Select Your Language

Notifications

webdunia
webdunia
webdunia
webdunia

ವಿಶ್ವ ಚೆಸ್ ಟೂರ್ನಿ 9ನೇ ಪಂದ್ಯವೂ ಡ್ರಾ: ಆನಂದ್‌ಗೆ ಸಂಕಷ್ಟ

ವಿಶ್ವ ಚೆಸ್ ಟೂರ್ನಿ 9ನೇ ಪಂದ್ಯವೂ ಡ್ರಾ: ಆನಂದ್‌ಗೆ ಸಂಕಷ್ಟ
ಸೋಚಿ , ಗುರುವಾರ, 20 ನವೆಂಬರ್ 2014 (19:34 IST)
ರಷ್ಯಾದ ಸೋಚಿಯಲ್ಲಿ ನಡೆಯುತ್ತಿರುವ  ವಿಶ್ವ ಚೆಸ್ ಟೂರ್ನಿ 9ನೇ ಪಂದ್ಯವೂ ಡ್ರಾ ಆಗಿದ್ದರಿಂದ ವಿಶ್ವನಾಥನ್ ಆನಂದ್ ಈ ಬಾರಿಯೂ ಕಷ್ಟದ ಪರಿಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದಾರೆ.

ಆನಂದ್ ಮತ್ತು ಕಾರ್ಲ್‌ಸನ್ ನಡುವೆ ಇನ್ನೂ 3 ಪಂದ್ಯಗಳು ಮಾತ್ರ ಬಾಕಿವುಳಿದಿದ್ದು, ಕಾರ್ಲ್‌ಸನ್ 12 ಸುತ್ತಿನ ಟೂರ್ನಿಯಲ್ಲಿ 5-4ರಿಂದ ಮುನ್ನಡೆ ಸಾಧಿಸಿದ್ದಾರೆ. 10ನೇ ಸುತ್ತಿನ ಪಂದ್ಯವನ್ನು ಶುಕ್ರವಾರ ಆಡಲಾಗುತ್ತದೆ.

ಬಾಕಿವುಳಿದಿರುವ ಮೂರು ಪಂದ್ಯಗಳಲ್ಲಿ ಆನಂದ್ ಯಾವುದೇ ಸೋಲಿಲ್ಲದೇ ಒಂದು ಗೆಲುವನ್ನು ಪಡೆದು ವಿಶ್ವ ಚೆಸ್ ಪ್ರಶಸ್ತಿಯನ್ನು ಜೀವಂತವಾಗಿ ಉಳಿಸಬೇಕಾಗಿದೆ. ಕಾರ್ಲ್‌ಸನ್ ಎಲ್ಲಾ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡರೂ ಸಾಕು, ವಿಶ್ವ ಚೆಸ್ ಕಿರೀಟ ಅವರ ಮುಡಿಗೇರಲಿದೆ. 
 

Share this Story:

Follow Webdunia kannada