Webdunia - Bharat's app for daily news and videos

Install App

ನಾಸಿರ್‌ ಹುಸೇನ್‌ ಹೆಸರನ್ನೂ ಎಫ್‌ಐಆರ್‌ಗೆ ಸೇರಿಸಿ - ವಿಜಯೇಂದ್ರ

geetha
ಮಂಗಳವಾರ, 5 ಮಾರ್ಚ್ 2024 (15:46 IST)
ಬೆಳಗಾವಿ:ವಿಧಾನಸೌಧದ ಒಳಗೆ ಕೆಲವು ದೇಶದ್ರೋಹಿಗಳು ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿದ ನಂತರ ಬಿಜೆಪಿ ನಿರಂತರ ಹೋರಾಟದ ಪ್ರತಿಫಲವಾಗಿ ನಿನ್ನೆ ಮೂರು ದೇಶದ್ರೋಹಿಗಳನ್ನು ಬಂಧಿಸಿದ್ದಾರೆ. ಆದರೆ, ರಾಜ್ಯ ಸರಕಾರ ಇನ್ನೂ ಎಫ್.ಎಸ್.ಎಲ್ ವರದಿಯನ್ನು ಬಹಿರಂಗಪಡಿಸಿಲ್ಲ ಎಂದು ನುಡಿದ ವಿಜಯೇಂದ್ರ ಸರಕಾರ ಯಾವ ಕಾರಣಕ್ಕೆ ಎಫ್.ಎಸ್.ಎಲ್ ವರದಿಯನ್ನು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.

 ವಿಧಾನಸೌಧದಲ್ಲಿ  ಪಾಕಿಸ್ತಾನ ಜಿಂದಾಬಾದ್ ಘೋಷಣೆ  ಕೂಗಿದ ಪ್ರಕರಣದಲ್ಲಿ ರಾಜ್ಯಸಭಾ ಸದಸ್ಯರಾಗಿ ಕಾಂಗ್ರೆಸ್‍ನಿಂದ  ಆಯ್ಕೆಯಾದ ನಾಸೀರ್ ಹುಸೇನ್  ಅವರನ್ನು ಕೂಡ ಅಪರಾಧಿ ಎಂದು ಎಫ್‍ಐಆರ್‍ನಲ್ಲಿ ಸೇರಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ  ಬಿ.ವೈ.ವಿಜಯೇಂದ್ರ ಅವರು ಒತ್ತಾಯಿಸಿದ್ದಾರೆ.
 
ಬೆಳಗಾವಿಯ ವಿಮಾನನಿಲ್ದಾಣದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಖಾಸಗಿ ಎಫ್‍ಎಸ್‍ಎಲ್ ವರದಿ ಬಿಡುಗಡೆ ಆಗದೆ ಇದ್ದಿದ್ದರೆ ಸರಕಾರ ಈ ದೇಶದ್ರೋಹಿಗಳನ್ನು ಬಂಧಿಸಲು ಮೀನಮೇಷ ಎಣಿಸುವ ಸಾಧ್ಯತೆ ಇತ್ತು ಎಂದರು.

 ಜನಪ್ರತಿನಿಧಿ, ರಾಜ್ಯಸಭಾ ಸದಸ್ಯ ಆಗುವವರು ಸಂವಿಧಾನ ಮತ್ತು ದೇಶದ ಸಾರ್ವಭೌಮತ್ವ- ಅಖಂಡತೆಯನ್ನು ಎತ್ತಿಹಿಡಿಯುವುದಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ. ಈ ತನಿಖೆ ಪೂರ್ಣಗೊಳ್ಳುವವರೆಗೆ ನಾಸೀರ್ ಹುಸೇನ್ ಅವರು ಪ್ರಮಾಣವಚನ ಸ್ವೀಕರಿಸಬಾರದು. ಈ ಸಂಬಂಧ ರಾಜ್ಯಸಭಾ ಅಧ್ಯಕ್ಷರಾದ ಉಪ ರಾಷ್ಟ್ರಪತಿಗಳಿಗೆ ಬಿಜೆಪಿ ವತಿಯಿಂದ ಇವತ್ತೇ ಪತ್ರ ಬರೆಯಲಿದ್ದೇವೆ. ತನಿಖೆ ಪೂರ್ಣಗೊಳ್ಳುವವರೆಗೆ ಅವರಿಗೆ ಪ್ರಮಾಣವಚನ ಬೋಧಿಸದೆ ಇರಲು ಒತ್ತಾಯ ಮಾಡಲಿದ್ದೇವೆ ಎಂದು ವಿಜಯೇಂದ್ರ ಹೇಳಿದ್ದಾರೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Covid 19: ಕೋವಿಡ್‌ಗೆ ರಾಜ್ಯದಲ್ಲಿ ಮೊದಲ ಬಲಿ, ಹೆಚ್ಚಿದ ಆತಂಕ

ಅವರೇ ಹೇಳಿರುವಂತೆ ನಾಯಿಯೇ ನಾರಾಯಣ, ಹಾಗಾದ್ರೆ ನಾರಾಯಣಸ್ವಾಮಿಯನ್ನು ಏನೆಂದು ಕರೆಯಬೇಕು: ಪ್ರಿಯಾಂಕ್ ಖರ್ಗೆ

Covid 19: ಭಾರತದ ಈ ನಗರದಲ್ಲಿ ಹೆಚ್ಚುತ್ತಿದೆ ಕೋವಿಡ್ 19 ಪ್ರಕರಣಗಳು

ಚಾಮರಾಜಪೇಟೆ ಪಾಕಿಸ್ತಾನದಲ್ಲಿದೆಯೋ ಭಾರತದಲ್ಲಿದೆಯೋ: ಬಿಜೆಪಿ ಆಕ್ರೋಶ

Karnataka Weather:ಮುನ್ಸೂಚನೆಯಂತೆ ಕರಾವಳಿ ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿದೆ ಮಳೆ

ಮುಂದಿನ ಸುದ್ದಿ
Show comments