Webdunia - Bharat's app for daily news and videos

Install App

ಬ್ಯಾಟರಾಯನಪುರ ವಾರ್ಡ್ ನ ಅಮೃತಹಳ್ಳಿ ಕೆರೆ ಒತ್ತುವರಿ ತೆರವು

Webdunia
ಬುಧವಾರ, 18 ಆಗಸ್ಟ್ 2021 (21:33 IST)
ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲ್ಲೂಕು, ಜಕ್ಕೂರು ಹೋಬಳಿ, ಅಮೃತಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 115ರ ಅಮೃತಹಳ್ಳಿ ಕೆರೆಯು ಒಟ್ಟು 24 ಎಕರೆ 36 ಗುಂಟೆ ವಿಸ್ತೀರ್ಣದಲ್ಲಿದ್ದು, 15 ಕೋಟಿ ರೂ. ಮೌಲ್ಯದ 20 ಗುಂಟೆ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಶೆಡ್ ಮತ್ತು ಶೌಚಾಲಯವನ್ನು ಇಂದು ತೆರವುಗೊಳಿಸಲಾಯಿತು. 
 
ಯಲಹಂಕ ತಾಲ್ಲೂಕು/ಹೋಬಳಿ, ಅಮೃತಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 115ರ ಕೆರೆಯ(ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ) ಗಡಿಗಳನ್ನು ಅಳತೆ ಮಾಡಿ ಗುರುತಿಸಲು ಮಾನ್ಯ ಭೂದಾಖಲೆಗಳ ಸಹಾಯ ನಿರ್ದೇಶಕರು ರವರ ಅಧಿಕೃತ ಜ್ಞಾಪನ ಸಂಖ್ಯೆ ಭೂ.ಸ.ನಿ(ಯ)/lake/01/2021-22 ಮತ್ತು ದಿನಾಂಕ: 06/08/2021ರಲ್ಲಿ ಆದೇಶವಾದಂತೆ ಸದರಿ ದಿನಾಂಕದಂದು ಸರ್ವೇ ಸಂಖ್ಯೆ 115ರ ಕೆರೆಯ ಬಳಿ ಹಾಜರಾಗಿ ಕೆರೆಯ ಪಕ್ಕದ ಸರ್ವೇ ಸಂಖ್ಯೆಗಳ ಆಧಾರದ ಮೇಲೆ ಅಳತೆ ಮಾಡಿ ಗಡಿಗಳನ್ನು ಗುರಿತಿಸಲಾಗಿರುತ್ತದೆ.
 
ಮುಂದುವರಿದು, ಬಿಬಿಎಂಪಿ ಕೆರೆಗಳ ವೀಭಾಗದ ವಿಶೇಷ ಆಯುಕ್ತರು ಶ್ರೀ ರೆಡ್ಡಿ ಶಂಕರ ಬಾಬು ರವರ ನೇತೃತ್ವದಲ್ಲಿ  ಯಲಹಂಕ ವಲಯ ಜಂಟಿ ಆಯುಕ್ತರು ಡಾ. ಅಶೋಕ್, ಕೆರೆಗಳ ವಿಭಾಗದ ಅಧೀಕ್ಷಕ ಇಂಜಿನಿಯರ್ ಮೋಹನ್ ಕೃಷ್ಣ, ಪಾಲಿಕೆ ವಿಭಾಗದ ತಹಸೀಲ್ದಾರರು ಹಾಗೂ ಯಲಹಂಕ ತಾಲ್ಲೂಕು ತಹಸೀಲ್ದಾರರು, ಪಾಲಿಕೆ ಕೆರೆಗಳು ವಿಭಾಗದ ಇಂಜಿನಿಯರ್‌ಗಳು ಹಾಗೂ ವಲಯ ಇಂಜಿನಿಯರ್‌ಗಳ ಸಹಯೋಗದಲ್ಲಿ ಕೆರೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿಕೊಂಡಿದ್ದ ಶೆಡ್ ಹಾಗೂ ಶೌಚಾಲಯವನ್ನು ತೆರವುಗೊಳಿಸಲಾಯಿತು. ಒತ್ತುವರಿ ತೆರವುಗೊಳಿಸಿದ ಸ್ಥಳದಲ್ಲಿ ತಂತಿಬೇಲಿ ಹಾಗೂ ಎಂ.ಎಸ್.ಪೋಲ್  ಅಳವಡಿಸಲಾಯಿತು ಎಂದು ಕೆರೆಗಳ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಾಶ್.ಕೆ.ವಿ ರವರು ಮಾಹಿತಿ ನೀಡಿದರು.
 
4 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ:
 
ಅಮೃತಹಳ್ಳಿ ಕೆರೆಯು ಬೆಂಗಳೂರು ಅಭಿವರದ್ಧಿ ಪ್ರಾದಿಕಾರದಿಂದ ಪಾಲಿಕೆಗೆ ಹಸ್ತಾಂತರವಾಗಿದ್ದು, ಹಾಲಿ ಕೆರೆಯಲ್ಲಿನ ಬಾಕಿ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲು 15ನೇ ಹಣಕಾಸು ಅನುದಾನದಡಿ 4 ಕೊಟಿ ರೂ. ಅನುದಾನ ಮೀಸಲಿಡಲಾಗಿದೆ. ಈ ಸಂಬಂಧ ಕೆರೆಯ ವಿಸ್ತೃತ ಯೋಜನಾ ವರದಿಯನ್ನು ಕರ್ನಾಟಕ ಕೆರೆ ಸರೋವರ ಸಂರಕ್ಷಣಾ ಅಭಿವೃದ್ಧಿ ನಿಗಮ-ಕೆಟಿಸಿಡಿಎ ರವರ ಅನುಮೋದನೆಗೆ ಕಳುಹಿಸಲಾಗಿದೆ. ಅನುಮೋದನೆಯ ನಂತರ ಟೆಂಡರ್ ಕೆರೆದು ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments