Daily Horoscope

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ಕೃಷ್ಣವೇಣಿ ಕೆ
ಗುರುವಾರ, 17 ಸೆಪ್ಟಂಬರ್ 2026 (16:27 IST)
ಮಂಗಳೂರು: ಮುಸ್ಲಿಮರೇ ಫಸ್ಟ್ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿ ವಿವಾದಕ್ಕೆ ಗುರಿಯಾಗಿದ್ದ ತುಳು ಹಾಸ್ಯ ನಟ ಅರವಿಂದ ಬೋಳಾರ್ ಈಗ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಅರವಿಂದ ಬೋಳಾರ್ ಮುಸ್ಲಿಮರನ್ನು ಹೊಗಳುವ ಭರದಲ್ಲಿ ‘ನಾನು ಎಲ್ಲೇ ಹೋದರೂ ಇದನ್ನು ಹೇಳುತ್ತೇನೆ. ನನಗೆ ಮುಸ್ಲಿಮರೇ ಮೊದಲು’ ಎಂದು ಹೇಳಿಕೆ ನೀಡಿದ್ದರು. ಅವರ ಹೇಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೇ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಅರವಿಂದ ಬೋಳಾರ್ ಮೂಲತಃ ಹಿಂದೂ. ಅವರ ಕಾರ್ಯಕ್ರಮಗಳನ್ನು ಕೇವಲ ಮುಸ್ಲಿಮರು ಮಾತ್ರ ನೋಡಲಿಲ್ಲ. ಹಿಂದೂಗಳೇ ಹೆಚ್ಚು ನೋಡಿ ಮೆಚ್ಚಿಕೊಂಡಿದ್ದರು. ಆದರೆ ಈಗ ಮುಸ್ಲಿಮರೇ ಮೊದಲು ಎಂದಿದ್ದು ಸರಿಯಲ್ಲ ಎಂದು ಹಲವರು ಛೀಮಾರಿ ಹಾಕಿದ್ದರು.

ಇದರ ಬೆನ್ನಲ್ಲೇ ಈಗ ವಿಡಿಯೋ ಸಂದೇಶ ಮೂಲಕ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ. ‘ನಮಸ್ಕಾರ, ನಾನು ನಿಮ್ಮ ಪ್ರೀತಿಯ ಅರವಿಂದ ಬೋಳಾರ್. ಸರ್ವಧರ್ಮದ ಜನರು ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದವರು. ಆದರೆ ನಾನು ಮೊನ್ನೆ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆ ನಮ್ಮ ಜನರಿಗೆ ಬೇಸರ ತಂದಿದೆ ಎಂದು ನನಗೆ ಗೊತ್ತಾಗಿದೆ. ಆದರೆ ನಾನು ಮೂಲತಃ ಹಿಂದೂ ಧರ್ಮ. ಹಿಂದೂ ಧರ್ಮ ನನ್ನ ತಾಯಿ. ಹಾಗಾಗಿ ಆ ಧರ್ಮಕ್ಕೆ ನೋವು ಮಾಡುವ ಯಾವ ಉದ್ದೇಶದಿಂದಲೂ ಹೇಳಿಕೆ ನೀಡಲಿಲ್ಲ. ನನ್ನಿಂದಾಗಿ ಬೇಸರವಾಗಿದ್ದರೆ ಕ್ಷಮಿಸಿ, ಮುಂದೆಯೂ ನನಗೆ ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಕೊಡಿ’ ಎಂದು ಮನವಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಕರುಣೆ ಎನ್ನೋದು ಸತ್ತು ಹೋಯ್ತಾ.. ಪಂಕೋಟ್ ಸೇತುವೆಯಿಂದ ಹರಿಯುವ ಸೇತಿ ನದಿಗೆ ಶ್ವಾನವನ್ನು ಎಸೆದ ಮಹಿಳೆ: Video

ಸಿಎಂ ಡಿಕೆಶಿ ಭೇಟಿಗೆ ಕೆಲವೇ ಕ್ಷಣಗಳ ಮುನ್ನ ಕಲಬುರಗಿಯಲ್ಲಿ ಸಿದ್ದರಾಮಯ್ಯ ಪ್ರತಿಮೆ ಪ್ರತ್ಯಕ್ಷ: ಏನಿದು ಮುಸುಕಿನ ಗುದ್ದಾಟ

ಮುಂದಿನ ಸುದ್ದಿ
Show comments