Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಮತ್ತೊಂದು ಶಿಶುವಿನ ಮೇಲೆ ಅತ್ಯಾಚಾರ ಪ್ರಕರಣ

ಬೆಂಗಳೂರಿನಲ್ಲಿ ಮತ್ತೊಂದು ಶಿಶುವಿನ ಮೇಲೆ ಅತ್ಯಾಚಾರ ಪ್ರಕರಣ
ಬೆಂಗಳೂರು , ಮಂಗಳವಾರ, 22 ಜುಲೈ 2014 (13:27 IST)
ಬೆಂಗಳೂರಿನಲ್ಲಿ ಮತ್ತೊಂದು ಶಿಶು ಅತ್ಯಾಚಾರ ಪ್ರಕರಣ ಬಯಲಾಗಿದ್ದು, ಬೆಂಗಳೂರಿನ ಹೊರವಲಯದ ತಲಘಟ್ಟಪುರದ ಬಳಿಯ  ತಟ್ಟಗುಪ್ಪೆ ಗ್ರಾಮದಲ್ಲಿ  ಜುಲೈ 18ರಂದು ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರ ಪ್ರಕರಣ ವರದಿಯಾಗಿದೆ.

ಬೆಂಗಳೂರಿನ ಕೋರಮಂಗಲದ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮಗುವಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. 
 ಯುವತಿ ಮೇಲೆ ಅತ್ಯಾಚಾರ
ನಂಜನಗೂಡಿನ ಕಳಲೆ ಗ್ರಾಮದಲ್ಲಿ 22 ವರ್ಷದ ಯುವತಿ ಮೇಲೆ ಅತ್ಯಾಚಾರ ನಡೆದ ಘಟನೆ ವರದಿಯಾಗಿದೆ. ಆರೋಪಿ ನಂದಕುಮಾರ್ ಎಂಬವನನ್ನು ಬಂಧಿಸಲಾಗಿದೆ. ಇದು ತಾಲೂಕಿನಲ್ಲಿ ನಡೆದ ಎರಡನೇ ಅತ್ಯಾಚಾರ ಪ್ರಕರಣವಾಗಿದೆ. ನಂದಕುಮಾರ್ ವಿವಾಹಿತನಾಗಿದ್ದು, 2 ದಿನಗಳ ಹಿಂದೆ ಅತ್ಯಾಚಾರ ಮಾಡಿದ್ದ.

ಈ ಬಗ್ಗೆ ಗ್ರಾಮಸ್ಥರು ರಾಜಿ ಪಂಚಾಯಿತಿ ನಡೆಸಿದರು. ಆದರೆ ಪಂಚಾಯಿತಿ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಯುವತಿ ಪೊಲೀಸರಿಗೆ ದೂರನ್ನು ನೀಡಿದ್ದಾಳೆ. 
 

Share this Story:

Follow Webdunia kannada