Webdunia - Bharat's app for daily news and videos

Install App

ಅನುಭವ ಮಂಟಪ ನಿರ್ಮಾಣಕ್ಕೆ ಮುಂದಾದ ಅನಿಲ್ ಬೆನಕೆ

Webdunia
ಬುಧವಾರ, 22 ಮಾರ್ಚ್ 2023 (13:29 IST)
ಬೆಳಗಾವಿ : ಚುನಾವಣೆ ಸಮೀಪಿಸುತ್ತಿದ್ದಂತೆ ಸಮುದಾಯದವರ ಮತ ಸೆಳೆಯಲು ಶಾಸಕರು ಕಸರತ್ತು ನಡೆಸುತ್ತಿದ್ದಾರೆ. ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತ ಸೆಳೆಯಲು ಶಾಸಕ ಅನಿಲ್ ಬೆನಕೆ ನಾನಾ ಕಸರತ್ತು ನಡೆಸಿದ್ದು, ಉತ್ತರ ಮತಕ್ಷೇತ್ರದಲ್ಲಿ ಲಿಂಗಾಯತ ಮತಗಳು ನಿರ್ಣಾಯಕ ಆಗಿವೆ.
 
ಹೀಗಾಗಿ ಉತ್ತರ ಕ್ಷೇತ್ರದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಶಾಸಕ ಅನಿಲ ಬೆನಕೆ ಮುಂದಾಗಿದ್ದಾರೆ.ಬೆಳಗಾವಿಯ ಮಾಳಮಾರುತಿ ಬಡಾವಣೆಯಲ್ಲಿ ನಿರ್ಮಾಣವಾಗಲಿರುವ ಅನುಭವ ಮಂಟಪ ಅಡಿಗಲ್ಲು ಕಾರ್ಯಕ್ರಮಕ್ಕೆ ಬಿ.ಎಸ್.ಯಡಿಯೂರಪ್ಪನವರನ್ನು ಕರೆಸಲಾಗುತ್ತಿದೆ. ಅನುಭವ ಮಂಟಪ ಅಡಿಗಲ್ಲು ಕಾರ್ಯಕ್ರಮಕ್ಕೆ ಅನಿಲ್ ಬೆನಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. 

ಅನುಭವ ಮಂಟಪದಲ್ಲಿ ಬಸವಾದಿ ಶರಣರ ಚರಿತ್ರೆ ಸಾರುವ ಸಂದೇಶಗಳು, ಜಗಜ್ಯೋತಿ ಬಸವೇಶ್ವರ ಪ್ರತಿಮೆ, ಬಸವಾದಿ ಶರಣರ ಉಬ್ಬುಚಿತ್ರ ಸೇರಿ ಹಲವು ವಿಶೇಷತೆಗಳು ಇರಲಿವೆ. ಶಾಸಕ ಅನಿಲ ಬೆನಕೆ ಪೂರ್ವಭಾವಿ ಸಭೆಯನ್ನು ಕರೆದಿದ್ದು, ಅನುಭವ ಮಂಟಪ ನಿರ್ಮಾಣದ ಕುರಿತು ಲಿಂಗಾಯತ ಸಮುದಾಯದ ಮುಖಂಡರ ಜೊತೆ, ಸಂಶೋಧಕರು, ಪರಿಣಿತರಿಂದ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯಾವುದೇ ಬೀದಿ ನಾಯಿಯನ್ನು ಬಿಡಬೇಡಿ: ರಕ್ಷಣೆಗೆ ಬಂದವರ ವಿರುದ್ಧ ಕಠಿಣ ಕ್ರಮಕ್ಕೆ ಸುಪ್ರೀಂ ಸೂಚನೆ

ಸಚಿವ ಕೆಎನ್ ರಾಜಣ್ಣ ದಿಡೀರ್ ರಾಜೀನಾಮೆ: ಕಾರಣ ಇದೇನಾ

ನಿನ್ನೆ ಮೋದಿಯಿಂದ ಲೋಕಾರ್ಪಣೆಯಾದ ಮೆಟ್ರೋಗೆ ಇಂದು ಇದೆಂಥಾ ಪ್ರತಿಕ್ರಿಯೆ

ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದಿದ್ದಕ್ಕೆ ಸಿದ್ದರಾಮಯ್ಯ ಫುಲ್ ಗರಂ

ಅಧಿವೇಶನ ಆರಂಭಕ್ಕೆ ಮೊದಲೇ ಬಿಜೆಪಿ ಪ್ರತಿಭಟನೆ

ಮುಂದಿನ ಸುದ್ದಿ
Show comments