Webdunia - Bharat's app for daily news and videos

Install App

ಬೇಲೂರು ಭಾಗದ ಜನರ ನೆಮ್ಮದಿ ಕಸಿದಿದ್ದ ಪುಂಡಾನೆಗಳ ಹಾವಳಿಗೆ ಕೊನೆಗೂ ಬ್ರೇಕ್‌: ಮಕ್ನಾ ಆನೆಯೂ ಸೆರೆ

Sampriya
ಭಾನುವಾರ, 23 ಮಾರ್ಚ್ 2025 (16:51 IST)
Photo Courtesy X
ಹಾಸನ: ಬೇಲೂರಿನ ಭಾಗದ ಜನರ ನೆಮ್ಮದಿ ಕೆಡಿಸಿದ್ದ ಪುಂಡಾನೆಗಳ ಹಾವಳಿಗೆ ಕೊನೆಗೂ ಬ್ರೇಕ್‌ ಬಿದ್ದಿದೆ. ಕಳೆದ ಭಾನುವಾರದಿಂದ ಆರಂಭಗೊಂಡಿದ್ದ ಮೂರು ಪುಂಡಾನೆಗಳ ಸೆರೆ ಕಾರ್ಯಾಚರಣೆ ಇಂದು ಮತ್ತೊಂದು ಕಾಡಾನೆಯನ್ನು ಸೆರೆ ಹಿಡಿಯುವ ಮೂಲಕ ಅಂತ್ಯಗೊಂಡಿದೆ.

ನಾಲ್ವರು ಕಾಡಾನೆ ದಾಳಿಯಿಂದ ಒಂದು ತಿಂಗಳ ಅಂತರದಲ್ಲಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಮೂರು ಪುಂಡಾನೆಗಳ ಸೆರೆ ಹಿಡಿದು ಸ್ಥಳಾಂತರ ಮಾಡಲು ಅನುಮತಿ ನೀಡಿತ್ತು. ಅದರಂತೆ ಏಳು ಸಾಕಾನೆಗಳು, ಇನ್ನೂರಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿ, ವೈದ್ಯರುಗಳೊಂದಿಗೆ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ.

ಸೆರೆಹಿಡಿದ ಆನೆಗಳಲ್ಲಿ ಒಂದನ್ನು ಚಾಮರಾಜನಗರದ ಮಲೆಮಹದೇಶ್ವರ ಅರಣ್ಯಕ್ಕೆ ಬಿಟ್ಟರೆ, ಉಳಿದ ಎರಡು ಕಾಡಾನೆಗಳನ್ನು ಸಕ್ಕರೆಬೈಲು ಕ್ಯಾಂಪ್‍ಗೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಮಲೆನಾಡು ಭಾಗದ ಜನರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

ಬೇಲೂರಿನ ಕಾನನಹಳ್ಳಿ ಗ್ರಾಮದಿಂದ ಮೂರು ಪುಂಡಾನೆಗಳ ಸೆರೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಮೊದಲ ದಿನದ ಕಾರ್ಯಾಚರಣೆಯಲ್ಲಿ ಪುಂಡಾನೆಯೊಂದನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿತ್ತು. ಮಂಗಳವಾರದಿಂದ ವಿಕ್ರಾಂತ್ ಕಾಡಾನೆ ಸೆರೆ ಆರಂಭಿಸಿ, ನಿರಂತರ ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ವಾಟೀಹಳ್ಳಿ ಬಳಿ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆಹಿಡಿಯಲಾಯಿತು. ಇಂದು ಮುಂಜಾನೆ ಜನ-ಜಾನುವಾರುಗಳು, ಬೈಕ್‍ಗಳ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಸಿದ್ದ ಮಕ್ನಾ ಕಾಡಾನೆಯನ್ನು ಸೆರೆ ಕಾರ್ಯಾಚರಣೆ ಆರಂಭಿಸಲಾಗಿತ್ತು.

ಮುಂಜಾನೆಯೇ ಇಟಿಎಫ್ ಸಿಬ್ಬಂದಿ ಮಕ್ನಾ ಕಾಡಾನೆ ಇದ್ದ ಸ್ಥಳವನ್ನು ಪತ್ತೆ ಹಚ್ಚಿದ್ದರು. ಸಕಲೇಶಪುರದ ಹೆಬ್ಬನಹಳ್ಳಿ ಬಳಿಯಿಂದ ಸಾಕಾನೆಗಳೊಂದಿಗೆ ಕಾರ್ಯಾಚರಣೆ ಆರಂಭಿಸಿ, ಆನೆಗೆ ಅರವಳಿಕೆ ನೀಡಿ ಸೆರೆಹಿಡಿಯಲಾಯಿತು. ಅದನ್ನು ಸಕ್ಕರೆಬೈಲು ಆನೆ ಶಿಬಿರಕ್ಕೆ ಕೊಂಡೊಯ್ಯಲಾಯಿತು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ
Show comments