ಬೆಂಗಳೂರು: ಪುನೀತ್ ರಾಜಕುಮಾರ್ ಅವರ 49ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಭಾವನಾತ್ಮಕವಾಗಿ ಫೋಸ್ಟ್ ಹಂಚಿ ಶುಭಕೋರಿದ್ದಾರೆ.
'ಹುಟ್ಟುಹಬ್ಬದ ಸವಿ ನೆನಪಿನಲ್ಲಿ ಎಂದೆಂದಿಗೂ ನಮ್ಮ ಹೃದಯದಲ್ಲಿ ಅಪ್ಪು ನೆಲೆಸಿದ್ದಾರೆ' ಎಂದು ಬರೆದುಕೊಂಡಿದ್ದಾರೆ.
'ಅಪ್ಪು ಅವರು ತಮ್ಮ ಅಪ್ರತಿಮ ಪ್ರತಿಭೆ, ಕರುಣೆ ಮತ್ತು ಮಾನವೀಯತೆಯ ಮೌಲ್ಯಗಳಿಂದ ನಮ್ಮ ಹೃದಯದ ಅಂತರಾಳವನ್ನು ಸದಾ ಬೆಳಗಿಸುತ್ತಲೇ ಇದ್ದಾರೆ. ಪುನೀತ್ ರಾಜ್‌ಕುಮಾರ್ ಅವರು ಮಾನವೀಯತೆಯ ಮೌಲ್ಯಗಳ ಮೇಲೆ ಇರಿಸಿದ್ದ ಅಚಲ ನಂಬಿಕೆ, ಅವರ ಹಾದಿಯಲ್ಲಿ ನಡೆಯಲು ನಮಗೆ ಸದಾ ಸ್ಫೂರ್ತಿದಾಯಕವಾಗಿರುತ್ತದೆ' ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇಂದು ರಾಜ್ಯದಾದ್ಯಂತ ಪುನೀತ್ ಅವರ ಹುಟ್ಟು ಹಬ್ಬ ಹಿನ್ನೆಲೆ ಸ್ಫೂರ್ತಿ ದಿನವನ್ನಾಗಿ ಆಚರಿಸಲಾಯಿತು. ರಾಜ್ ಕುಟುಂಬದವರು ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ತೆರಳಿ ನಮನ ಸಲ್ಲಿಸಿದರು.