ಕಾವೇರಿದ ಚರ್ಚೆಯ ಮಧ್ಯೆ ಗಡದ್ದಾಗಿ ನಿದ್ರೆಗೆ ಜಾರಿದ ಅರಣ್ಯ ಸಚಿವ ರಮಾನಾಥ್ ರೈ

Webdunia
ಸೋಮವಾರ, 21 ಮಾರ್ಚ್ 2016 (12:30 IST)
ಬಜೆಟ್ ಅಧಿವೇಶದಲ್ಲಿ ಎಸಿಬಿ ವಿಚಾರವಾಗಿ ಅಡಳಿತರೂಢ ಮತ್ತು ವಿಪಕ್ಷಗಳ ಮಧ್ಯೆ ಕಾವೇರಿದ ಚರ್ಚೆ ಮುಂದುವರೆದಿದ್ದರೆ ಅರಣ್ಯ ಖಾತೆ ಸಚಿವ ರಮಾನಾಥ್ ರೈ ಗಡದ್ದಾಗಿ ನಿದ್ರೆಗೆ ಶರಣಾಗಿದ್ದರು.
 
ಜೆಡಿಎಸ್ ಶಾಸಕ ಎನ್.ಎಚ್.ಕೋನರೆಡ್ಡಿ ಮತ್ತು ನವಲಗುಂದ ಜೆಡಿಎಸ್ ಶಾಸಕ ಕೂಡಾ ನಿದ್ರೆಗೆ ಶರಣಾಗಿರುವುದು ಕಂಡುಬಂದಿತು. ಸದನದಲ್ಲಿ ವಿಪಕ್ಷಗಳು ಅಡಳಿತವನ್ನು ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರೆ, ಕಲಾಪಕ್ಕೂ ತಮಗೂ ಯಾವುದೇ ಸಂಬಂಧವಿಲ್ಲದಂತೆ ಸಚಿವ ರೈ ನಿದ್ರೆಗೆ ಜಾರಿದ್ದರು.
 
ವಿಪಕ್ಷ ನಾಯಕ ಶೆಟ್ಟರ್ ಅಧಿವೇಶನದಲ್ಲಿ ಎಸಿಬಿ ವಿಚಾರವಾಗಿ ಸಮರ್ಥವಾಗಿ ವಾದ ಮಂಡಿಸಿ ಸರಕಾರವನ್ನು ಟೀಕಿಸುತ್ತಿದ್ದರೆ, ಇತ್ತ ಸಚಿವರು, ಸರಕಾರಕ್ಕೆ ಯಾರು ಟೀಕಿಸಿದ್ರೆ ನಮಗೇನು ಎನ್ನುವಂತೆ ನಿದ್ರಾದೇವಿಯ ಮಡಿಲಲ್ಲಿ ತೇಲುತ್ತಿರುವುದು ವಿಧಾನಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು.  
 
 
 
 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯಗೆ ಏಕಾಏಕಿ ಅನಾರೋಗ್ಯ: ನಿಜವಾಗಿ ಆಗಿದ್ದೇನು ಇಲ್ಲಿದೆ ವಿವರ

ಸದನದಲ್ಲಿ ಎಂದಿನ ಖದರ್ ಇಲ್ಲ, ಡಿಕೆ ಶಿವಕುಮಾರ್ ಲೆಕ್ಕಾಚಾರವೇ ಬೇರೆ

Karnataka Weather: ಇಂದು ಭಾರೀ ಕುಸಿತ ಕಾಣಲಿದೆ ತಾಪಮಾನ, ಎಚ್ಚರ

ಮಿಸ್ಟರ್ ಕ್ಲೀನ್, ಸ್ಮಶಾನ ಭೂಮಿ, ಕೆರೆ ಅಂಗಳವನ್ನು ತಮ್ಮ ಹೆಸರಿಗೆ ಮಾಡಿಕೊಂಡದ್ದು ಹೇಗೆ

ಆರೋಗ್ಯದಲ್ಲಿ ಏರುಪೇರು, ವಿಶ್ರಾಂತಿಯಲ್ಲಿರುವ ಸಿದ್ದರಾಮಯ್ಯರನ್ನು ಭೇಟಿಯಾದ ಪುತ್ರ ಯತೀಂದ್ರ

Show comments