Webdunia - Bharat's app for daily news and videos

Install App

ಪೋಷಕರ ಕನಸು ಆಸೆಗಳಿಗೆ ಬೆಂಕಿ

Webdunia
ಗುರುವಾರ, 2 ಮಾರ್ಚ್ 2023 (18:10 IST)
ಮಕ್ಕಳನ್ನ ಚೆನ್ನಾಗಿ ಓದಿಸಬೇಕು ಒಳ್ಳೆ ಶಿಕ್ಷಣ ನೀಡಿ ಐಎಎಸ್ ಐಪಿಎಸ್ ಹುದ್ದೆಗೇರಿಸಬೇಕು ಅಂತಾ ಅದೇಷ್ಟೋ ಪೋಷಕರು ಹಗಲಿರಳು ಕಷ್ಟಪಟ್ಟು ದುಡಿದು ಲಕ್ಷ ಲಕ್ಷ ಶುಲ್ಕ ಕಟಿರ್ತಾರೆ..  ಮಕ್ಕಳನ್ನ ಹೈಟೆಕ್ ಶಾಲೆ ಸಿಬಿಎಸ್ಇ ಸಿಲೆಬಸ್ ಅಂದ್ರೆ ಹಿಂದೆ ಮುಂದೆ ನೋಡ್ದೆ ಪ್ರತಿಷ್ಠತೆಯನ್ನೇ ಪಣಕ್ಕಿಟ್ಟು ಮಕ್ಕಳ ದಾಖಲಾತಿ ಮಾಡಿಸ್ತಾರೆ.. ಆದ್ರೆ ಲಕ್ಷ ಲಕ್ಷ ಶುಲ್ಕ ಕಟ್ಟಿಸಿಕೊಂಡ ಶಾಲೆಗಳು ಪೋಷಕರ ಕನಸು ಆಸೆಗಳಿಗೆ ಬೆಂಕಿ ಹಚ್ಚಲು ಮುಂದಾಗಿವೆ ರಾಜ್ಯದಲ್ಲಿ ಖಾಸಗಿ ಶಾಲೆಗಳು ಆಡಿದ್ದೆ ಆಟ ಮಾಡಿದ್ದೆ ರೂಲ್ಸ್ ಎನ್ನುವಂತಾಗಿದ್ದು ಪೋಷಕರು ಹೈರಾಣಾಗಿದ್ದಾರೆ.
 
ಹೈಟೆಕ್ ಅ್ಯಂಡ್ ಇಂಟರ್ ನ್ಯಾಷನಲ್ ಸಿಬಿಎಸ್ ಇ ಸಿಲೆಬಸ್ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೇಕು ಲಕ್ಷ ಲಕ್ಷ ಫೀಸ್ ಇದ್ರೂ ಪರವಾಗಿಲ್ಲ ಅಂತಾ ಹಿಂದೆ ಮುಂದೆ ನೋಡ್ದೆ ಶಾಲೆಗೆ ಮಕ್ಕಳನ್ನ ಸೇರಿಸಿರ್ತಾರೆ ಆದ್ರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಕೊವಿಡ್ ಬಳಿಕ ಒಂದಲ್ಲ ಒಂದು ಹೊಸ ಹೊಸ ಕಿರಿಕ್ ಮಾಡ್ತೀದ್ದು ಪೋಷಕರು ಪುಲ್ ಹೈರಾಣಾಗಿ ಹೋಗಿದ್ದಾರೆ.
 
ಸಿಲಿಕಾನ್ ಸಿಟಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳದ್ದು ಆಡಿದ್ದೆ ಆಟ ಮಾಡಿದ್ದೆ ರೂಲ್ಸ್  ಅಂತಿದ್ದು  ಶಿಕ್ಷಣ ಇಲಾಖೆಯ ನೋಟಿಸ್ಗೆ ಕವಡೆ ಕಾಸಿನ ಬೆಲೆ  ನೀಡ್ತೀಲ್ಲ ಹೌದು ಶಿಕ್ಷಣ ಇಲಾಖೆ ಅನಧಿಕೃತ ಶಾಲೆ ಅಂತಾ ನೂರಾರು ಶಾಲೆಗಳನ್ನ ಗುರುತಿಸಿ ಕಳೆದ ಒಂದು ವಾರದ ಹಿಂದೆ ನೋಟಿಸ್ ನೀಡಿದೆ .. ನೋಟಿಸ್ ನೀಡಿದ್ರು ಖಾಸಗಿ ಶಾಲೆಗಳು ಮಾತ್ರ ಡೋಂಟ್ ಕೇರ್ ಅಂತಿವೆ.. ಇಲಾಖೆ ನೋಟಿಸ್ ನೀಡಿದ್ರೂ ಶಾಲೆ ವಿರುದ್ಧ ಎಫ್ ಐ ಆರ್ ದಾಖಲಾದ್ರು ಮತ್ತೆ  ಪೋಷಕರಿಗೆ ಸಿಬಿಎಸ್ ಇ ಶಾಲೆ ಅಂತಾ ವಂಚನೆಗೆ ಮುಂದಾಗಿವೆ.. ಶಿಕ್ಷಣ ಇಲಾಖೆ ನೋಟಿಸ್ ನೀಡಿ ಪೋಷಕರ ವಂಚನೆ ಆರೋಪದಡಿ ಎಫ್ ಐ ಆರ್ ದಾಖಲು ಮಾಡಿದ್ರು ಪೊಷಕರಿಗೆ ಮತ್ತೆ ಸುಳ್ಳು ಮಾಹಿತಿ ನೀಡಿ ರಾಜ್ಯಪಠ್ಯಕ್ರಮ ಶಾಲೆ ಇದ್ರೂ ಪ್ರಸಕ್ತ ಶೈಕ್ಷಣಿಕ ವರ್ಷದ ದಾಖಲಾತಿ ವೇಳೆ ಪೋಷಕರಿಗೆ ಸಿಬಿಎಸ್ ಇ ಮಾನ್ಯೇತೆ ಇದೆ ಅಂತಾ ಹೇಳಿ ಕಳೆದ ಬಾರಿಗಿಂತ ಶೇ 10 ಶುಲ್ಕ ಏರಿಕೆ ಮಾಡಿ ದಾಖಲಾತಿಗೆ ಮುಂದಾಗಿದೆ.
 
 
 ಖಾಸಗಿ ಶಾಲೆಗಳ ಕಳ್ಳಾಟದ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ರೆ ಶಾಲಾ ದಾಖಲಾತಿಗೂ ಮೊದಲೆ ಸಿಬಿಎಸ್ ಇ ಮಾನ್ಯತೆ ಸಿಕ್ಕಿದ್ರೆ ಮಾತ್ರ ಸಿಬಿಎಸ್ ಇ ಅಂತಾ ಹೇಳಿ ಅಡ್ಮಿಷನ್ ಮಾಡಬೇಕು .. ಮುಂದೆ ಸಿಗುತ್ತೆ ಎರಡು ತಿಂಗಳಲ್ಲಿ ಸಿಗುತ್ತೆ ಅಂತಾ ದಾಖಲಾತಿ ಮಾಡಿಸುವುದು ಕಾನೂನೂ ಉಲ್ಲಂಘನೆ ಅಂತಾ ಹೇಳಿದ್ದಾರೆ.. ಇನ್ನೂ ಈ ರೀತಿಯ ಶಾಲಗಳ ವಿರುದ್ಧ ಕ್ರಮಕ್ಕೆ ಮುಂದಾಗ್ತೀವಿ ಅಂತಿದ್ದು ನೋಟಿಸ್ ನೀಡಿರುವ ಅನಧಿಕೃತ ಶಾಲೆಗಳ ಮುಂದೆ ಇಲಾಖೆ ಫ್ಲೆಕ್ಸ್ ಅಳವಡಿಸುತ್ತೆವೆ ಹಾಗೂ ಪತ್ರಿಕಾ ಪ್ರಕಟಣೆ ಹೊರಡಿಸಿ ಪೋಷಕರು ವಂಚನೆಗೆ ಒಳಗಾಗದಂತೆ ಎಚ್ಚರಿಕೆ ಕೊಡ್ತೀವಿ ಅಂತಿದ್ದಾರೆ.
 
 ಕೊನೆಗೆ ಎಚ್ಚೆತ್ತುಗೊಂಡ ಶಿಕ್ಷಣ ಇಲಾಖೆ ಅನಧಿಕೃತ ಶಾಲೆಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಮುಂದಾಗಿದೆ ಶಾಲೆಗಳ ಮುಂದೆ ಯಾವ ಪಠ್ಯಕ್ರಮ ಏನೆಲ್ಲ ಸೌಲಭ್ಯ ಅಂತಾ ಡಿಟೈಲ್ ಮಾಹಿತಿ ನೀಡುವ ಪ್ಲೆಕ್ಸ್ ಬ್ಯಾನರ್  ಅಳವಡಿಸಿ ಪೋಷಕರನ್ನ ಜಾಗೃತಿ ಮಾಡಲು ಮುಂದಾಗಿದೆ. ಆದ್ರೆ ಇದು ಎಷ್ಟರ ಮಟ್ಟಿಗೆ ಜಾರಿಯಾಗತ್ತೆ ಅಂತಾ ಕಾದು ನೋಡಬೇಕಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮ ಮೆಟ್ರೋ ಹಳದಿ ಲೈನ್ ನಲ್ಲಿ ಇದುವರೆಗೆ ಪ್ರಯಾಣಿಸಿದವರೆಷ್ಟು, ಸಿಎಂ ಮಾಹಿತಿ ಇಲ್ಲಿದೆ

ಬಿಕ್ಲು ಶಿವು ಮರ್ಡರ್ ಪ್ರಕರಣದಲ್ಲಿ ಶಾಸಕ ಭೈರತಿ ಬಸವರಾಜ್ ಗೆ ರಿಲೀಫ್

ಗವಿಸಿದ್ದಪ್ಪ ಕುಟುಂಬದವರಿಗೂ 50 ಲಕ್ಷ ರೂ ಕೊಡಿ: ವಿಜಯೇಂದ್ರ ಆಗ್ರಹ

ಮತಗಳ್ಳತನ ಆರೋಪ ಹೊರಿಸಿದ ಕಾಂಗ್ರೆಸ್ ಗೆ ಸೋನಿಯಾ ಗಾಂಧಿ ದಾಖಲೆ ತೋರಿಸಿದ ಬಿಜೆಪಿ

17ರಂದು ಧರ್ಮಸ್ಥಳಕ್ಕೆ ಭೇಟಿ: ಬಿ.ವೈ.ವಿಜಯೇಂದ್ರ

ಮುಂದಿನ ಸುದ್ದಿ
Show comments