ಶಾಂತಿಭಂಗಕ್ಕೆ ಯತ್ನ: ಓರ್ವ ಗಡಿಪಾರು, ಮತ್ತೋರ್ವನ ಬಂಧನ

Webdunia
ಶನಿವಾರ, 7 ಅಕ್ಟೋಬರ್ 2017 (22:25 IST)
ಧಾರವಾಡ: ಕಾನೂನುಬಾಹಿರ ಚಟುವಟಿಕೆ ಹಾಗೂ ಶಾಂತಿಭಂಗ ಮಾಡುತ್ತಿದ್ದ ಇಬ್ಬರ ಮೇಲೆ ಹುಬ್ಬಳ್ಳಿ-ಧಾರವಾಡ ಆಯುಕ್ತ ಎಂ.ಎನ್.ನಾಗರಾಜ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಓರ್ವನ ಗಡಿಪಾರಿಗೆ ಆದೇಶಿಸಿದ್ದು, ಮತ್ತೊಬ್ಬನಿಗೆ ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.

ಧಾರವಾಡದ ಶಾಂತಿನಿಕೇತನ ‌ನಿವಾಸಿ ಮೋಹನ್ ಅಲಿಯಾಸ್ ಚೀಟರ್ ಮೋನ್ಯಾ(60) ಗಡಿಪಾರು ಮಾಡಲು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ನಾಗರಾಜ್  ಆದೇಶಿಸಿದ್ದಾರೆ. ಈತನ ಮೇಲೆ 24 ಪ್ರಕರಣಗಳು ದಾಖಲಾಗಿವೆ. ಈತನಿಗೆ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸುವ ಸಲುವಾಗಿ ಗಡಿಪಾರಿಗೆ ನೋಟಿಸ್ ನೀಡಲಾಗಿದೆ. ನೋಟಿಸ್ ಅವಧಿ ಮುಗಿಯುವವರೆಗೆ ಮೋನ್ಯಾ ಧಾರವಾಡ ಜಿಲ್ಲೆ ಪ್ರವೇಶಿಸುವಂತಿಲ್ಲ ಎಂದು ಆದೇಶ ನೀಡಲಾಗಿದೆ‌.

ಇನ್ನು ನಗರದ ಬಾಕಳೆ ಗಲ್ಲಿಯ ರಮೇಶ ಮೇತ್ರಾಣಿ(54) ವಿರುದ್ಧ ಗೂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ‌. ಈತನ ವಿರುದ್ಧವೂ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಕಾನೂನು ಸುವ್ಯವಸ್ಥೆ ನಿಯಂತ್ರಿಸುವುದು ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮೇತ್ರಾಣಿಯನ್ನ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತದ ದಾಳಿಯಿಂದಲೇ ಇನ್ನೂ ಎದ್ದಿಲ್ಲ, ಆಗಲೇ ಅಫ್ಘಾನಿಸ್ತಾನದಿಂದಲೂ ಪಾಕಿಸ್ತಾನದ ವಾಯುನೆಲೆ ಮೇಲೆ ದಾಳಿ

ಇದೆಂಥಾ ಅಸಹ್ಯ.. ಸ್ವೀಟ್ ಖರೀದಿ ಮಾಡುವವರು ಈ ವಿಡಿಯೋ ತಪ್ಪದೇ ನೋಡಿ

ಗ್ಯಾರಂಟಿ ಯೋಜನೆ ನೀವೇ ಬೇಡ ಹೇಳಿ: ಸಚಿವ ಎಂಬಿ ಪಾಟೀಲ್ ರಿಕ್ವೆಸ್ಟ್

ಯುದ್ಧ ನಿಲ್ಲಿಸಿ.. ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಕರೆ ಮಾಡಿದ ಪ್ರಧಾನಿ ಮೋದಿ

Karnataka Weather: ಈ ವಾರದ ಹವಾಮಾನ ವರದಿ ನಿಜಕ್ಕೂ ಬೆವರಿಳಿಸುವಂತಿದೆ

ಮುಂದಿನ ಸುದ್ದಿ
Show comments