Webdunia - Bharat's app for daily news and videos

Install App

ಕುಗ್ರಾಮದಲ್ಲಿ ಅನಾವರಣಗೊಂಡ ಶಿಕ್ಷಕರ 'ಸಾಕ್ಷಿ' ಪ್ರಜ್ಞೆ

Webdunia
ಗುರುವಾರ, 3 ನವೆಂಬರ್ 2016 (16:20 IST)
ಹೊನ್ನಾವರ: ಧನ ಸಂಪಾದನೆಯೇ ಮುಖ್ಯವಾಗಿರುವ ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಮಕ್ಕಳ ಹೆಸರು ಮುಂದಿಟ್ಟುಕೊಂಡು ಹಣ ಪೀಕುವವರಿಗೇನೂ ಬರವಿಲ್ಲ. ಅದರಲ್ಲೂ ಬೇಸಿಗೆ ಶಿಬಿರ, ರಜಾ ಶಿಬಿರವೆಂದು ಹಲವು ಬಗೆಯಲ್ಲಿ ಪಾಲಕರ ಜೇಬನ್ನು ಕತ್ತರಿಸುತ್ತಾರೆ. ಇದಕ್ಕೆ ಅಪವಾದವೆಂಬಂತೆ ಇಲ್ಲೊಂದು ವಿಶೇಷ ಹಾಗೂ ವಿಭಿನ್ನ ಶಿಬಿರ ನಡೆದಿದ್ದು ಸಮುದಾಯದ ಪ್ರಶಂಸೆಗೆ ಪಾತ್ರವಾಗಿದೆ.

 
ಈ ವಿಶೇಷ ರಜಾ ಶಿಬಿರ ನಡೆದದ್ದು ಸಹ್ಯಾದ್ರಿಯ ತಪ್ಪಲು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕುಗ್ರಾಮವಾದ ವಂದೂರಿನಲ್ಲಿ. ಅಂದಹಾಗೆ ಈ ಶಿಬಿರ ಆಯೋಜಿಸಿದ್ದು ಖಾಸಗಿ ಸಂಘ-ಸಂಸ್ಥೆಗಳು ಎಂದು ಭಾವಿಸಿದರೆ ಅದು ನಮ್ಮ ತಪ್ಪು ಕಲ್ಪನೆ. ಏಕೆಂದರೆ, ಪ್ರತಿನಿತ್ಯ ಬೆಳಗ್ಗೆ ಎದ್ದು ಶಾಲೆಗೆ ಹೋಗಿ ಕರ್ತವ್ಯ ನಿರ್ವಹಿಸುವ ಸರಕಾರಿ ಶಿಕ್ಷಕರೇ ಆ ಶಿಬಿರದ ಆಯೋಜಕರು. ಇದು ಆಶ್ಚರ್ಯವಾದರೂ ಸತ್ಯ.
 
ಒಂದು ದಿನ ರಜಾ ದೊರೆತರೆ ಸಾಕು ಗಮನವೆಲ್ಲಾ ವೈಯಕ್ತಿಕ ಕೆಲಸಗಳತ್ತ ಹರಿಯುತ್ತದೆ. ಹೆಂಡತಿ, ಮಕ್ಕಳು, ಮನೆ ಎನ್ನುತ್ತ ಅವರ ಜತೆಯೇ ಕಾಲ ಕಳೆಯಲು ಯೋಚಿಸುತ್ತಾರೆ. ಹೀಗಿದ್ದಾಗ ಕರ್ತವ್ಯದ ನಡುವೆಯೇ ದೊರೆತ ಒಂದಿಷ್ಟು ರಜಾ ದಿನಗಳನ್ನು ಮಕ್ಕಳಿಗಾಗಿ, ಅವರ ಏಳ್ಗೆಗಾಗಿ ಮೀಸಲಿಟ್ಟು ತಮ್ಮಲ್ಲಿನ ಸಂಪನ್ಮೂಲ ಬೀಜಗಳನ್ನು ಅವರಲ್ಲಿ ಬಿತ್ತಿ ಬೆಳೆಯುವ ಕಾರ್ಯದಲ್ಲಿ `ಸಾಕ್ಷಿ ಬಳಗ' ತನ್ನನ್ನು ತೊಡಗಿಸಿಕೊಂಡಿದ್ದು ಸ್ತುತ್ಯರ್ಹವೆ.
 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಂದೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ `ಚಿಲುಮೆ ಮಕ್ಕಳ ರಜಾ ಶಿಬಿರ'ಕ್ಕೆ ಹಿರಿಯ ಸಾಹಿತಿ ಶ್ರೀವೆಂಬ ವಂದೂರು ಚಾಲನೆ ನೀಡಿದರು. ಆಟ ಪಾಠವಾಗುವ, ಪಾಠ ಆಟವಾಗುವ ಕ್ರಿಯೆ ಕಲಿಕೆಯನ್ನು ಸಹಜಗೊಳಿಸುತ್ತದೆ. ಇಂಥ ಪ್ರಯತ್ನ ಸರಕಾರಿ ಶಾಲೆ ಶಿಕ್ಷಕರಿಂದ ನಡೆಯುತ್ತಿರುವುದು ಸಂತಸದ ವಿಷಯ ಎಂದು ಅಭಿಪ್ರಾಯಪಟ್ಟರು.
 
ಪ್ರತಿಭೆ ಅನಾವರಣ
ಅಕ್ಟೋಬರ್ ರಜೆಯಲ್ಲಿ ಐದು ದಿನಗಳ ಕಾಲ ನಡೆದ ಈ ರಜಾ ಶಿಬಿರ ಹೊಸತನಕ್ಕೆ ನಾಂದಿ ಹಾಡಿತು. ದೈನಂದಿನ ವಸ್ತು ಖರೀದಿಸಬೇಕೆಂದರೆ ಐದಾರು ಕಿಮೀ ದೂರಕ್ಕೆ ಪಯಣಿಸಬೇಕಾದಂತ ಕುಗ್ರಾಮಕ್ಕೆ, ಚೈತನ್ಯದ ಚಿಲುಮೆಯಂತೆ ಬೆಳಗ್ಗೆ ಎದ್ದು ಶಿಕ್ಷಕರೇ ಓಡೋಡಿ ಬರುತ್ತಿದ್ದರು. ಶಿಬಿರದಲ್ಲಿ ಮಕ್ಕಳು ಹೊಸ-ಹೊಸ ವಿಷಯಗಳನ್ನು ಕಲಿಯುವುದರ ಮೂಲಕ ನೈಜ ಪ್ರತಿಭೆಯನ್ನು ಅನಾವರಣಗೊಳಿಸಿದ್ದರು. ಶಿಕ್ಷಕರು ಅವರಲ್ಲಿ ಸುಪ್ತವಾಗಿ ಅಡಗಿರುವ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಆತ್ಮವಿಶ್ವಾಸ ತುಂಬಿದರು. 
 
ಆಟ, ಶಿಶುಗೀತೆ, ಕ್ರಾಫ್ಟ್, ರಂಗೋಲಿ, ಓದು, ಬರವಣಿಗೆ, ಸಂಗೀತ, ಯಕ್ಷಗಾನ, ನಾಟಕ, ನೀತಿಕಥೆ, ವ್ಯಕ್ತಿತ್ವ ವಿಕಸನ, ವಿವಿಧ ಬಗೆಯ ಕ್ರೀಡೆ. ಹೀಗೆ ನಾನಾ ವಿಷಯಗಳ ಕುರಿತು ಒಬ್ಬೊಬ್ಬ ಶಿಕ್ಷಕರು ಮಕ್ಕಳಿಗೆ ತರಬೇತಿ ನೀಡಿದರು. ಮಕ್ಕಳು ಕೂಡಾ ರಜಾ ದಿನವೆಂದು ಬಂಧು-ಬಳಗದ ಮನೆಗೆ ತೆರಳದೆ ಅತ್ಯುತ್ಸಾಹದಿಂದ ಐದು ದಿನಗಳ ಶಿಬಿರದಲ್ಲಿ ಪಾಲ್ಗೊಂಡಿದ್ದರು.
 
`ಕೊಟ್ಟು ಪಡೆಯುವ ಗುಣಕ್ಕೆ  ಕಷ್ಟ-ನಷ್ಟವಿಲ್ಲ' ಎನ್ನುವ ಸಂದೇಶ ಸಾರಿದ `ಮಕ್ಕಳ ಚಿಲುಮೆ ಶಿಬಿರ'ದಲ್ಲಿ ಶಿಕ್ಷಕರು ಮುಕ್ತ ಮನಸ್ಸಿನಿಂದ ಪಾಲ್ಗೊಂಡು ತಮ್ಮಲ್ಲಿರುವ ವಿಶೇಷ ಜ್ಞಾನವನ್ನು ಮಕ್ಕಳಲ್ಲಿ ಹಚ್ಚಿಕೊಂಡು, ತಮ್ಮ ಜ್ಞಾನವನ್ನು ಇನ್ನಷ್ಟು ವೃದ್ಧಿಸಿಕೊಂಡರು. ಅಲ್ಲದೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸ್ವ-ಇಚ್ಛೆಯಿಂದ ಭಾಗವಹಿಸಿ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಶಿಕ್ಷಕ ವೃತ್ತಿಯ ಘನತೆಯನ್ನು ಎತ್ತಿ ಹಿಡಿದರು. ಕ್ರಿಯಾಶೀಲ ಶಿಕ್ಷಕ ಜನಾರ್ಧನ ಹರನೀರು ಈ ಶಿಬಿರದ ರೂವಾರಿಯಾಗಿದ್ದು, ಅವರಿಗೆ ಅನೇಕ ಶಿಕ್ಷಕರು ಬೆಂಬಲವಾಗಿ ನಿಂತು ಶಿಬಿರದ ಊಟ, ಉಪಹಾರದ ಖರ್ಚು ವೆಚ್ಚ ನೋಡಿಕೊಂಡಿದ್ದರು. ಯಾವೊಂದು ಶಿಕ್ಷಕ ಸಂಘದಲ್ಲಿಯೂ ಗುರುತಿಸಿಕೊಳ್ಳದ ಅವರು, ಸಾಹಿತ್ಯ, ಓದು, ಬರವಣಿಗೆ ಎನ್ನುತ್ತ ಮಕ್ಕಳ ಶ್ರೇಯೋಭಿವೃದ್ಧಿಗಾಗಿಯೇ ಶ್ರಮಿಸುವ ಆದರ್ಶ ಶಿಕ್ಷಕ. ಹಾಗೂ ಪ್ರಚಾರದ ಗೀಳಿಲ್ಲದೆ ಎಲೆಮರೆಕಾಯಿಯಾಗಿಯೇ ಶಿಕ್ಷಕ ವೃತ್ತಿಯಲ್ಲಿ ತೊಡಗಿಕೊಂಡಿರುವ ಅವರ ಬದುಕು ಇಡೀ ಶಿಕ್ಷಕ ಸಮೂಹಕ್ಕೆ ಮಾದರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಿಢೀರ್ ಕೇಂದ್ರ ಸಚಿವರನ್ನು ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್‌, ಕಾರಣ ಹೀಗಿದೆ

ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ, ಬಾಲಕಿ ಮೇಲೆ ಅತ್ಯಾಚಾರ: 20ವರ್ಷ ಜೈಲು

ಮೊದಲ ಹಂತದಲ್ಲೇ ರಾಜ್ಯದಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭ: ಮಧು ಬಂಗಾರಪ್ಪ

ಏರ್‌ ಇಂಡಿಯಾ ವಿಮಾನ ಅಪಘಾತ: ಕೊನೆಗೂ ಪ್ರಾಥಮಿಕ ವರದಿ ಸಿದ್ದ, 2 ಪುಟಗಳ ವರದಿ ಸಲ್ಲಿಕೆ

ಹುಬ್ಬಳ್ಳಿ- ಧಾರವಾಡದ 65 ಪೊಲೀಸ್ ಅಧಿಕಾರಿಗಳಿಗೆ ಬೊಜ್ಜು ಕರಗಿಸುವ ಟ್ರೈನಿಂಗ್,4ರಿಂದ 11ಕೆಜಿ ಇಳಿಕೆ

ಮುಂದಿನ ಸುದ್ದಿ
Show comments