Webdunia - Bharat's app for daily news and videos

Install App

ಮಕ್ಕಳ ರೀತಿ ಶಾಲಾ ಉಡುಪು ಧರಿಸಿ ಬರುವ ವಯಸ್ಕರಿಗೆ ವಂಡರ್‌ಲಾ ವತಿಯಿಂದ ವಿಶೇಷ ಆಫರ್‌!

Webdunia
ಸೋಮವಾರ, 14 ನವೆಂಬರ್ 2022 (16:24 IST)
ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಮುಂದಾಗಿರುವ ವಂಡರ್‌ಲಾ ಹಾಲಿಡೇಸ್‌, ದೊಡ್ಡವರು ಮಕ್ಕಳ ರೀತಿ ಶಾಲಾ ಉಡುಪು ಧರಿಸಿ ಬಂದರೆ, ಅವರಿಗೆ  ಮಕ್ಕಳ ಟಿಕೆಟ್‌ ನೀಡುವುದಾಗಿ ಘೋಷಿಸಿದೆ. 
 
ಹೌದು, ಪ್ರತಿ ವಿಶೇಷ ದಿನಗಳನ್ನು ವಿಶೇಷವಾಗಿ ಆಚರಿಸುತ್ತಾ ಬಂದಿರುವ ವಂಡರ್‌ ಲಾ ಈ ಮಕ್ಕಳ ದಿನಾಚರಣೆಯನ್ನೂ ಸಹ, ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದೆ. ದೊಡ್ಡವರನ್ನು ಮಕ್ಕಳನ್ನಾಗಿಸುವ ಮೂಲಕ ಮಕ್ಕಳ ಮುಗ್ಧ ಮನಸ್ಥಿತಿ ಹೊಂದುವುದರ ಪ್ರಾಮುಖ್ಯತೆಯನ್ನು ಸಾರುತ್ತಿದೆ. 
 
ನವೆಂಬರ್‌ 12 ರಿಂದ 14 ರವರೆಗೆ ಈ ಕೊಡುಗೆ ಚಾಲ್ತಿಯಲ್ಲಿರಲಿದೆ.  ದೊಡ್ಡವರು ಮಕ್ಕಳಾಗುವುದು ಎಂದರೆ,  ಚಿಕ್ಕ ಮಕ್ಕಳಿನಂತೆ ಶಾಲಾ ಸಮವಸ್ತ್ರ ಧರಿಸಿ,  ಒಂದು ಕೈಯಲ್ಲಿ ಬಾಟಲ್‌, ಮತ್ತೊಂದು ಕೈಲಿ ಲಾಲಿಪಾಪ್‌ ಕ್ಯಾಂಡಿ, ಚಿಕ್ಕ ಮಕ್ಕಳ ಬ್ಯಾಗ್‌ (ಹಳೆಯ ಶೈಲಿಯಲ್ಲಿ) ಸೇರಿದಂತೆ ಸಣ್ಣ ಮಕ್ಕಳು ಶಾಲೆಗೆ ಹೋಗುವಾಗ ಹೇಗೆ ಸಿದ್ಧವಾಗುತ್ತಿದ್ದರೋ ಅದೇ ಶೈಲಿಯಲ್ಲಿ ಸಿದ್ಧವಾಗಿ ಬಂದವರು ಮಾತ್ರ ಈ ಮಕ್ಕಳ ಟಿಕೆಟ್‌ಗೆ ಅರ್ಹರಾಗಿರುತ್ತಾರೆ. 
 
ವಯಸ್ಕರಲ್ಲಿಯೂ ಮಗುವಿನ ಮನಸ್ಸನ್ನು ಜೀವಂತವಾಗಿಡುವ ಉದ್ದೇಶದಿಂದ ಈ ಆಫರ್ ಘೋಷಿಸಿದ್ದೇವೆ ಎಂದು ವಂಡರ್‌ಲಾ ಹಾಲಿಡೇಸ್‌ನ ವ್ಯವಸ್ಥಾಪಕ ನಿರ್ದೇಶಕಾರದ ಶ್ರೀ ಅರುಣ್‌ ಕೆ. ಚಿಟ್ಟಿಲಪಿಳ್ಳಿ ಅವರು ಹೇಳಿದ್ದಾರೆ. 
ಮಕ್ಕಳಂತೆ ಸಿದ್ಧವಾಗಿ ಬರುವ ಮೊದಲ 1000 ಜನರಿಗೆ ಈ ಟಿಕೆಟ್‌ ಲಭ್ಯವಿರಲಿದೆ. ಹೀಗೆ ಸಿದ್ಧವಾಗಿ ಬಂದವರನ್ನು ಒಂದೆಡೆ ಸೇರಿಸಿ ಅವರಿಗೆ ವೋಚರ್‌ ನೀಡಲಾಗುವುದು, ಈ ವೋಚರ್‌ನ ಮೂಲಕ ಅವರು ಟಿಕೆಟ್‌ ಕೌಂಟರ್‌ನಲ್ಲಿ ಮಕ್ಕಳ ಟಿಕೆಟ್‌ ಪಡೆಯಬಹುದು.
 
ಇದಷ್ಟೇ ಅಲ್ಲದೇ ನವೆಂಬರ್ 14 ರಂದು, ಚಿತ್ರಕಲಾ ಸ್ಪರ್ಧೆ, ಡೋನಟ್ ಅನ್ನು ಕ್ರೀಮ್ ಮಾಡಿ, ಕಪ್ಕೇಕ್ ಅನ್ನು ಕ್ರೀಮ್ ಮಾಡಿ, ಮುಂತಾದ ಮನರಂಜನಾ ಚಟುವಟಿಕೆಗಳನ್ನು ಸಹ ಆಯೋಜಿಸಲಾಗಿದ್ದು, ಗೆದ್ದವರಿಗೆ ಬಹುಮಾನವಿರಲಿದೆ. ಚಟುವಟಿಕೆಗಳಿಗೆ ಅಗತ್ಯವಿರುವ ಎಲ್ಲಾ ಅಗತ್ಯ ವಸ್ತುಗಳನ್ನು ವಂಡರ್ಲಾ ಒದಗಿಸಲಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments