Select Your Language

Notifications

webdunia
webdunia
webdunia
webdunia

ನಿರ್ಮಾಣ ಹಂತದಲ್ಲಿದ್ದ ಎಪಿಎಂಸಿ ಕೋಲ್ಡ್ ಸ್ಟೋರೇಜ್‌‌ನಲ್ಲಿ ಅಗ್ನಿ ಆಕಸ್ಮಿಕ

ನಿರ್ಮಾಣ ಹಂತದಲ್ಲಿದ್ದ ಎಪಿಎಂಸಿ ಕೋಲ್ಡ್ ಸ್ಟೋರೇಜ್‌‌ನಲ್ಲಿ ಅಗ್ನಿ ಆಕಸ್ಮಿಕ
ಹುಬ್ಬಳ್ಳಿ , ಶುಕ್ರವಾರ, 31 ಅಕ್ಟೋಬರ್ 2014 (15:25 IST)
ಹುಬ್ಬಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಎಪಿಎಂಸಿಯ ಕೋಲ್ಡ್ ಸ್ಟೋರೇಜ್‌ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಕಟ್ಟಡ ಪೂರ್ತಿ ಧಗ ಧಗ ಹೊತ್ತಿ ಉರಿದು ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.  ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದೆಂದು ಭಾವಿಸಲಾಗಿದೆ.  ಪ್ಲಾಸ್ಟಿಕ್ ಮತ್ತು ಪಾಲಿಯೆಸ್ಟರ್ ರೆಕ್ಸಿನ್ ಮುಂತಾದ ವಸ್ತುಗಳು ಕಟ್ಟಡದಲ್ಲಿ ಇದ್ದುದರಿಂದ ಕಟ್ಟಡದ ನೆಲಮಹಡಿಯಲ್ಲಿ ಬೆಂಕಿ ಆವರಿಸಿದೆ.

ಆದಷ್ಟು ಬೇಗ ಕಾರ್ಯಾಚರಣೆ ಆರಂಭಿಸಿದ್ದರಿಂದ ಕಟ್ಟಡ ಸಂಪೂರ್ಣ ಉರಿದುಹೋಗುವುದು ತಪ್ಪಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ಹೇಳಿದ್ದಾರೆ. 

Share this Story:

Follow Webdunia kannada