬೆಂಕಿ ಇಟ್ಟಿದೆ.ಇದು ಇಡೀ ಕಾಂಗ್ರೆಸ್​​ ಅನ್ನೇ ಸುಟ್ಟು ಸರ್ವನಾಶ ಮಾಡುತ್ತೆ‌ ಎಂದು ಕಿಡಿಕಾರಿದ್ರು.. ಬಜರಂಗದಳ ಬ್ಯಾನ್ ವಿಚಾರದಿಂದ ಕಾಂಗ್ರೆಸ್ ಇನ್ನಷ್ಟು ಸ್ಥಾನ ಕಳೆದುಕೊಳ್ಳುತ್ತೆ. ಹಿಂದೂ ರಕ್ಷಣೆ ಮಾಡುವವವರು ಬಜರಂಗದಳದವರು. ದೇಶ, ದೇವಸ್ಥಾನಗಳನ್ನು ರಕ್ಷಣೆ ಮಾಡೋದು ಬಜರಂಗದಳ. ಕಾಂಗ್ರೆಸ್​​ನವರು ಬಜರಂಗದಳವನ್ನು PFIಗೆ ಹೋಲಿಸುವುದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ರು. ಹಿಂದೂ ವಿರೋಧಿ ಭಾವನೆಯನ್ನು ಕಾಂಗ್ರೆಸ್​ ವ್ಯಕ್ತಪಡಿಸಿದೆ.. ಇದಕ್ಕೆ ವಿರೋಧ ವ್ಯಕ್ತಪಡಿಸಿ ಎಲ್ಲ ಕಡೆ ಪ್ರತಿಭಟನೆ ನಡೆಯುತ್ತಿದೆ. ಇದೇ ಕಾರಣಕ್ಕೆ ಎಲ್ಲಾ ಕಡೆ ಹನುಮಾನ್ ಚಾಲೀಸಾ ಪಠಣ ಮಾಡಲಾಗುತ್ತದೆ. ಕಾಂಗ್ರೆಸ್​​ ದೇಶದಲ್ಲಿ ಸರ್ವನಾಶವಾಗುತ್ತದೆ. ಲಂಕೆಯಲ್ಲಿ ರಾವಣ ಸಂಹಾರ ಆದ ರೀತಿ ರಾಜ್ಯದಲ್ಲಿ ಕಾಂಗ್ರೆಸ್​​ ಧೂಳಿಪಟವಾಗುತ್ತದೆ‌. ಚುನಾವಣೆ ಸಂದರ್ಭದಲ್ಲಿ ಇದೆಲ್ಲವೂ ಕಾಂಗ್ರೆಸ್​​ಗೆ ವ್ಯತಿರಿಕ್ತವಾಗುತ್ತದೆ‌ ಎಂದು ಹೇಳಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಫ್ರೀಡಂ ಪಾರ್ಕ್‌ನ ಕಾಂಪೌಂಡ್ ನೆಲಸಮದಿಂದ ಪರಿಸರಕ್ಕೆ ಹಾನಿ: ಬಿಜೆಪಿ ದೂರು

ಮುಂಬೈ– ಪುಣೆ ಪ್ರಯಾಣಿಕರ ಜತೆ ಗುಡ್‌ನ್ಯೂಸ್ ಹಂಚಿಕೊಂಡ ನಿತಿನ್ ಗಡ್ಕರಿ

ಉತ್ತರಕಾಶಿ ಮೇಘಸ್ಫೋಟ: ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ–ಕಾಲೇಜಿಗೆ ರಜೆ ಘೋಷಣೆ

ಧರ್ಮಸ್ಥಳ, ಎಲ್ಲರ ಚಿತ್ತ ನಾಳೆಯ ಕೊನೆಯ ಪಾಯಿಂಟ್‌ನತ್ತ, ಇಂದಿನ ಶೋಧದಲ್ಲಿ ಬಿಗ್‌ಟ್ವಿಸ್ಟ್‌

ಉತ್ತರಕಾಶಿಯ ರಣಭೀಕರ ಮೇಘಸ್ಫೋಟ: ಮಿಡಿದ ಮೋದಿಯಿಂದ, ರಕ್ಷಣಾ ನೆರವು ಘೋಷಣೆ

ಮುಂದಿನ ಸುದ್ದಿ
Show comments