ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ನಟ ಅಂಬರೀಷ್ ಸ್ಪರ್ಧಿಸುತ್ತಾರಾ?

Webdunia
ಶುಕ್ರವಾರ, 6 ಜುಲೈ 2018 (12:35 IST)
ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯ ಸ್ಪರ್ಧೆಯಿಂದ ಹಿಂದೆಸರಿದ ನಟ , ಮಾಜಿ ಸಚಿವ ಅಂಬರೀಷ್ ಅವರು ಲೋಕ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಎಂಬ ಕುತೂಹಲ ಹಲವರಿದೆ. ಆದರೆ ಇದೀಗ ಈ ಬಗ್ಗೆ ಸ್ವತಃ ಅಂಬರೀಷ್ ಅವರೇ ಸ್ಪಷ್ಟನೆ ನೀಡಿದ್ದಾರೆ.


ವಿಧಾನಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಟಿಕೆಟ್ ನೀಡಿದ್ದರೂ ಕೂಡ ಅಂಬರೀಷ್ ಅವರು ಪಕ್ಷದವರ ಮೇಲಿನ ಕೋಪಕ್ಕೆ ಸ್ಪರ್ಧಿಸದೆ ಹಿಂದೆಸರಿದಿದ್ದರು. ಆದರೆ  ಲೋಕ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದರ  ಕುರಿತಾಗಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,’ ಮುಂಬರುವ ಲೋಕಸಭಾ ಉಪ ಚುನಾವಣೆ ಅಥವಾ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟರೂ ಸ್ಪರ್ಧಿಸಲ್ಲ ‘ ಎಂದು ಸ್ಪಷ್ಟಪಡಿಸಿದ್ದಾರೆ.


ಹಾಗೇ ‘ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದ್ದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುತ್ತಿರಲಿಲ್ಲ.ಈ ಚುನಾವಣೆ ಫಲಿತಾಂಶ ಗಮನಿಸಿದರೆ ನಾನು ಈಗಲೂ ಕಾಂಗ್ರೆಸ್‌ಗೆ ಅನಿವಾರ್ಯ ಎಂಬುದನ್ನು ತೋರಿಸುತ್ತದೆ’ ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಲ್ಲಿಕಾರ್ಜುನ ಖರ್ಗೆ ಕುಟುಂಬವನ್ನು ಆರ್ ಎಸ್ಎಸ್ ಕಾಪಾಡಿತಾ: ಕೇಸ್ ಹಾಕ್ತೀನಿ ಎಂದ ಪ್ರಿಯಾಂಕ್

ಕೃತಿಕಾ ಸಾವನ್ನಪ್ಪಿದ ಬಳಿಕ ಮಹೇಂದ್ರ ರೆಡ್ಡಿ ಈ ವಿಚಾರಕ್ಕೆ ತುಂಬಾನೇ ಹಠ ಹಿಡಿದಿದ್ದಂತ್ತೆ

ಬೆಳೆದು ಬಂದ ಮೂಲವನ್ನು ಎಂದೂ ಮರೆಯಬಾರದು: ಟೀಕಾಕಾರರಿಗೆ ಡಿಕೆ ಶಿವಕುಮಾರ್‌ ಕ್ಲಾಸ್‌

ಬಿಹಾರ ಚುನಾವಣೆ: ಕೈತಪ್ಪಿದ ಟಿಕೆಟ್‌, ಬಟ್ಟೆ ಹರಿದುಕೊಂಡು ಹೋರಳಾಡಿದ ಆರ್‌ಜೆಡಿ ನಾಯಕ

ಅಭಿಷೇಕ್ ಆಚಾರ್ಯ ಬದುಕಿನಲ್ಲಿ ಆಟವಾಡಿದ ನಿರೀಕ್ಷಾ ಕೊನೆಗೂ ಅರೆಸ್ಟ್‌

ಮುಂದಿನ ಸುದ್ದಿ
Show comments