Select Your Language

Notifications

webdunia
webdunia
webdunia
webdunia

ಕಪ್ಪು ಹಣ ಉಳಿಸಿಕೊಳ್ಳಲು ಪ್ರತಿಪಕ್ಷಗಳಿಂದ ಆಕ್ರೋಶ್ ದಿವಸ್‌ಕ್ಕೆ ಕರೆ: ಜಗದೀಶ್ ಶೆಟ್ಟರ್

ಕಪ್ಪು ಹಣ ಉಳಿಸಿಕೊಳ್ಳಲು ಪ್ರತಿಪಕ್ಷಗಳಿಂದ ಆಕ್ರೋಶ್ ದಿವಸ್‌ಕ್ಕೆ ಕರೆ: ಜಗದೀಶ್ ಶೆಟ್ಟರ್
ಹುಬ್ಬಳ್ಳಿ , ಸೋಮವಾರ, 28 ನವೆಂಬರ್ 2016 (13:52 IST)
500, 1000 ಮುಖಬೆಲೆಯ ನೋಟು ಬ್ಯಾನ್ ಮಾಡಿರುವ ಹಿನ್ನೆಲೆಯಲ್ಲಿ ಕಪ್ಪು ಹಣ ಉಳಿಸಿಕೊಳ್ಳಲು ಪ್ರತಿಪಕ್ಷ ನಾಯಕರು ಆಕ್ರೋಶ್ ದಿವಸ್‌ಕ್ಕೆ ಕರೆ ನೀಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಗಂಭೀರವಾಗಿ ಆರೋಪಿಸಿದ್ದಾರೆ.
 
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರದ ದಿಟ್ಟ ನಿರ್ಧಾರದ ವಿರುದ್ಧ ಆಕ್ರೋಶ್ ದಿವಸ್‌ಗೆ ಕರೆ ನೀಡಿರುವ ಪ್ರತಿಪಕ್ಷಗಳ ನಡೆಯನ್ನು ಜನ ವಿರೋಧಿಯಾಗಿದೆ. ತಮ್ಮ ತಮ್ಮ ಕಪ್ಪು ಹಣವನ್ನು ಉಳಿಸಿಕೊಳ್ಳಲು ಕಾಂಗ್ರೆಸ್, ಆಪ್ ಸೇರಿದಂತೆ ಕೆಲವು ಎಡಪಂಥೀಯ ಪಕ್ಷಗಳು ಹುನ್ನಾರ ಮಾಡುತ್ತಿವೆ ಎಂದು ದೂರಿದರು.
 
ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ನಿರ್ಧಾರ ಜನಪರವಾಗಿದೆ. ಪ್ರಧಾನಿ ಅವರ ನಿರ್ಧಾರವನ್ನು ದೇಶದ ಜನತೆ ಸ್ವಾಗತಿಸುದ್ದಾರೆ. ಜನವಿರೋಧಿಯಾಗಿ ಇಂದು ಭಾರತ ಬಂದ್‌ಗೆ ಕರೆ ನೀಡಲಾಗಿದೆ. ಇಂದು ಭಾರತ ಬಂದ್‌ಗೆ ಕರೆ ನೀಡಿದವರು ಕಪ್ಪು ಹಣ ಕಾಪಾಲು ಮುಂದಾಗಿದ್ದಾರೆ. ಇಂದಿನ ಬಂದ್‌ಗೆ ಜನಬೆಂಬಲ ಸಿಗದಿರುವುದೇ ದೂಡ್ಡ ನಿದರ್ಶನ ಎಂದು ವ್ಯಂಗ್ಯವಾಡಿದರು.
 
ಭಾರತ ಬಂದ್ ಪ್ರಯುಕ್ತ ಬೆಳಗಾವಿ ಅಧಿವೇಶನ ರದ್ದು ಮಾಡಿರುವುದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಚಳಿಗಾಲದ ಅಧಿವೇಶನ ರದ್ದು ಮಾಡಲಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಒಬ್ಬ ಕೊಲೆ ಆರೋಪಿ: ಸಿಎಂ ಸಿದ್ದರಾಮಯ್ಯ