Select Your Language

Notifications

webdunia
webdunia
webdunia
webdunia

ಪರಿಷತ್ತಿನಲ್ಲಿ ಪ್ರತಿಧ್ವನಿಸಿದ ಸಚಿವ ಆಂಜನೇಯ ಪ್ರಕರಣ

ಪರಿಷತ್ತಿನಲ್ಲಿ ಪ್ರತಿಧ್ವನಿಸಿದ ಸಚಿವ ಆಂಜನೇಯ ಪ್ರಕರಣ
ಬೆಂಗಳೂರು , ಶುಕ್ರವಾರ, 27 ನವೆಂಬರ್ 2015 (13:33 IST)
ವಿಧಾನಪರಿಷತ್‌ನಲ್ಲಿ ಸಚಿವ ಆಂಜನೇಯ ಪ್ರಕರಣ ಪ್ರತಿಧ್ವನಿಸಿದೆ. ಈ ಪ್ರಕರಣದ ಪ್ರಸ್ತಾಪವನ್ನು ಬಿಜೆಪಿಯ ಕೆ.ಎಸ್. ಈಶ್ವರಪ್ಪ ಮಂಡಿಸಿದರು. ಈಶ್ವರಪ್ಪ ಪ್ರಸ್ತಾಪಕ್ಕೆ ಕಾಂಗ್ರೆಸ್ ಸದಸ್ಯರು ವಿರೋಧಿಸಿದಾಗ ಆಂಜನೇಯ  ಪ್ರಕರಣ ಗಂಭೀರವೆಂದು ಈಶ್ವರಪ್ಪ ಹೇಳಿದರು. ಆಂಜನೇಯ ಅವರನ್ನು ಸಚಿವಸಂಪುಟದಿಂದ ಕೂಡಲೇ ವಜಾ ಮಾಡುವಂತೆ ಒತ್ತಾಯಿಸಿದರು.

 ಆಂಜನೇಯ ಅವರು ಅಧಿಕೃತ ನಿವಾಸದಲ್ಲಿ ಸುವರ್ಣ ನ್ಯೂಸ್ ಸುದ್ದಿವಾಹಿನಿ ನಡೆಸಿದ ಕಾರ್ಯಾಚರಣೆಯಲ್ಲಿ ಆಂಜನೇಯ ಅವರ ಪತ್ನಿ ಲಂಚ ಸ್ವೀಕರಿಸಿರುವುದು ಬಯಲಾಗಿದೆ. ಇದು ಭ್ರಷ್ಟಾಚಾರದಲ್ಲಿ ತೊಡಗಿಕೊಂಡ ಅತ್ಯಂತ ಗಂಭೀರ ಪ್ರಕರಣವಾಗಿದೆ ಎಂದು ಈಶ್ವರಪ್ಪ ಓದಿ ಹೇಳಿದರು.

 ಸಚಿವ ಆಂಜನೇಯ ಪ್ರಕರಣದ ಚರ್ಚೆಗೆ ಅವರು ನಿಲುವಳಿ ಸೂಚನೆಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆದು,  ತೀವ್ರ ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ ವಿಧಾನಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಸಭಾಪತಿ ಶಂಕರಮೂರ್ತಿ ಮುಂದೂಡಿದರು. ವಿಧಾನಮಂಡಲದ ಚಳಿಗಾಲದ ಅಧಿವೇಶನ ಮುಕ್ತಾಯವಾಗಿದ್ದು, ವಿಧಾನಸಭೆ ಕಲಾಪವನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಮುಂದೂಡುವುದರೊಂದಿಗೆ  10 ದಿನಗಳಲ್ಲಿ ಕೇವಲ 24 ಗಂಟೆಗಳು ಕಲಾಪ ನಡೆದಿವೆ. ಪ್ರಸಕ್ತ ಅಧಿವೇಶನದಲ್ಲಿ  6 ವಿಧೇಯಕಗಳು ಅಂಗೀಕಾರವಾಗಿವೆ. ವಿಧಾನಸಭೆ ಕಲಾಪದಲ್ಲಿ ನಾಲ್ಕು ವಿವಿಧ ವರದಿಗಳು ಮಂಡನೆಯಾಗಿವೆ. ಒಂದು ವಿಧೇಯಕವನ್ನು ರಾಜ್ಯಸರ್ಕಾರ ವಾಪಸ್ ಪಡೆದಿದೆ. 

Share this Story:

Follow Webdunia kannada