Select Your Language

Notifications

webdunia
webdunia
webdunia
webdunia

ಬೆದರಿಕೆ ದಿಕ್ಕರಿಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ: ಜೀವಂತ ಸುಟ್ಟ ದುಷ್ಕರ್ಮಿಗಳು

ಬೆದರಿಕೆ ದಿಕ್ಕರಿಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ: ಜೀವಂತ ಸುಟ್ಟ ದುಷ್ಕರ್ಮಿಗಳು
ಲಖನೌ , ಶನಿವಾರ, 7 ಮಾರ್ಚ್ 2015 (09:12 IST)
10ನೇ ತರಗತಿ ಪರೀಕ್ಷೆಗೆ ಹಾಜರಾದಳೆಂದು ಕುಪಿತಗೊಂಡ ದಲಿತ ಸಮುದಾಯದ ಗುಂಪೊಂದು  17 ವರ್ಷದ ವಿದ್ಯಾರ್ಥಿನಿಯೋರ್ವಳನ್ನು ಜೀವಂತವಾಗಿ ಸುಟ್ಟು ಹಾಕಿದ ಘಟನೆ ಉತ್ತರ ಪ್ರದೇಶದ ಖುಷಿನಗರ ಜೆಲ್ಲೆಯ ಪತ್ಥಾರ್ ದೇವದ ಬಳಿಯ ದಿವಾನ್ ತೋಲ ಗ್ರಾಮದಲ್ಲಿ ನಡೆದಿದೆ. 
 
ಈ ಸಂಬಂಧ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರನ್ನು ತಂದೆ ರಾಂ ಪ್ರವೇಶ್ ಯಾದವ್ ಸೇರಿದಂತೆ ಆತನ ಮಕ್ಕಳಾದ ಧೀರಜ್ ಯಾದವ್, ಅರವಿಂದ್ ಮತ್ತು ದಿನೇಶ್ ಎಂದು ತಿಳಿದು ಬಂದಿದೆ. 
 
ಹಿನ್ನೆಲೆ: ಗುಡಿಸಲಿನಲ್ಲಿ ಅಡುಗೆ ಕೆಲಸದಲ್ಲಿ ನಿರತಳಾಗಿದ್ದ ಬಾಲಕಿಯನ್ನು ಹೊರಗೆಳೆದ ಈ ಆರೋಪಿಗಳು, ಆಕೆಯ ಮೇಲೆ ಏಕಾಏಕಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಆದರೆ ಕೊನೆಯುಸಿರೆಳೆಯುವ ಮುನ್ನವೇ ವಿದ್ಯಾರ್ಥಿನಿ, ಪೊಲೀಸರಿಗೆ ಪ್ರಕರಣ ಸಂಬಂಧ ನಿರ್ದಿಷ್ಟ ಹೇಳಿಕೆ ನೀಡಿದ್ದಾಳೆ ಎಂದು ತಿಲಿದು ಬಂದಿದೆ. 
 
ಪೊಲೀಸರೊಂದಿಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿನಿ, ಪ್ರಕರಣದಲ್ಲಿ ಧೀರಜ್ ಯಾದವ್ ಪ್ರಮುಖ ಆರೋಪಿಯಾಗಿದ್ದು, ಈತನ ಸಹೋದರರು ಪ್ರತಿವರ್ಷ ಅನುತ್ತೀರ್ಣರಾಗುತ್ತಿದ್ದರು. ಆದರೆ ನಾನು ಪ್ರತಿ ವರ್ಷ ಉತ್ತೀರ್ಣಳಾಗುತ್ತಿದೆ. ನನ್ನ ಮುಂದಿನ ವಿದ್ಯಾಭ್ಯಾಸವನ್ನು ಸಹಿಸದ ಇವರು, ಈ ಹಿಂದೆ ನನಗೆ ಪರೀಕ್ಷೆಗೆ ಹಾಜರಾಗದಂತೆ ಬೆದರಿಕೆ ಹಾಕಿದ್ದರು. ಆದರೆ ನಾನು ಪರೀಕ್ಷೆಗೆ ಹಾಜರಾಗಿದ್ದೆ. ಅಲ್ಲದೆ ನನ್ನ ಫೋಟೋವನ್ನು ತೆಗೆದು ಬ್ಲಾಕ್ ಮೇಲ್ ಮಾಡುತ್ತಿದ್ದರು. ಇದಕ್ಕೆ ಜಗ್ಗದ್ದಕ್ಕೆ ಬೆಂಕಿ ಹಚ್ಚಿದರು ಎಂದಿದ್ದಾಳೆ.

Share this Story:

Follow Webdunia kannada