Webdunia - Bharat's app for daily news and videos

Install App

ನನ್ನ ಮಾತು ಕೇಳಿದ್ರೆ ಇದೆಲ್ಲಾ ಆಗ್ತಿತ್ತಾ ಸಿದ್ದಣ್ಣ: ಸ್ವಾರಸ್ಯಕರ ಚರ್ಚೆಗೆ ಸಾಕ್ಷಿಯಾದ ಸೋಮಣ್ಣ- ಸಿದ್ದರಾಮಯ್ಯ

Sampriya
ಸೋಮವಾರ, 18 ನವೆಂಬರ್ 2024 (17:38 IST)
Photo Courtesy X
ಬೆಂಗಳೂರು: ಅಂದು ನನ್ನ ಮಾತು ಕೇಳಿ ಸೈಟು ವಾಪಾಸ್ ನೀಡುತ್ತಿದ್ದರೆ  ಇಂದು ಇಂತಹ ಸಂಕಷ್ಟ ಎದುರಾಗುತ್ತಿರುಲ್ಲ ಎಂದು ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದ್ದಾರೆ.

ಮುಡಾ ವಿವಾದ ಆರಂಭವಾದಾಗ ಬಿಜೆಪಿಯಲ್ಲಿನ ಕೆಲವು ಸಿದ್ದರಾಮಯ್ಯ ಸ್ನೇಹಿತರು ಸೈಟು ವಾಪಾಸ್ ನೀಡಿ, ಇದರಿಂದ ಪಾರಾಗಿ ಎಂದು ಸಲಹೆ ನೀಡಿದ್ದರು. ಅದರಲ್ಲಿ ವಿ ಸೋಮಣ್ಣ ಕೂಡಾ ಒಬ್ಬರು. ಇಂದು ಸಿಎಂ ಸಿದ್ದರಾಮಯ್ಯ ಹಾಗೂ ವಿ ಸೋಮಣ್ಣ ಅವರು ಮುಖಾಮುಖಿಯಾಗಿದ್ದು ಈ ವೇಳೆ ಮುಡಾ ವಿಚಾರ ಪ್ರಸ್ತಾಪವಾಗಿದೆ.

ಬೆಂಗಳೂರಿನ ಕಾರ್ಯಕ್ರಮದವೊಂದರಲ್ಲಿ ಉಭಯ ನಾಯಕರು ಆಕಸ್ಮಿಕವಾಗಿ ಎದುರು ಬದುರಾಗಿದ್ದು, ಕುಶಲೋಪಾರಿ ಮಾಡಿದ್ದಾರೆ. ಮೂಡಾ ವಿವಾದ ಉಲ್ಲೇಖ ಮಾಡಿದ ವಿ ಸೋಮಣ್ಣ, ತಪ್ಪು ಮಾಡಿಬಿಟ್ರಿ ಸಿದ್ದಣ್ಣ, ಸಣ್ಣ ವಿಚಾರ ಇಷ್ಟೆಲ್ಲಾ ಆಗಿಹೋಯ್ತು 'ಸೈಟ್ ವಾಪಸ್ ಕೊಡಿ ಎಂದು ನಾನು ಮೊದಲೇ ಹೇಳಿದ್ದೆ, ಸೈಟನ್ನು ಅಂದೇ ವಾಪಸ್ ಮಾಡಿದ್ದರೆ ಈ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ ಎಂದರು..

ಸಿದ್ದರಾಮಯ್ಯ ಬಗ್ಗೆ ನಾನು ಎದುರುಗಡೆ ಏನಿದ್ದರೂ ಹೇಳುವವನು. ಬೇರೆಯವರ ಹಾಗೆ ಹಿಂದುಗಡೆ ಕುತಂತ್ರ ಮಾಡುವುದು ಗೊತ್ತಿಲ್ಲ. ನನ್ನ ಮಾತು ಕೇಳಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಅವರ ಕೈ ಹಿಡಿದುಕೊಂಡು ಸೋಮಣ್ಣ ಹೇಳಿದರು.

ಅದು ಯಾವುದೋ ಒಂದು ಸಣ್ಣದು. ಅದನ್ನು ಅವತ್ತೇ ಸರೆಂಡರ್ ಮಾಡಿದ್ದರೆ ಚೆನ್ನಾಗಿತ್ತು. ಅದೊಂದು ಯಾಕೆ ಮಾಡಿದ್ದರೆ. ಅಂದೇ ಸರಿ ಮಾಡಿದ್ದರೆ ಇನ್ನೂ ಹೈಕ್ಲಾಸ್ ಇತ್ತು ಎಂದು ಸಲಹೆ ನೀಡಿದರು. ಸದನದಲ್ಲಿ ಏಕೆ ಇಷ್ಟು ಕೋಟಿ ಅಲ್ಲ, ಅಷ್ಟು ಕೋಟಿ ಎಂದು ಏಕೆ ಹೇಳಿದ್ರಿ. ನಾವು ಹೇಳಿದ್ವಾ ನಿಮಗೆ ಹೇಳೋಕೆ? ನಾನೇನು ಸದನದಲ್ಲಿ ಇದ್ನಾ? ಎಂದೂ ಪ್ರೀತಿಯಿಂದಲೇ ಸಿದ್ದರಾಮಯ್ಯ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಇನ್ನು ಸೋಮಣ್ಣ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ನೀನು ದೇವರ ಮೇಲೆ ನಂಬಿಕೆ ಇಟ್ಕೊಂಡಿದೀಯಾ.. ನಾನು ದೇವರನ್ನ ನಂಬಲ್ಲ, ಏಯ್ ಗೊತ್ತಿಲ್ಲದೆ ಏನೆಲ್ಲಾ ಮಾತನಾಡ್ತೀಯಾ. ಹಾಗಲ್ಲಾ ನನ್ನ ಮಾತು ಕೇಳು ಎಂದು ಪ್ರಕರಣದ ಬಗ್ಗೆ ಸಮಜಾಯಿಷಿ ನೀಡಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments