Select Your Language

Notifications

webdunia
webdunia
webdunia
webdunia

ಅಖಿಲೇಶ್ ಯಾದವ್ ಪಾಲಾದ 'ಸೈಕಲ್‌' ಚಿಹ್ನೆ, ಮುಲಾಯಂ ಸಿಂಗ್‌ಗೆ ಮುಖಭಂಗ

ಅಖಿಲೇಶ್ ಯಾದವ್ ಪಾಲಾದ 'ಸೈಕಲ್‌' ಚಿಹ್ನೆ, ಮುಲಾಯಂ ಸಿಂಗ್‌ಗೆ ಮುಖಭಂಗ
ನವದೆಹಲಿ , ಸೋಮವಾರ, 16 ಜನವರಿ 2017 (18:59 IST)
ಸಮಾಜವಾದಿ ಪಕ್ಷದ ಹೆಸರು ಹಾಗೂ 'ಸೈಕಲ್' ಚಿಹ್ನೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪಾಲಾಗಿದ್ದು, ಮುಲಾಯಂ ಸಿಂಗ್ ಯಾದವ್‌ಗೆ ತೀವ್ರ ಮುಖಭಂಗವಾಗಿದೆ. 
ಸಮಾಜವಾದಿ ಪಕ್ಷದ ಚಿಹ್ನೆ ಸೈಕಲ್‌ನ್ನು ಯಾರಿಗೆ ನೀಡಬೇಕೆಂಬುದಕ್ಕೆ ಸಂಬಂಧಿಸಿದ ಆದೇಶವನ್ನು ಕೇಂದ್ರ ಚುನಾವಣಾ ಆಯೋಗ ಇಂದು ಪ್ರಕಟಿಸಿದೆ. 
 
ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಕೌಟುಂಬಿಕ  ಕಲಹ ಪಕ್ಷವನ್ನೇ ಒಡೆಯಲು ಕಾರಣವಾಗಿದೆ. ಎರಡು ಬಣದವರು ಪಕ್ಷದ ಚಿಹ್ನೆ 'ಸೈಕಲ್'ನ್ನು ತಮ್ಮದಾಗಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಚುನಾವಣಾ ಆಯೋಗದ ಮೆಟ್ಟಿಲೇರಿದ್ದರು.
 
ಈ ಕುರಿತು ಚುನಾವಣಾ ಆಯೋಗ ಕಳೆದ ವಾರ ವಿಚಾರಣೆ ನಡೆಸಿತ್ತು. ಸುಮಾರು 4ಗಂಟೆಗಿಂತಲೂ ಹೆಚ್ಚು ಕಾಲ ಎರಡು ಕಡೆಯವರ ವಾದ ಪ್ರತಿವಾದ ಆಲಿಸಿ, ದಾಖಲೆಗಳನ್ನು ಪರಿಶೀಲಿಸಿದ್ದು, ಚಿಹ್ನೆ ಯಾರಿಗೆ ಸೇರಬೇಕು ಎಂಬ ನಿರ್ಧಾರವನ್ನು ಕಾಯ್ದಿರಿಸಿತ್ತು.
 
ಈ ಕುರಿತಂತೆ ಇಂದು ಆಯೋಗ ನಿರ್ಣಯ ಪ್ರಕಟಿಸುವ ಸಾಧ್ಯತೆಗಳಿದ್ದು ಎಲ್ಲರ ಚಿತ್ತ ನವದೆಹಲಿಯತ್ತ ನೆಟ್ಟಿದೆ. ಆಯೋಗ ಚಿಹ್ನೆಯನ್ನು ಯಾವುದಾದರೂ ಒಂದು ಬಣಕ್ಕೆ ನೀಡಬಹುದು ಅಥವಾ ಎರಡು ಬಣದವರಿಗೆ ಸೈಕಲ್ ಬಿಟ್ಟು ಪ್ರತ್ಯೇಕ ಚಿಹ್ನೆ ನೀಡುವ ಸಾಧ್ಯತೆಗಳನ್ನು ಸಹ ಅಲ್ಲಗಳೆಯಲಾಗದು.  
 
ಉತ್ತರ ಪ್ರದೇಶದಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಫೆಬ್ರವರಿ 11ರಿಂದ ಪ್ರಾರಂಭವಾಗಿ ಮಾರ್ಚ್ 8 ರಂದು ಮುಕ್ತಾಯಗೊಳ್ಳಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಂತ್ರಿಮಾಲ್‌ನ್ನು ಶಾಶ್ವತವಾಗಿ ಮುಚ್ಚುವುದೇ ಉತ್ತಮ: ಮೇಯರ್ ಪದ್ಮಾವತಿ