ಬೆಂಗಳೂರು : ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ಹಿಂಸಿಸಿದ್ದಲ್ಲದೇ , ಆಕೆಯ ರಕ್ಷಣೆಗೆ ಬಂದ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ.ತಡ ರಾತ್ರಿಯ ವೇಳೆ ಕಸ ಎಸೆಯಲು ಹೋಗಿದ್ದ ಯುವತಿಯನ್ನು ತಡೆದು ನಾಲ್ವರು ಪುಂಡ ಹುಡುಗರು ಲೈಂಗಿಕ ಕಿರುಕುಳ ನೀಡಿರುವ ಘಟನೆ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಡೆಸಿ ಪರಾರಿಯಾಗಿದ್ದಾರೆ. ಫೆ. 18 ರಂದು ಕೃತ್ಯ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಯುವತಿ ಮತ್ತು ಆಕೆಯ ಸ್ನೇಹಿತ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೂಡಲೇ ಪೊಲೀಸರು ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಲ್ವರೂ ಸಹ ಅಪ್ರಾಪ್ತ ಬಾಲಕರೆಂದು ವಿಚಾರಣೆಯ ವೇಳೆ ತಿಳಿದುಬಂದಿದೆ.