ಪಿಜಿಗಳನ್ನೇ ಟಾರ್ಗೆಟ್ ಮಾಡಿ ಲ್ಯಾಪ್ ಟಾಪ್ ಕದಿಯುತ್ತಿದ್ದ ಆರೋಪಿಗಳ ಬಂಧನ

Webdunia
ಮಂಗಳವಾರ, 19 ಡಿಸೆಂಬರ್ 2023 (14:42 IST)
ಪಿಜಿಗಳನ್ನೇ ಟಾರ್ಗೆಟ್ ಮಾಡಿ ಲ್ಯಾಪ್ ಟಾಪ್ ಕದಿಯುತ್ತಿದ್ದ ಮೂವರು ಆರೋಪಿಗಳನ್ನ ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.ಯುವರಾಜು, ಪ್ರಭು, ಸೆಲ್ವರಾಜು ಬಂಧಿತ ಆರೋಪಿಗಳಾಗಿದ್ದು,ಬಂಧಿತರಿಂದ 50ಲ್ಯಾಪ್ ಟಾಪ್ ಗಳು, 7 ಮೊಬೈಲ್ ಗಳು ಜಪ್ತಿ ಮಾಡಲಾಗಿದೆ.

ಕೆಆರ್ ಪುರಂನಲ್ಲಿ  ಪ್ರಭು ಮತ್ತು ಯುವರಾಜ್ ರೂಮ್ ಮಾಡಿಕೊಂಡಿದ್ರು.ಸ್ಟೂಡೆಂಟ್ಸ್ ರೀತಿ ಡ್ರೆಸ್ ಮಾಡ್ಕೊಂಡು ಪಿಜಿಗಳ ಬಳಿ ಹೋಗ್ತಿದ್ದರು.ಸಂಪೂರ್ಣ ಪಿಜಿ ಅಬ್ಸರ್ವ್ ಮಾಡಿ ಲ್ಯಾಪ್ ಟಾಪ್ ಟಾರ್ಗೆಟ್ ಮಾಡ್ತಿದ್ರು.ಯಾವ್ಯಾವ ರೂಮ್ ನಲ್ಲಿ ಲ್ಯಾಪ್‌ಟಾಪ್ ಇವೆ ಅನ್ನೋದನ್ನ ನೋಡಿಕೊಳ್ತಿದ್ರು.ರೂಮ್ ಗಳಲ್ಲಿ ಯಾರು ಇಲ್ಲದ ವೇಳೆ ಲ್ಯಾಪ್‌ಟಾಪ್ ಕಳ್ಳತನ ಮಾಡ್ತಿದ್ರು.
 
ಹಾಡು ಹಗಲೇ ಆರೋಪಿಗಳು ಕಳ್ಳತನ ಮಾಡ್ತಿದ್ದರು.ಬೆಳಗ್ಗೆ‌ 9ರಿಂದ 10ಗಂಟೆ ಟೈಮಲ್ಲಿ ಲ್ಯಾಪ್ ಟಾಪ್ ಗಳನ್ನ ಕಳ್ಳತನ ಮಾಡಿ ಕದ್ದ ಕೆಲವೇ ಗಂಟೆಗಳಲ್ಲಿ ಬಸ್ ನಲ್ಲಿ ಪಾರ್ಸಲ್ ಮಾಡಿದ್ದಾರೆ.ಚಿತ್ತೂರು ಬಸ್ ನಲ್ಲಿ ಆರೋಪಿಗಳು ಪಾರ್ಸಲ್ ಕಳಿಸ್ತಿದ್ದರು.ಅಲ್ಲಿ ಕಲೆಕ್ಟ್ ಮಾಡ್ಕೊಂಡು   ಮತ್ತೋರ್ವ ಆರೋಪಿ ಸೆಲ್ವರಾಜ್ ಸೇಲ್ ಮಾಡ್ತಿದ್ದ.ಒಂದು ಲ್ಯಾಪ್ ಟಾಪ್ ಅನ್ನ 25ಸಾವಿರಕ್ಕೆ ಸೇಲ್ ಮಾಡ್ತಿದ್ದ

.ಪ್ರತಿ ದಿನ ನಾಲ್ಕೈದು ಲ್ಯಾಪ್ ಟಾಪ್ ಆರೋಪಿಗಳು ಕದಿಯುತ್ತಿದ್ದರು.ಯಶವಂತಪುರ ಸೇರಿ ಹಲವು ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಆರೋಪಿಗಳು ಎಸೆಗಿದ್ದರು.ಪ್ರಕರಣ ದಾಖಲಿಸಿಕೊಂಡು ಮೂವರನ್ನ ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.ಸದ್ಯ ಯಶವಂತಪುರ ಪೊಲೀಸರಿಂದ ತನಿಖೆ ಮುಂದುವರೆದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಸ್ಲಿಂ ಭವನಗಳಿಗೆ 67 ಕೋಟಿ, ಹಿಂದೂಗಳಿಗೆ ದುಡ್ಡಿಲ್ಲ: ಹಿಂದೂಗಳು ವೋಟ್ ಹಾಕಿಲ್ವಾ ಎಂದ ಅಶೋಕ್

ಕಾಂಗ್ರೆಸ್ ಅವಧಿಯಲ್ಲಿ ಹೆಚ್ಚು ಬಾರಿ ನಡೆದಿತ್ತು ಮತಪಟ್ಟಿ ಪರಿಷ್ಕರಣೆ: ಹಾಗಿದ್ದರೂ ಈಗ ವಿರೋಧ ಯಾಕೆ

ನಿತೀಶ್ ಕುಮಾರ್ ಪದೇ ಪದೇ ಮೋದಿ ಕಾಲಿಗೆ ಬೀಳೋದ್ಯಾಕೆ: ವಿಡಿಯೋ ನೋಡಿ ಕೆಲವರಿಗೆ ಉರಿ

ಬೆಂಗಳೂರು ದರೋಡೆ ಪ್ರಕರಣ: ಪೊಲೀಸರ ಕಣ್ತಪ್ಪಿಸಲು ಕಳ್ಳರ ಖತರ್ನಾಕ್ ಪ್ಲ್ಯಾನ್ ಬಹಿರಂಗ

ಬಾಹ್ಯಾಕಾಶದಿಂದ ಬರೋದು ಸುಲಭ: ಪ್ರಿಯಾಂಕ್ ಖರ್ಗೆ ಎದುರದಲ್ಲೇ ಬೆಂಗಳೂರು ರಸ್ತೆ ಕಿಚಾಯಸಿದ ಶುಭಾಂಶು ಶುಕ್ಲ

ಮುಂದಿನ ಸುದ್ದಿ
Show comments